ಸಾರಾಂಶ
ಮತದಾನ ನಮ್ಮ ರಾಷ್ಟ್ರೀಯ ಕರ್ತವ್ಯ. ಶೇ.100 ಮತದಾನಕ್ಕೆ ಬದ್ಧರಾಗಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಕರೆ ನೀಡಿದರು.
’ಜಾಗೃತ ಮತದಾರರ ಆಂದೋಲನ’ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮತದಾನ ನಮ್ಮ ರಾಷ್ಟ್ರೀಯ ಕರ್ತವ್ಯ. ಶೇ.100 ಮತದಾನಕ್ಕೆ ಬದ್ಧರಾಗಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಕರೆ ನೀಡಿದರು.ಹಿರೇಮಗಳೂರಿನಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಶೃಂಗೇರಿ ವಿಭಾಗೀಯ ಸಮಿತಿ ಆಯೋಜಿಸಿದ್ದ ’ಜಾಗೃತ ಮತದಾರರ ಆಂದೋಲನ’ ಉದ್ಘಾಟಿಸಿ ಮಾತನಾಡಿದರು.ನಮ್ಮ ಮತ ದೇಶದ ವಿಕಾಸಕ್ಕೆ ಪೂರಕವಾಗಬೇಕು. ಸುರಕ್ಷಿತ ಭಾರತದ ನಿರ್ಮಾಣಕ್ಕೆ ಶೇ.100ರ ಮತದಾನ ಆಗಲೇಬೇಕು. ನಮಗೆ ಎಂತಹ ಸರ್ಕಾರ ಬೇಕು ಎಂಬುದನ್ನು ಯೋಚಿಸಿ ನಿರ್ಧರಿಸುವ ಅವಕಾಶ ಒದಗಿ ಬಂದಿದೆ. ಭ್ರಷ್ಟಾಚಾರ ರಹಿತ ಆಡಳಿತ, ಸಮರ್ಥ ನಾಯಕತ್ವ, ರಾಷ್ಟ್ರೀಯ ಸುರಕ್ಷತೆಗೆ ಆದ್ಯತೆ, ಜನತೆಗೆ ಸ್ವಾಭಿಮಾನದ ಬದುಕು, ಸದೃಢ ಆರ್ಥಿಕತೆ, ಕಟ್ಟಕಡೆ ವ್ಯಕ್ತಿ ಸೇರಿದಂತೆ ಎಲ್ಲರ ವಿಕಾಸಕ್ಕೆ ಪೂರಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸದವಕಾಶ ಕಳೆದುಕೊಳ್ಳಬಾರದು ಎಂದ ಹಿರೇಮಗಳೂರು ಕಣ್ಣನ್, ಯುವಕರು, ಮಹಿಳೆಯರು ಆದ್ಯತೆ ಮೇರೆಗೆ ಮತ ಚಲಾಯಿಸಬೇಕೆಂದು ಕರೆ ನೀಡಿದರು.ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿ, ಮತ ಮಾರಾಟಕ್ಕಲ್ಲ, ಮತದಾನದ ನಮ್ಮ ಪವಿತ್ರ ಕರ್ತವ್ಯ. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದಂತೆ ನಿಶ್ಚಯ ಮಾಡಬೇಕು. ನಮ್ಮ ಸುತ್ತಲಿನವರನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸಬೇಕು. ಚುನಾವಣೆ ದಿನ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.ಎಲ್ಲರನ್ನೂ ಅನುಮಾನದಿಂದ ನೋಡುವುದರಿಂದ ಪ್ರಯೋಜನವಿಲ್ಲ. ಸುತ್ತಲಿನ ಒಳ್ಳೆಯ ಬದಲಾವಣೆಗಳನ್ನು ಗಮನಿಸುವ ದೃಷ್ಟಿ ನಮ್ಮದಾಗಬೇಕು. ನೋಟ ಬೇಡ. ಇರುವ ಅಭ್ಯರ್ಥಿಗಳಲ್ಲೆ ಉತ್ತಮರನ್ನು ಆರಿಸೋಣ. ನೋಟಾ ಒತ್ತಿದರೆ ನಮ್ಮ ಮತ ಲೆಕ್ಕಕ್ಕೆ ಬರುವುದಿಲ್ಲ. ಚುನಾವಣೆ ರದ್ಧಾಗುವುದೂ ಇಲ್ಲ. ಆದರೆ, ಅತಿಕೆಟ್ಟ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ. ಅದು ಮತ್ತಷ್ಟು ಅಪಾಯಕಾರಿ ಇರುವವರಲ್ಲಿ ಉತ್ತಮರನ್ನು ಆರಿಸುವುದೇ ನಮ್ಮ ಆಯ್ಕೆ ಎಂದು ಹೇಳಿದರು.ಮತದಾನದ ಮಹತ್ವ ಸಾರುವ ಕರಪತ್ರ ಲೋಕಾರ್ಪಣೆಗೊಳಿಸಲಾಯಿತು. ಎಚ್.ಗೋಪಿನಾಥ ಮತ್ತು ವೈಷ್ಣವಸಿಂಹ, ಪದ್ಮಾ ಚಂದ್ರಶೇಖರ್, ಜಯಾ ವಿವೇಕ್, ಶೈಲಾ, ಸುಮಿತ್ರಮ್ಮ ಪಾಲ್ಗೊಂಡಿದ್ದರು.18 ಕೆಸಿಕೆಎಂ 1ಹಿರೇಮಗಳೂರಿನಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸಿದ್ದ ’ಜಾಗೃತ ಮತದಾರರ ಆಂದೋಲನ’ದಲ್ಲಿ ಹಿರೇಮಗಳೂರು ಕಣ್ಣನ್ ಅವರು ಕರಪತ್ರವನ್ನು ಲೋಕಾರ್ಪಣೆಗೊಳಿಸಿದರು.