ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನ 20ನೇ ವಾರ್ಷಿಕೋತ್ಸವ ವಿಶೇಷ ಪೂಜೆ

| Published : May 29 2024, 12:56 AM IST

ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನ 20ನೇ ವಾರ್ಷಿಕೋತ್ಸವ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದ 20ನೇ ವಾರ್ಷಿಕೋತ್ಸವ ಮಂಗಳವಾರ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನೂರಾರು ಭಕ್ತರ ಸಮುಖದಲ್ಲಿ ಸಂಪನ್ನಗೊಂಡಿತು. ಮಧ್ಯಾಹ್ನ ಮಹಾಮಂಗಳಾರತಿ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗದ ನಂತರ ನೆರೆದಿದ್ದ ನೂರಾರು ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂರ್ಪಣೆ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಇಲ್ಲಿನ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದ 20ನೇ ವಾರ್ಷಿಕೋತ್ಸವ ಮಂಗಳವಾರ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ನೂರಾರು ಭಕ್ತರ ಸಮುಖದಲ್ಲಿ ಸಂಪನ್ನಗೊಂಡಿತು. ಉತ್ಸವ ಅಂಗವಾಗಿ ದೇವಾಲಯವನ್ನು ವಿದ್ಯುದ್ದೀಪ ಹಾಗೂ ಬಣ್ಣದ ಹೂಗಳಿಂದ ಅಲಂಕಾರಗೊಳಿಸಲಾಗಿತ್ತು.

ದೇವಾಲಯದ ಪ್ರಧಾನ ಅರ್ಚಕ ಮಹಾಬಲ ಭಟ್ ಹಾಗೂ ಹಿರಿಯ ಅರ್ಚಕ ಹಾ.ಮಾ.ಗಣೇಶ್ ಶರ್ಮ ನೇತೃತ್ವದಲ್ಲಿ ನಾಗಮಂಡಲದ ಅರ್ಚಕರಾದ ಸಂತೋಷ್ ಹೆಬ್ಬಾರ್, ರಾಘವೇಂದ್ರ ಭಟ್, ರವಿ ಭಟ್ ಬೆಳಗ್ಗೆ ದೇವರಿಗೆ ಶುದ್ಧಪೂಜೆ, ಪ್ರಾರ್ಥನೆ, ಪುಣ್ಯಾಹವಾಚನ ನೆರವೇರಿಸಿದರು.

ನಂತರ ಸುವಾಸಿನಿಯರ ಮೂಲಕ ಜಲಕುಂಭಗಳನ್ನು ಹರದೂರು ಹೊಳೆಯಿಂದ ತಂದು ದೇವರಿಗೆ ಅಭಿಷೇಕ ಮಾಡಲಾಯಿತು. ಬಳಿಕ ನವಗ್ರಹ ಹೋಮ ಪೂರ್ವಕ 9 ತೆಂಗಿನಕಾಯಿಗಳ ಗಣಹೋಮ, ಪೂರ್ಣಾಹುತಿಯ ನಂತರ ದೇವರಿಗೆ ಪಂಚಾಮೃತಾಭಿಷೇಕ, ಪೂರ್ವಕತವಕ, ಕಲಷಾಭಿಷೇಕ ಪೂರ್ವಕ ಮಹಾಪೂಜೆಯ ನಂತರ ಅಲಂಕಾರ, ವಿವಿಧ ಹೂವುಗಳ ಪೂಜೆಗಳು ನಡೆದವು.

ಮಧ್ಯಾಹ್ನ ಮಹಾಮಂಗಳಾರತಿ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗದ ನಂತರ ನೆರೆದಿದ್ದ ನೂರಾರು ಭಕ್ತರಿಗೆ ದೇವಾಲಯದ ವತಿಯಿಂದ ಅನ್ನಸಂರ್ಪಣೆ ಏರ್ಪಡಿಸಲಾಗಿತ್ತು.

ದೇವಾಲಯದ ಟ್ರಸ್ಟಿ ಎ.ಲೋಕೇಶ್ ಕುಮಾರ್, ಉತ್ಸವ ಸಮಿತಿ ಅಧ್ಯಕ್ಷ ಎಂ.ಮಂಜುನಾಥ್, ಕಾರ್ಯದರ್ಶಿ ಸುನಿಲ್ ಕುಮಾರ್, ಪದಾಧಿಕಾರಿಗಳಾದ ಸದಾಶಿವ ರೈ, ಚಂದು ಸುರೇಶ್, ಅರುಣ್ ಪೂಜಾರಿ, ದಿವಾಕರ ರೈ, ರಮೇಶ್ ಪೂಜಾರಿ, ವಸಂತ, ಬಿ.ಎಂ.ಸುರೇಶ್, ಸುರೇಶ್ ಗೋಪಿ ಮತ್ತಿತರರಿದ್ದರು.

ಸುಂಟಿಕೊಪ್ಪ, ಪನ್ಯ, ಬೆಟ್ಟಗೇರಿ, ಹರದೂರು ಸೇರಿದಂತೆ ಹಲವು ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.