ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ ಆಚರಿಸಲಾಗುತ್ತದೆ. ರಣಹದ್ದುಗಳ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಈ ದಿನದ ಉದ್ದೇಶ. ರಣಹದ್ದು ಸಂತಾನ ಹೆಚ್ಚಿಸುವ ಸಲುವಾಗಿ ಬನ್ನೇರುಘಟ್ಟದಲ್ಲಿ ನಿರ್ಮಿಸಲಾಗಿರುವ ಬ್ರೀಡಿಂಗ್ ಸೆಂಟರ್ ಶೀಘ್ರ ಪ್ರಾರಂಭ ನಿರೀಕ್ಷೆ ಇದೆ. ಇಲ್ಲಿನ ಸಂರಕ್ಷಿತ ರಣಹದ್ದಿನ ಮರಿ ರಾಮನಗರದ ರಣಹದ್ದು ವನ್ಯಧಾಮಕ್ಕೆ ತರಲಾಗುತ್ತದೆ. ರಾಮದೇವರ ಬೆಟ್ಟದಲ್ಲಿ ರಿಲಿಸಿಂಗ್ ಸೆಂಟರ್ ತೆರೆಯಲಾಗುತ್ತದೆ. ಅಳಿವಿನಂಚಿನ ಭೀತಿ ಎದುರುಸುತ್ತಿರುವ ರಣಹದ್ದುಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಸಂರಕ್ಷ ಣೆ ಮುಖ್ಯವಾಗಿದ್ದು ಅರಣ್ಯ ಇಲಾಖೆ ಜತೆ ಸ್ಥಳೀಯ ಸಾರ್ವಜನಿಕರ ಸಹಕಾರ ಕೂಡ ಅವಶ್ಯ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಪರಿಸರ ಸಮತೋಲನ ಕಾಪಾಡುವಲ್ಲಿ ರಣಹದ್ದುಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಅಳಿವಿನಂಚಿನಲ್ಲಿರುವ ಈ ಪಕ್ಷಿಗಳ ಸಂರಕ್ಷಣೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ತಿಳಿಸಿದರು.ರಾಮನಗರ ಸಮೀಪದ ರಾಮದೇವರ ಬೆಟ್ಟದ ರಣಹದ್ದು ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ರಾಮನಗರ ಪ್ರಾದೇಶಿಕ ವಿಭಾಗ ವತಿಯಿಂದ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ ಆಚರಿಸಲಾಗುತ್ತದೆ. ರಣಹದ್ದುಗಳ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಈ ದಿನದ ಉದ್ದೇಶ. ರಣಹದ್ದು ಸಂತಾನ ಹೆಚ್ಚಿಸುವ ಸಲುವಾಗಿ ಬನ್ನೇರುಘಟ್ಟದಲ್ಲಿ ನಿರ್ಮಿಸಲಾಗಿರುವ ಬ್ರೀಡಿಂಗ್ ಸೆಂಟರ್ ಶೀಘ್ರ ಪ್ರಾರಂಭ ನಿರೀಕ್ಷೆ ಇದೆ. ಇಲ್ಲಿನ ಸಂರಕ್ಷಿತ ರಣಹದ್ದಿನ ಮರಿ ರಾಮನಗರದ ರಣಹದ್ದು ವನ್ಯಧಾಮಕ್ಕೆ ತರಲಾಗುತ್ತದೆ. ರಾಮದೇವರ ಬೆಟ್ಟದಲ್ಲಿ ರಿಲಿಸಿಂಗ್ ಸೆಂಟರ್ ತೆರೆಯಲಾಗುತ್ತದೆ. ಅಳಿವಿನಂಚಿನ ಭೀತಿ ಎದುರುಸುತ್ತಿರುವ ರಣಹದ್ದುಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಸಂರಕ್ಷ ಣೆ ಮುಖ್ಯವಾಗಿದ್ದು ಅರಣ್ಯ ಇಲಾಖೆ ಜತೆ ಸ್ಥಳೀಯ ಸಾರ್ವಜನಿಕರ ಸಹಕಾರ ಕೂಡ ಅವಶ್ಯ ಎಂದು ಹೇಳಿದರು.ರಾಮದೇವರ ಬೆಟ್ಟ ದೇಶದ ಮೊದಲ ರಣಹದ್ದು ಅಭಯಾರಣ್ಯವಾಗಿದ್ದು, ಇಲ್ಲಿ ಮುಖ್ಯವಾಗಿ ಉದ್ದಕೊಕ್ಕಿನ ರಣಹದ್ದು, ಈಜಿಪ್ಟಿಯನ್ ವಲ್ಚರ್ (ಬಿಳಿ ರಣಹದ್ದು) ಸಂತಾನೋತ್ಪತ್ತಿ ಮಾಡುತ್ತಿವೆ. ರಣಹದ್ದುಗಳು ವರ್ಷಕ್ಕೆ ಒಂದು ಮೊಟ್ಟೆ ಮಾತ್ರ ಇಡುವುದರಿಂದ ಅವುಗಳ ಸಂತತಿ ನಿಧಾನವಾಗಿ ವೃದ್ಧಿಯಾಗುತ್ತಿದೆ ಎಂದು ರಾಮಕೃಷ್ಣಪ್ಪ ತಿಳಿಸಿದರು.ಪರಿಸರ ಪ್ರೇಮಿ ಮರಸಪ್ಪ ರವಿ ಮಾತನಾಡಿ, ಮಾನವನ ಬದುಕಿನೊಂದಿಗೆ ಪ್ರಾಣಿ ಮತ್ತು ಪಕ್ಷಿಗಳ ಬದುಕು ಕೂಡ ಬೆಸೆದುಕೊಂಡಿದ್ದು, ಪರಿಸರ ಸಮತೋಲನಕ್ಕಾಗಿ ಅವುಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಪಶುವೈದ್ಯಾಧಿಕಾರಿ ಡಾ. ನಜೀರ್ ಅಹಮದ್, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಚಂದ್ರೇಗೌಡ ಸಂಪನ್ಮೂಲ ವ್ಯಕ್ತಿಗಳಾದ ದರ್ಶನ್, ಸತ್ಯ ಪ್ರಮೋದ್, ತಮಿಳುನಾಡಿನ ಕು. ಸುಂದರಿ, ಜೋನಲ್ ಡಾ. ನವಾಜ್ ಷರೀಫ್ ಮಾತನಾಡಿದರು.ಎಸಿಎಫ್‌ಗಳಾದ ಶ್ರೀನಿವಾಸ್, ಪುಟ್ಟಮ್ಮ, ಚೈತ್ರಾ, ವಲಯ ಅರಣ್ಯಾಧಿಕಾರಿಗಳಾದ ಮನ್ಸೂರ್, ಮಲ್ಲೇಶ್, ನೇತ್ರಾವತಿ, ರಂಜಿತ, ಬಾಲಕೃಷ್ಣ, ವನ್ಯಜೀವಿ ವಿಭಾಗ ಶ್ರೀಧರ್, ಪ್ರಮೋದ್ ಉಪ ವಲಯರಣ್ಯಾಧಿಕಾರಿ ಸುಷ್ಮ, ಮಂಜು ರೆಡ್ಡಿ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌ನ ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
-----------------...ಬಾಕ್ಸ್...
ರಣಕಾಟಿ ಹದ್ದು ವೀಕ್ಷಣೆ, ಪ್ರವಾಸಿಗರ ಸಂತಸರಾಮನಗರ: ರಾಮದೇವರಬೆಟ್ಟ ರಣಹದ್ದು ವನ್ಯಜೀವಿಧಾಮದಲ್ಲಿ ಅಪರೂಪದ ರಣಕಾಟಿ ಹದ್ದು (ಲಾಂಗ್ ಬಿಲ್ಡ್ ವಲ್ಚರ್) ಕಂಡ ಪ್ರವಾಸಿಗರು ಸಂತಸಪಟ್ಟರು.
ರಾಮದೇವರ ಬೆಟ್ಟದಲ್ಲಿ 2 ಪ್ರಭೇದದ ರಣಕಾಟಿಗಳನ್ನು ಕಾಣಬಹುದಾಗಿದೆ. ಅಪರೂಪದ ಉದ್ದ ಕೊಕ್ಕಿನ ರಣಹದ್ದು, ಬಿಳಿಬೆನ್ನಿನ ರಣಹದ್ದು ಇಲ್ಲಿರುವುದು ವಿಶೇಷ. ಕಾರ್ಯಕ್ರಮಕ್ಕೆ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ವಿವಿಧೆಡೆಯಿಂದ ವನ್ಯಜೀವಿ ತಜ್ಞರು, ಪರಿಸರ ಪ್ರೇಮಿಗಳು ಹಾಗೂ ಶಿಬಿರಾರ್ಥಿಗಳು ಚಾರಣ ವೇಳೆ ಅಪರೂಪದ ರಣಕಾಟಿ ಹದ್ದು ಕಂಡು ಖುಷಿಪಟ್ಟರು.-----------------------------
16ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ಸಮೀಪದ ರಾಮದೇವರ ಬೆಟ್ಟದ ರಣಹದ್ದು ವನ್ಯಜೀವಿಧಾಮದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆ ಕಾರ್ಯಕ್ರಮವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ಉದ್ಘಾಟಿಸಿದರು.