ಸಾರಾಂಶ
ಮಡಿಕೇರಿಯಲ್ಲಿ ವಾಕಥಾನ್ ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಪಾಲ್ಗೊಂಡು ವಿಶ್ವ ಶಾಂತಿ ಸಂದೇಶ ಸಾರಿದರು.
ಮಡಿಕೇರಿ : ಅಂತಾರಾಷ್ಟ್ರೀಯ ಶಾಂತಿ ದಿನದ ಅಂಗವಾಗಿ ಕೊಡಗು ರೆಡ್ ಕ್ರಾಸ್, ಎಫ್.ಎಂ.ಕೆ.ಸಿ ಕಾಲೇಜು ಯೂತ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಮಡಿಕೇರಿಯಲ್ಲಿ ವಾಕಥಾನ್ ಆಯೋಜನೆ ಮಾಡಲಾಗಿತ್ತು.
ರೆಡ್ ಕ್ರಾಸ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ವಾಕಾಥಾನ್ ನಲ್ಲಿ ಪಾಲ್ಗೊಳ್ಳುವ ಮೂಲಕ ವಿಶ್ವಶಾಂತಿ ಸಂದೇಶ ಸಾರಿದರು. ಶಾಂತಿ ಸಂದೇಶದ ಬಗ್ಗೆ ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ಬಿ ಕೆ ರವೀಂದ್ರ ರೈ ಮಾಹಿತಿ ನೀಡಿದರು.--------------------------
ಆರೋಗ್ಯ ತಪಾಸಣೆ ಚುಚ್ಚುಮದ್ದು ಕಾರ್ಯಕ್ರಮಮಡಿಕೇರಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆಜಾದ್ ನಗರ ಮತ್ತು ದಾಸವಾಳ ಬೀದಿ ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ 0-5 ವರ್ಷದ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ಚುಚ್ಚುಮದ್ದು ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ನೆರವೇರಿತು.ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೇಪಾಡಂಡ ಸವಿತಾ ಕೀರ್ತನ್ ಅವರು ಮಕ್ಕಳ ಪೋಷಕರಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಬಗ್ಗೆ ನೀಲಿಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಎಚ್ ಸಿಓಗಳಾದ ಶಬ್ನಂ, ಅಶ್ವಿನಿ ಆಶಾ, ದೇವಿ ಪ್ರಸಾದ್ ಹೆಲ್ತ್ ಇನ್ಸ್ಪೆಕ್ಟರ್ ಆರೋಗ್ಯ ಇಲಾಖೆ, ಕಾರ್ಯಕರ್ತೆ ಕವಿತಾ, ಮೈನಾ ಅಂಗನವಾಡಿ ಕಾರ್ಯಕರ್ತೆಯರು ಸುಜಾತ, ಪಾರಿಜಾತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.