ಸಾರಾಂಶ
ವಿಜಯಪುರ: ಸರ್ಕಾರಿ ಹಾಗೂ ಅಮಾಯಕರ ಆಸ್ತಿಗಳನ್ನು ಕಬಳಿಸುವ ಸಾಧನವಾಗಿ ಮಾರ್ಪಟ್ಟಿರುವ ವಕ್ಫ್ ಕಾಯ್ದೆಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿರುವ ಕೇಂದ್ರ ಸರ್ಕಾರದ ನಿರ್ಣಯ ಸ್ವಾಗತಾರ್ಹ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಕ್ಫ್ ಮಂಡಳಿಗಳು ಮತ್ತು ವಕ್ಫ್ ಆಸ್ತಿಗಳಿಗೆ ಅನಿಯಂತ್ರಿತ ಅಧಿಕಾರಕ್ಕೆ ಮಿತಿ ಹೇರುವ ನಿಟ್ಟಿನಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ಅತ್ಯವಶ್ಯವಾಗಿತ್ತು. ಈ ಅಸಾಂವಿಧಾನಿಕ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 2023 ಸೆಪ್ಟೆಂಬರ್ 4ರಂದು ಪತ್ರ ಬರೆದಿದ್ದೆ. ಗುರುವಾರ ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜೂಜ್ ಅವರು ಲೋಕಸಭೆಯಲ್ಲಿ ಮಂಡಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.ಈ ಮಸೂದೆ ಅಂಗೀಕಾರಗೊಂಡರೆ, ವಕ್ಫ್ ಮಂಡಳಿ ಮನಸಿಗೆ ಬಂದಂತೆ, ತಮಗೆ ಬೇಕಾದ ಆಸ್ತಿಗಳನ್ನು ಕಬಳಿಸುವ ಹುನ್ನಾರ ತಪ್ಪಿಸಬಹುದು. ಅಕ್ರಮವಾಗಿ ಆಸ್ತಿಗಳನ್ನು ತಮ್ಮದೆಂದು ಆದೇಶ ಹೊರಡಿಸುವುದನ್ನು ಪ್ರಶ್ನಿಸಲು ಅವಕಾಶ ದೊರೆಯುತ್ತದೆ. ಇದರಿಂದ ಅಮಾಯಕರಿಗೆ ಹಾಗೂ ಸರ್ಕಾರಕ್ಕೆ ಆಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದು ಯತ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.----------