- ಸೆ.18 ರಂದು ವಕ್ಫ್ ಅದಾಲತ್ ಕಾರ್ಯಕ್ರಮ

| Published : Sep 14 2024, 01:53 AM IST

ಸಾರಾಂಶ

adalath, waqf,district

ಯಾದಗಿರಿ:ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಸತಿ ಮತ್ತು ವಕ್ಫ್ ಇಲಾಖಾ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು 2024ರ ಸೆ.18 ರಂದು ವಿನ್ಟೇಜ್ ಫಂಕ್ಷನ್ ಹಾಲ್ ಕೆಸಿಟಿ ಕಾಲೇಜ್ ಹತ್ತಿರ ರಿಂಗ್ ರೋಡ್ ಕಲಬುರಗಿಯಲ್ಲಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಮುತವಲ್ಲಿಗಳಿಗೆ ಹಾಗೂ ಸಾರ್ವಜನಿಕರಿಗೆ ವಕ್ಫ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ ಜಿಲ್ಲಾ ವಕ್ಫ್ ಕಚೇರಿ ವಕ್ಫ್ ಅಧಿಕಾರಿ ಜರೀನ್‌ಬೇಗಂ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಎಲ್ಲಾ ವಕ್ಫ್ ಆಸ್ತಿಗಳ ಖಾತೆ ಬದಲಾವಣೆ ಒತ್ತುವರಿ ಮತ್ತು ಮಾರಾಟ ಹಾಗೂ ಇತರೆ ವಕ್ಫ್ ಆಸ್ತಿಗಳಿಗೆ ಸಂಬಂಧಪಟ್ಟಂತೆ ವಕ್ಫ್ ಅದಾಲತ್‌ ಆಯೋಜಿಸಿದ್ದು, ಎಲ್ಲಾ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿ, ಮುತವಲ್ಲಿಗಳು ಈ ವಕ್ಫ್ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.