23ರಲ್ಲಿ 7.5 ಲಕ್ಷವಿದ್ದ ವಕ್ಫ್ ಆಸ್ತಿ ಈಗ 8.70 ಲಕ್ಷ ಎಕ್ರೆ

| Published : Nov 21 2024, 01:00 AM IST

23ರಲ್ಲಿ 7.5 ಲಕ್ಷವಿದ್ದ ವಕ್ಫ್ ಆಸ್ತಿ ಈಗ 8.70 ಲಕ್ಷ ಎಕ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ದೇಶದಲ್ಲಿ ರಕ್ಷಣಾ ಇಲಾಖೆ ಮತ್ತು ರೈಲ್ವೇ ಇಲಾಖೆ ಬಿಟ್ಟರೆ ಮೂರನೇ ಅತಿದೊಡ್ಡ ಆಸ್ತಿ ಹೊಂದಿರುವ ಸಂಸ್ಥೆ ವಕ್ಫ್ ಬೋರ್ಡ್ ಆಗಿದೆ. 2009ರಲ್ಲಿ ಮಾಹಿತಿ ಪ್ರಕಾರ 4 ಲಕ್ಷ ಎಕರೆ ಇದ್ದ ವಕ್ಫ್ ಬೋರ್ಡ್ ಆಸ್ತಿ 10 ವರ್ಷದಲ್ಲಿ 9.5 ಲಕ್ಷ ಎಕರೆಗೆ ಏರಿಕೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ: ದೇಶದಲ್ಲಿ ರಕ್ಷಣಾ ಇಲಾಖೆ ಮತ್ತು ರೈಲ್ವೇ ಇಲಾಖೆ ಬಿಟ್ಟರೆ ಮೂರನೇ ಅತಿದೊಡ್ಡ ಆಸ್ತಿ ಹೊಂದಿರುವ ಸಂಸ್ಥೆ ವಕ್ಫ್ ಬೋರ್ಡ್ ಆಗಿದೆ. 2009ರಲ್ಲಿ ಮಾಹಿತಿ ಪ್ರಕಾರ 4 ಲಕ್ಷ ಎಕರೆ ಇದ್ದ ವಕ್ಫ್ ಬೋರ್ಡ್ ಆಸ್ತಿ 10 ವರ್ಷದಲ್ಲಿ 9.5 ಲಕ್ಷ ಎಕರೆಗೆ ಏರಿಕೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ಸಂಸತ್ತಿನ ಕಳೆದ ಅಧಿವೇಶನದಲ್ಲಿಯೂ ಚರ್ಚೆಯಾಗಿದೆ. ಸುಮಾರು ಒಂದೂವರೆ ಲಕ್ಷ ಕೋಟಿ ರು. ಮೌಲ್ಯದ ಆಸ್ತಿಯನ್ನು ವಕ್ಫ್‌ ಹೊಂದಿದೆ. 2023ರಲ್ಲಿ 7.5 ಲಕ್ಷ ಇದ್ದ ವಕ್ಫ್ ಪ್ರಾಪರ್ಟಿಗಳು ಈಗ 8.70 ಲಕ್ಷಕ್ಕೆ ಏರಿದ್ದು, ಶೇ.135 ರಷ್ಟು ಹೆಚ್ಚಳವಾಗಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಜಂಟಿ ಸಮಿತಿ ರಚನೆ ಮಾಡಿ ವಕ್ಫ್‌ ಆಸ್ತಿ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿದ ತಕ್ಷಣ ಕರ್ನಾಟಕದಲ್ಲಿ 29 ಸಾವಿರ ಎಕರೆ ರೆವಿನ್ಯೂ ಭೂಮಿಯನ್ನು ವಕ್ಫ್‌ ಪ್ರಾಪರ್ಟಿಯಾಗಿ ಪರಿವರ್ತನೆ ಮಾಡಲಾಗಿದೆ. ವಾಣಿಜ್ಯ ಆಸ್ತಿಗಳು ಕೂಡ ವಕ್ಫ್ ಹೆಸರಿಗೆ ಪರಿವರ್ತನೆಯಾಗಿದ್ದು, ಬಹುಪಾಲು ಕಾಂಗ್ರೆಸ್ ಮುಖಂಡರ ಹೆಸರಿನಲ್ಲಿವೆ ಎಂದು ದೂರಿದರು.

ಒಂದೂವರೆ ಸಾವಿರ ವರ್ಷಗಳಷ್ಟು ಹಳೆಯ ದೇವಾಲಯ ಮತ್ತು ಅದರ ಸಾವಿರಾರು ಎಕರೆ ಆಸ್ತಿಯನ್ನಾಗಿ ಮಾಡಲಾಗಿದೆ. ಅಂಬೇಡ್ಕರ್ ಸಂವಿಧಾನಕ್ಕೆ ಬೆಲೆ ಕೊಡದ ಇವರು ವಕ್ಫ್‌ ಟ್ರಿಬ್ಯುನಲ್ ಎಂದು ಮಾಡಿ ಸುಪ್ರೀಂ ಕೋರ್ಟ್ ನಲ್ಲಿಯೂ ಕೂಡ ಪ್ರಶ್ನಿಸದ ಹಾಗೆ ಮಾಡಿದ್ದಾರೆ ಎಂದು ಆರೋಪಿಸಿದರು.ಯಾವುದೇ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದ ರಾಜ್ಯ ಕಾಂಗ್ರೆಸ್ ಸರ್ಕಾರ ಅವಶ್ಯಕ ಔಷಧಿಗಳಿಗೂ ಕೂಡ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಬಡ ರೋಗಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಬಡವರಿಗೆ ಬೇಕಾದ ಯಾವ ಸೌಲಭ್ಯವೂ ಸರ್ಕಾರಕ್ಕೆ ಕೊಡಲು ಆಗುತ್ತಿಲ್ಲ. ಇದನ್ನು ಬಿಟ್ಟು ಆ ತನಿಖೆ, ಈ ತನಿಖೆ ಎಂದುಕೊಂಡು ತನ್ನ ತಪ್ಪನ್ನು ಮುಚ್ಚಿಕೊಳ್ಳುವಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದೆ. ಜನ ಕಾಂಗ್ರೆಸ್‌ಗೆ ಪೂರ್ಣ ಬಹುಮತ ಕೊಟ್ಟಿದ್ದರೂ ಒಳ್ಳೆ ಆಡಳಿತ ಕೊಡಲು ಇವರಿಂದ ಆಗುತ್ತಿಲ್ಲ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ, ಪ್ರಮುಖರಾದ ಜ್ಞಾನೇಶ್ವರ್, ಮೋಹನ್ ರೆಡ್ಡಿ, ಶಿವರಾಜ್, ಹರಿಕೃಷ್ಣ, ಸಂತೋಷ್ ಬಳ್ಳೆಕೆರೆ ಜಗದೀಶ್, ಪ್ರಭು, ಚಂದ್ರಶೇಖರ್, ಹರೀಶ್ ಮತ್ತಿತರರಿದ್ದರು.

ಆರ್‌ಎಸ್‌ಎಸ್‌ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಗಮನಿಸಿದ್ದೇನೆ. ಅವರ ಓಟಿಗೋಸ್ಕರ ತುಷ್ಠೀಕರಣ ರಾಜಕಾರಣಕ್ಕೆ ಖರ್ಗೆ ಅವರ ಹೇಳಿಕೆಯೇ ಉದಾಹರಣೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯನ್ನು ಟಾರ್ಗೆಟ್‌ ಮಾಡುವ ಪ್ರಯತ್ನವನ್ನು ಖರ್ಗೆ ಅವರು ಮಾಡಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್‌ ಮುಖಂಡರಿಗೆ, ರಾಷ್ಟ್ರೀಯ ಅಧ್ಯಕ್ಷರಿಗೆ ಇಲ್ಲ. ಸ್ವತಂತ್ರ್ಯ ಸಂಗ್ರಾಮದಿಂದ ಇಲ್ಲಿವರೆಗೆ ರಾಷ್ಟ್ರವನ್ನು ಕಟ್ಟುವ ಕಾಯಕವನ್ನು ಆರ್‌ಎಸ್‌ಎಸ್‌ ಮಾಡುತ್ತಿದೆ. ಕೇವಲ ರಾಜಕಾರಣಕ್ಕಾಗಿ ದೇಶಭಕ್ತ ಸಂಘಟನೆ ಬಗ್ಗೆ ಮಾಡುವುದು ಸರಿಯಲ್ಲ.

-ಬಿ.ವೈ.ರಾಘವೇಂದ್ರ, ಸಂಸದ.