ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಯ ವಾರ್ಡ್‌ಗಳಿಗೆ ಕರಡು ಮೀಸಲಾತಿ ನಿಗದಿ ಪಡಿಸಿ ರಾಜ್ಯ ಸರ್ಕಾರ ಪ್ರಕಟಿಸಿದ್ದು, ಈ ಬಗ್ಗೆ ಆಕ್ಷೇಪಣೆಗಳಿದ್ದರೆ 15 ದಿನದಲ್ಲಿ ಸಲ್ಲಿಸುವಂತೆ ಸೂಚಿಸಿದೆ.
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಯ ವಾರ್ಡ್‌ಗಳಿಗೆ ಕರಡು ಮೀಸಲಾತಿ ನಿಗದಿ ಪಡಿಸಿ ರಾಜ್ಯ ಸರ್ಕಾರ ಪ್ರಕಟಿಸಿದ್ದು, ಈ ಬಗ್ಗೆ ಆಕ್ಷೇಪಣೆಗಳಿದ್ದರೆ 15 ದಿನದಲ್ಲಿ ಸಲ್ಲಿಸುವಂತೆ ಸೂಚಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 ರ ಸೆಕ್ಷನ್ 29 ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, ಹೊಸದಾಗಿ ಸ್ಥಾಪಿಸಲಾದ ಐದು ನಗರ ಪಾಲಿಕೆಗಳಿಗೆ 2011 ರ ಜನಗಣತಿ ಆಧಾರದ ಮೇಲೆ ಕರಡು ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗ ಬಿ ಮತ್ತು ಸಾಮಾನ್ಯ ಮಹಿಳೆಯರಿಗೇ ಶೇ.50 ರ ಅನುಪಾತ ಹಾಗೂ ಸಾಮಾನ್ಯ ವರ್ಗಗಳಿಗೆ ಅನುಗುಣವಾಗಿ ಆಯಾ ಪಾಲಿಕೆಗಳ ಮೀಸಲಾತಿ ನಿಗದಿಪಡಿಸಲಾಗಿದೆ.
ಕಳೆದ ಡಿ.19 ರಂದು ಸರ್ಕಾರ ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳ ವಾರ್ಡ್‌ಗಳಿಗೆ ಮೀಸಲು ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಿ ಮೀಸಲಾತಿ ಸಿದ್ಧಪಡಿಸುವುದಕ್ಕೆ ಸೂಚನೆ ನೀಡಿತ್ತು. ಅದರಂತೆ ಮೀಸಲಾತಿ ಸಿದ್ಧಪಡಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ನಗರದ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿರುವ ವಿಚಾರಣೆ ಜ.12ರ ಸೋಮವಾರ ನಡೆಯಲಿದೆ. ಹೀಗಾಗಿ, ಶುಕ್ರವಾರ ಮೀಸಲಾತಿ ನಿಗದಿ ಪಡಿಸಿರುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ಸಲ್ಲಿಕೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಸೋಮವಾರ ನ್ಯಾಯಾಲಯಕ್ಕೆ ಮೀಸಲಾತಿ ಪಟ್ಟಿ ಮಾಹಿತಿ ನೀಡಲಿದೆ.
ಆಕ್ಷೇಪಣೆಗೆ 15 ದಿನ ಅವಕಾಶ:
ಐದು ಪಾಲಿಕೆಗಳ ವಾರ್ಡ್‌ವಾರು ಮೀಸಲಾತಿಯಿಂದ ಅಸಮಾಧಾನಗೊಂಡ ವ್ಯಕ್ತಿಗಳು ತಮ್ಮ ಆಕ್ಷೇಪಣೆಗಳನ್ನು ಜ.23ರ ಒಳಗೆ 15 ದಿನಗಳಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕೊಠಡಿ ಸಂಖ್ಯೆ-436, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು ಇವರಿಗೆ ಸಲ್ಲಿಸುವುದು. ಅವಧಿಯೊಳಗೆ ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಪರಿಗಣಿಸಿ ಅಂತಿಮ ಮೀಸಲಾತಿ ಪಟ್ಟಿ ಸಿದ್ಧಪಡಿಸಲಾಗುತ್ತದೆ.
ಏಪ್ರಿಲ್ ಅಥವಾ ಮೇ ಚುನಾವಣೆ?
ಮುಂಬರುವ ಏಪ್ರಿಲ್ ಇಲ್ಲವೇ ಮೇ ತಿಂಗಳಿನಲ್ಲಿ ಐದು ನಗರ ಪಾಲಿಕೆಯ ಚುನಾವಣೆ ನಡೆಯುವುದು ಬಹುತೇಕ ಖಚಿತ ಎನ್ನುವುದು ತಿಳಿದಿದ್ದರೂ ಕೆಲವು ಆಕಾಂಕ್ಷಿಗಳು ಮೀಸಲಾತಿ ಪಟ್ಟಿ ಪ್ರಕಟವಾಗದೆ ಅಖಾಡಕ್ಕೆ ಇಳಿಯೋದು ಬೇಡ ಎಂದು ಸುಮನಿದ್ದರು. ಇದೀಗ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಆಯಾ ವಾರ್ಡ್‌ಗಳ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ತಮ ಗಾಡ್‌ಫಾದರ್‌ಗಳ ಮೂಲಕ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಲು ಮುಗಿ ಬೀಳುತ್ತಿದ್ದಾರೆ.
ಪೂರ್ವ ನಗರ ಪಾಲಿಕೆ
ಒಟ್ಟು ವಾರ್ಡ್ ಸಂಖ್ಯೆ: 50ಪರಿಶಿಷ್ಟ ಜಾತಿ: 7(3 ಮಹಿಳೆ)
ಪರಿಶಿಷ್ಟ ಪಂಗಡ: 1
ಹಿಂದುಳಿದ ವರ್ಗ ‘ಅ’:14 (7 ಮಹಿಳೆ)
ಹಿಂದುಳಿದ ವರ್ಗ ‘ಬ’:3 (1 ಮಹಿಳೆ)
ಸಾಮಾನ್ಯ: 25(12)
1 ಕೆ.ನಾರಾಯಣಪುರ (ಸಾಮಾನ್ಯ ಮಹಿಳೆ)
2. ಹೊರಮಾವು (ಹಿಂದುಳಿದ ವರ್ಗ ‘ಅ’)3.ಚೆಲ್ಲಕೆರೆ (ಸಾಮಾನ್ಯ ಮಹಿಳೆ)4.ಬಾಬುಸಾಬ್ ಪಾಳ್ಯ (ಹಿಂದುಳಿದ ವರ್ಗ ‘ಬ’ ಮಹಿಳೆ)5.ಹೊಯ್ಸಳ ನಗರ ಪೂರ್ವ (ಹಿಂದುಳಿದ ವರ್ಗ ‘ಅ’ ಮಹಿಳೆ)6. ಕಲ್ಕೆರೆ (ಸಾಮಾನ್ಯ)7.ಕೆ.ಚೆನ್ನಸಂದ್ರ (ಪರಿಶಿಷ್ಟ ಪಂಗಡ)8.ಆನಂದಪುರ (ಸಾಮಾನ್ಯ)9.ಭಟ್ಟರಹಳ್ಳಿ(ಸಾಮಾನ್ಯ)10.ಬಸವನಪುರ(ಸಾಮಾನ್ಯ)11.ಕೃಷ್ಣನಗರ(ಸಾಮಾನ್ಯ)12.ದೇವಸಂದ್ರ(ಸಾಮಾನ್ಯ)13.ರಾಜೇಶ್ವರಿ ದೇವಸ್ಥಾನ (ಹಿಂದುಳಿದ ವರ್ಗ ‘ಅ’)14.ಕೆ.ಆರ್.ಪುರ (ಹಿಂದುಳಿದ ವರ್ಗ ‘ಅ’)15.ರಾಮಮೂರ್ತಿ ನಗರ (ಪರಿಶಿಷ್ಟ ಜಾತಿ)16.ಕೊತ್ತೂರು(ಸಾಮಾನ್ಯ)17.ವಿಜಿನಾಪುರ (ಪರಿಶಿಷ್ಟ ಜಾತಿ ಮಹಿಳೆ)18.ದೂರವಾಣಿನಗರ(ಸಾಮಾನ್ಯ ಮಹಿಳೆ)19.ಕೆ.ಎಸ್.ನಿಸಾರ್ ಅಹಮದ್ ವಾರ್ಡ್ (ಹಿಂದುಳಿದ ವರ್ಗ ‘ಅ’)20.ಎ.ನಾರಾಯಣಪುರ (ಪರಿಶಿಷ್ಟ ಜಾತಿ ಮಹಿಳೆ)21.ಉದಯ್‌ನಗರ (ಸಾಮಾನ್ಯ ಮಹಿಳೆ)22.ಮಹದೇವಪುರ (ಹಿಂದುಳಿದ ವರ್ಗ ‘ಅ’ಮಹಿಳೆ)23.ಸಂಗಮ್ ವಾರ್ಡ್(ಸಾಮಾನ್ಯ ಮಹಿಳೆ)24.ವಿಜ್ಞಾನನಗರ(ಸಾಮಾನ್ಯ)25.ಎಲ್.ಬಿ.ಶಾಸ್ತ್ರಿನಗರ (ಹಿಂದುಳಿದ ವರ್ಗ ‘ಅ’ ಮಹಿಳೆ)26.ಜಗದೀಶ್‌ನಗರ (ಪರಿಶಿಷ್ಟ ಜಾತಿ)27.ವಿಭೂತಿಪುರ(ಸಾಮಾನ್ಯ ಮಹಿಳೆ)28.ಬೈರತಿ (ಹಿಂದುಳಿದ ವರ್ಗ ‘ಅ’ ಮಹಿಳೆ)29.ಹೂಡಿ(ಸಾಮಾನ್ಯ)30.ಬೆಳತ್ತೂರು (ಪರಿಶಿಷ್ಟ ಜಾತಿ)31.ಕಾಡುಗೋಡಿ(ಸಾಮಾನ್ಯ)32.ಚನ್ನಸಂದ್ರ(ಸಾಮಾನ್ಯ)33.ಎಸ್.ಎಂ.ಕೃಷ್ಣವಾರ್ಡ್ (ಹಿಂದುಳಿದ ವರ್ಗ ‘ಅ’)34.ಕಾವೇರಿನಗರ, (ಪರಿಶಿಷ್ಟ ಜಾತಿ)35.ಗರುಡಾಚಾರ್ ಪಾಳ್ಯ (ಹಿಂದುಳಿದ ವರ್ಗ ‘ಬ’)36.ಭಾರತ್ ಐಕ್ಯ ವಾರ್ಡ್(ಸಾಮಾನ್ಯ ಮಹಿಳೆ)37.ಕುಂದಲಹಳ್ಳಿ (ಹಿಂದುಳಿದ ವರ್ಗ ‘ಬ’)38.ವೈಟ್‌ಫೀಲ್ಡ್ (ಹಿಂದುಳಿದ ವರ್ಗ ‘ಅ’)39.ಹಗದೂರು(ಸಾಮಾನ್ಯ ಮಹಿಳೆ)40.ವರ್ತೂರು (ಹಿಂದುಳಿದ ವರ್ಗ ‘ಅ’ ಮಹಿಳೆ)41.ಮುನ್ನೇನಕೊಳಲು (ಸಾಮಾನ್ಯ)42.ಪ್ರಿಯದರ್ಶಿನಿ ವಾರ್ಡ್ (ಸಾಮಾನ್ಯ ಮಹಿಳೆ)43.ದೊಡ್ಡನಕ್ಕುಂದಿ (ಸಾಮಾನ್ಯ)44.ಅಶ್ವಥ್‌ನಗರ(ಸಾಮಾನ್ಯ ಮಹಿಳೆ)45.ಮಾರತ್‌ಹಳ್ಳಿ (ಹಿಂದುಳಿದ ವರ್ಗ ‘ಅ’ ಮಹಿಳೆ)46.ಯಮಲೂರು(ಸಾಮಾನ್ಯ ಮಹಿಳೆ)47.ಬೆಳ್ಳಂದೂರು (ಹಿಂದುಳಿದ ವರ್ಗ ‘ಅ’ ಮಹಿಳೆ)48.ಪಣತ್ತೂರು (ಪರಿಶಿಷ್ಟ ಜಾತಿ ಮಹಿಳೆ)49.ದೊಡ್ಡಕನ್ನೆಲ್ಲಿ(ಸಾಮಾನ್ಯ ಮಹಿಳೆ)50.ಗುಂಜೂರು. (ಹಿಂದುಳಿದ ವರ್ಗ ‘ಅ’)
ಬೆಂ. ದಕ್ಷಿಣ ನಗರ ಪಾಲಿಕೆ ಮೀಸಲಾತಿ ವಿವರ
ಒಟ್ಟು ವಾರ್ಡ್ ಸಂಖ್ಯೆ: 72ಪರಿಶಿಷ್ಟ ಜಾತಿ: 7(3ಮಹಿಳೆ)ಪರಿಶಿಷ್ಟ ಪಂಗಡ: 1ಹಿಂದುಳಿದ ವರ್ಗ ‘ಅ’: 19 (9 ಮಹಿಳೆ)ಹಿಂದುಳಿದ ವರ್ಗ ‘ಬ’: 5 (2 ಮಹಿಳೆ)ಸಾಮಾನ್ಯ: 40 (20 ಮಹಿಳೆ)1. ಪದ್ಮನಾಭನಗರ ( ಸಾಮಾನ್ಯ ಮಹಿಳೆ)
2. ಕದಿರೇನಹಳ್ಳಿ(ಸಾಮಾನ್ಯ)3. ಯಾರಬ್ ನಗರ(ಸಾಮಾನ್ಯ ಮಹಿಳೆ)4. ಬನಶಂಕರಿ ದೇವಸ್ಥಾನ ವಾರ್ಡ್ (ಹಿಂದುಳಿದ ವರ್ಗ ‘ಅ’)5. ಕಾನೆ ಮುನೇಶ್ವರ ವಾರ್ಡ್ (ಹಿಂದುಳಿದ ವರ್ಗ ‘ಅ’ ಮಹಿಳೆ)6. ಗೌಡನಪಾಳ್ಯ (ಹಿಂದುಳಿದ ವರ್ಗ ‘ಬ’ ಮಹಿಳೆ)7. ಭೈರಸಂದ್ರ(ಹಿಂದುಳಿದ ವರ್ಗ ‘ಬ’ ಮಹಿಳೆ)8. ತಿಲಕನಗರ(ಹಿಂದುಳಿದ ವರ್ಗ ‘ಅ’)9. ಎನ್‌ಎಎಲ್ ಲೇಔಟ್ (ಹಿಂದುಳಿದ ವರ್ಗ ‘ಅ’)10. ಅಬ್ದುಲ್ ಕಲಾಂ ನಗರ(ಸಾಮಾನ್ಯ ಮಹಿಳೆ)11. ಜಯನಗರ ಪೂರ್ವ (ಹಿಂದುಳಿದ ವರ್ಗ ‘ಅ’ )12. ಪಟ್ಟಾಭಿರಾಮನಗರ(ಸಾಮಾನ್ಯ ಮಹಿಳೆ)13. ಮಾರೇನಹಳ್ಳಿ ದಕ್ಷಿಣ (ಪರಿಶಿಷ್ಟ ಜಾತಿ ಮಹಿಳೆ)14. ಜೆ.ಪಿ.ನಗರ (ಹಿಂದುಳಿದ ವರ್ಗ ‘ಅ’ ಮಹಿಳೆ)15. ಶಾಕಾಂಬರಿ ನಗರ (ಹಿಂದುಳಿದ ವರ್ಗ ‘ಬ’)16. ಸಾರಕ್ಕಿ (ಸಾಮಾನ್ಯ)17. ಎನ್‌ಎಸ್ ಪಾಳ್ಯ(ಸಾಮಾನ್ಯ)18. ವಿಶ್ವಮಾನವ ಕುವೆಂಪು ವಾರ್ಡ್ (ಹಿಂದುಳಿದ ವರ್ಗ ‘ಅ’ ಮಹಿಳೆ)19. ತಾವರೆಕೆರೆ (ಸಾಮಾನ್ಯ)20. ಮಡಿವಾಳ (ಸಾಮಾನ್ಯ)21. ಚಿಕ್ಕ ಆಡುಗೋಡಿ (ಹಿಂದುಳಿದ ವರ್ಗ ‘ಅ’ )22. ಎಸ್.ಜಿ.ಪಾಳ್ಯ(ಸಾಮಾನ್ಯ)23. ಲಕ್ಕಸಂದ್ರ (ಹಿಂದುಳಿದ ವರ್ಗ ‘ಅ’ ಮಹಿಳೆ)24. ಎ.ಆಡುಗೊಡಿ(ಸಾಮಾನ್ಯ ಮಹಿಳೆ)25. ನ್ಯಾಷನಲ್ ಗೇಮ್ಸ್ ವಿಲೇಜ್(ಪರಿಶಿಷ್ಟ ಜಾತಿ ಮಹಿಳೆ)26. ಈಜಿಪುರ (ಪರಿಶಿಷ್ಟ ಜಾತಿ)27. ಲಕ್ಷ್ಮಿದೇವಿ ವಾರ್ಡ್(ಹಿಂದುಳಿದ ವರ್ಗ ‘ಬ’)28. ಕೋರಮಂಗಲ ಪೂರ್ವ (ಸಾಮಾನ್ಯ)29. ಕೋರಮಂಗಲ ಪಶ್ಚಿಮ (ಪರಿಶಿಷ್ಟ ಪಂಗಡ)30. ಜಕ್ಕಸಂದ್ರ(ಹಿಂದುಳಿದ ವರ್ಗ ‘ಅ’ ಮಹಿಳೆ)31. ಕಸವನಹಳ್ಳಿ(ಸಾಮಾನ್ಯ ಮಹಿಳೆ)32. ಕೂಡ್ಲು (ಸಾಮಾನ್ಯ)33. ನಾಗನಾಥಪುರ(ಸಾಮಾನ್ಯ)34. ಚಿಕ್ಕ ತೋಗೂರು(ಸಾಮಾನ್ಯ)35. ವಿಶ್ವಪ್ರಿಯ ನಗರ(ಸಾಮಾನ್ಯ)36. ಬೇಗೂರು(ಸಾಮಾನ್ಯ)37. ಯಲೇನಹಳ್ಳಿ(ಸಾಮಾನ್ಯ ಮಹಿಳೆ)38. ದೊಡ್ಡಕಮ್ಮನಹಳ್ಳಿ (ಹಿಂದುಳಿದ ವರ್ಗ ‘ಅ’)39. ಗೊಟ್ಟಿಗೆರೆ (ಹಿಂದುಳಿದ ವರ್ಗ ‘ಅ’ )40. ಅಂಜನಾಪುರ(ಸಾಮಾನ್ಯ ಮಹಿಳೆ)41. ಕೊತ್ತನೂರು (ಪರಿಶಿಷ್ಟ ಜಾತಿ)42. ಆರ್.ಬಿ.ಐಲೇಔಟ್(ಸಾಮಾನ್ಯ ಮಹಿಳೆ)43. ಭೀಮೇಶ್ವರನಗರ (ಹಿಂದುಳಿದ ವರ್ಗ ‘ಅ’)44. ಹರಿನಗರ(ಸಾಮಾನ್ಯ)45. ಕೋಣನಕುಂಟೆ (ಹಿಂದುಳಿದ ವರ್ಗ ‘ಅ’)46. ಯಲಚೇನಹಳ್ಳಿ (ಹಿಂದುಳಿದ ವರ್ಗ ‘ಅ’)47. ಚಂದ್ರನಗರ(ಸಾಮಾನ್ಯ)48. ವಸಂತಪುರ(ಸಾಮಾನ್ಯ ಮಹಿಳೆ)49. ಉತ್ತರಹಳ್ಳಿ (ಪರಿಶಿಷ್ಟ ಜಾತಿ ಮಹಿಳೆ)50. ಸಾರ್ವಭೌಮನಗರ(ಸಾಮಾನ್ಯ)51. ಸುಬ್ರಹ್ಮಣ್ಯಪುರ (ಹಿಂದುಳಿದ ವರ್ಗ ‘ಅ’)52. ತಲಘಟ್ಟಪುರ(ಸಾಮಾನ್ಯ)53. ಜರಗನಹಳ್ಳಿ (ಸಾಮಾನ್ಯ)54. ಕೆಂಗಲ್ ಹನುಮಂತಯ್ಯ ದಕ್ಷಿಣ(ಸಾಮಾನ್ಯ ಮಹಿಳೆ)55. ಪುಟ್ಟೇನಹಳ್ಳಿ (ಹಿಂದುಳಿದ ವರ್ಗ ‘ಅ’)56.ದೊರೆಸಾನಿ ಪಾಳ್ಯ(ಸಾಮಾನ್ಯ ಮಹಿಳೆ)57. ಹುಳಿಮಾವು(ಸಾಮಾನ್ಯ ಮಹಿಳೆ)58. ಅರಕೆರೆ(ಸಾಮಾನ್ಯ ಮಹಿಳೆ)59. ವಿಜಯಬ್ಯಾಂಕ್ ಲೇಔಟ್(ಸಾಮಾನ್ಯ ಮಹಿಳೆ)60. ಬಿಳೇಕಹಳ್ಳಿ(ಸಾಮಾನ್ಯ ಮಹಿಳೆ)61. ಕೋಡಿಚಿಕ್ಕನಹಳ್ಳಿ (ಪರಿಶಿಷ್ಟ ಜಾತಿ)62. ದೇವರಚಿಕ್ಕನಹಳ್ಳಿ (ಹಿಂದುಳಿದ ವರ್ಗ ‘ಬ’)63. ಬೊಮ್ಮನಹಳ್ಳಿ(ಸಾಮಾನ್ಯ ಮಹಿಳೆ)64. ಹೊಂಗಸಂದ್ರ(ಸಾಮಾನ್ಯ ಮಹಿಳೆ)65. ಗಾರ್ವೆಬಾವಿಪಾಳ್ಯ(ಸಾಮಾನ್ಯ)66. ಸಿಂಗಸಂದ್ರ(ಸಾಮಾನ್ಯ ಮಹಿಳೆ)67. ಬಂಡೆಪಾಳ್ಯ (ಹಿಂದುಳಿದ ವರ್ಗ ‘ಅ’)68. ಮಂಗಮ್ಮನಪಾಳ್ಯ(ಸಾಮಾನ್ಯ)69. ಹೊಸಪಾಳ್ಯ(ಸಾಮಾನ್ಯ ಮಹಿಳೆ)70. ಇಬ್ಬಲೂರು (ಪರಿಶಿಷ್ಟ ಜಾತಿ)71. ಅಗರ(ಹಿಂದುಳಿದ ವರ್ಗ ‘ಅ’ ಮಹಿಳೆ)72. ಎಚ್‌ಎಸ್‌ಆರ್ ಲೇಔಟ್(ಸಾಮಾನ್ಯ)
ಕೇಂದ್ರ ನಗರ ಪಾಲಿಕೆ
ಒಟ್ಟು ವಾರ್ಡ್ ಸಂಖ್ಯೆ: 63ಪರಿಶಿಷ್ಟ ಜಾತಿ: 11 (5 ಮಹಿಳೆ)ಪರಿಶಿಷ್ಟ ಪಂಗಡ: 1ಹಿಂದುಳಿದ ವರ್ಗ ‘ಅ’: 15 (7 ಮಹಿಳೆ)ಹಿಂದುಳಿದ ವರ್ಗ ‘ಬ’: 4 (2 ಮಹಿಳೆ)ಸಾಮಾನ್ಯ: 32 (16 ಮಹಿಳೆ)1- ರಾಮಸ್ವಾಮಿಪಾಳ್ಯ (ಸಾಮಾನ್ಯ ಮಹಿಳೆ)2-ಜಯಮಹಲ್ (ಪರಿಶಿಷ್ಟ ಜಾತಿ)3- ವಸಂತನಗರ (ಹಿಂದುಳಿದ ವರ್ಗ ‘ಅ’ ಮಹಿಳೆ)4-ಸಂಪಂಗಿರಾಮನಗರ (ಹಿಂದುಳಿದ ವರ್ಗ ‘ಅ’ ಮಹಿಳೆ)5-ಶಿವಾಜಿನಗರ(ಸಾಮಾನ್ಯ)6-ಭಾರತಿನಗರ (ಸಾಮಾನ್ಯ ಮಹಿಳೆ)7-ಕೆ.ಕಾಮರಾಜ ವಾರ್ಡ್(ಸಾಮಾನ್ಯ ಮಹಿಳೆ)8-ಹಲಸೂರು (ಪರಿಶಿಷ್ಟ ಜಾತಿ ಮಹಿಳೆ)9-ಹೋಯ್ಸಳ ನಗರ ಕೇಂದ್ರ (ಪರಿಶಿಷ್ಟ ಜಾತಿ)10-ಕಾಕ್ಸ್‌ಟೌನ್ (ಸಾಮಾನ್ಯ)11-ಹಳೇ ಬೈಯಪ್ಪನಹಳ್ಳಿ (ಪರಿಶಿಷ್ಟ ಜಾತಿ ಮಹಿಳೆ)12-ಕಸ್ತೂರಿನಗರ (ಹಿಂದುಳಿದ ವರ್ಗ ‘ಬ’)13-ಕೃಷ್ಣಯ್ಯನಪಾಳ್ಯ(ಸಾಮಾನ್ಯ ಮಹಿಳೆ)14-ನಾಗವಾರಪಾಳ್ಯ (ಹಿಂದುಳಿದ ವರ್ಗ ‘ಅ’)15-ಇಂದಿರಾನಗರ(ಸಾಮಾನ್ಯ)16-ನ್ಯೂತಿಪ್ಪಸಂದ್ರ(ಸಾಮಾನ್ಯ ಮಹಿಳೆ)17-ಕಗ್ಗದಾಸಪುರ (ಹಿಂದುಳಿದ ವರ್ಗ ‘ಅ’)18-ಜಿ.ಎಂ.ಪಾಳ್ಯ(ಸಾಮಾನ್ಯ ಮಹಿಳೆ)19-ಜೀವನಭೀಮಾನಗರ (ಹಿಂದುಳಿದ ವರ್ಗ ‘ಅ’)20-ಕೋಡಿಹಳ್ಳಿ(ಸಾಮಾನ್ಯ)21-ಕೋನೇನ ಅಗ್ರಹಾರ(ಸಾಮಾನ್ಯ ಮಹಿಳೆ)22-ದೊಮ್ಮಲೂರು (ಹಿಂದುಳಿದ ವರ್ಗ ‘ಬ’ ಮಹಿಳೆ)23-ಜೋಗಪಾಳ್ಯ(ಸಾಮಾನ್ಯ ಮಹಿಳೆ)24-ಅಗರಂ (ಪರಿಶಿಷ್ಟ ಜಾತಿ)25-ಅಶೋಕನಗರ (ಹಿಂದುಳಿದ ವರ್ಗ ‘ಬ’ ಮಹಿಳೆ)26-ವನ್ನಾರಪೇಟೆ (ಪರಿಶಿಷ್ಟ ಪಂಗಡ)27-ಅಂಬೇಡ್ಕರ್ ನಗರ (ಪರಿಶಿಷ್ಟ ಜಾತಿ)28-ನೀಲಸಂದ್ರ (ಹಿಂದುಳಿದ ವರ್ಗ ‘ಅ’ ಮಹಿಳೆ)29-ಅಸ್ಟೀನ್‌ಟೌನ್ (ಹಿಂದುಳಿದ ವರ್ಗ ‘ಅ’)30-ವಿನಾಯನಗರ(ಸಾಮಾನ್ಯ ಮಹಿಳೆ)31-ಶಾಂತಿನಗರ (ಹಿಂದುಳಿದ ವರ್ಗ ‘ಬ’)32-ಸಿಲ್ವರ್ ಜ್ಯುಬಿಲಿ ಪಾರ್ಕ್ ವಾರ್ಡ್ (ಪರಿಶಿಷ್ಟ ಜಾತಿ ಮಹಿಳೆ)33-ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್(ಸಾಮಾನ್ಯ ಮಹಿಳೆ)34-ಡಿ.ವಿ.ಗುಂಡಪ್ಪ ವಾರ್ಡ್(ಸಾಮಾನ್ಯ)35-ಹೊಂಬೇಗೌಡನಗರ(ಸಾಮಾನ್ಯ)36-ಸೋಮೇಶ್ವರನಗರ(ಸಾಮಾನ್ಯ)37-ಬಿಎಚ್‌ಇಎಲ್ ವಾರ್ಡ್(ಹಿಂದುಳಿದ ವರ್ಗ ‘ಅ’)38-ಕನಕಪಾಳ್ಯ(ಸಾಮಾನ್ಯ ಮಹಿಳೆ)39-ವೆಂಕಟರೆಡ್ಡಿನಗರ(ಸಾಮಾನ್ಯ)40-ಅಶೋಕ ಪಿಲ್ಲರ್(ಸಾಮಾನ್ಯ)41-ವಿ.ವಿ.ಪುರಂ(ಸಾಮಾನ್ಯ ಮಹಿಳೆ)42-ಸುಂಕೇನಹಳ್ಳಿ(ಸಾಮಾನ್ಯ ಮಹಿಳೆ)43-ದೇವರಾಜ ಅರಸು ವಾರ್ಡ್(ಸಾಮಾನ್ಯ)44-ಚಾಮರಾಜಪೇಟೆ(ಸಾಮಾನ್ಯ)45-ಕೆ.ಆರ್.ಮಾರುಕಟ್ಟೆ (ಹಿಂದುಳಿದ ವರ್ಗ ‘ಅ’)46-ಚೆಲುವಾದಿಪಾಳ್ಯ (ಪರಿಶಿಷ್ಟ ಜಾತಿ ಮಹಿಳೆ)47-ಐಪಿಡಿ ಸಾಲಪ್ಪ ವಾರ್ಡ್ (ಪರಿಶಿಷ್ಟ ಜಾತಿ ಮಹಿಳೆ)48-ಆಜಾದ್‌ನಗರ(ಸಾಮಾನ್ಯ)49-ಕಸ್ತೂರ ಬಾ ವಾರ್ಡ್ (ಹಿಂದುಳಿದ ವರ್ಗ ‘ಅ’ ಮಹಿಳೆ)50-ಜೆಜೆಆರ್ ನಗರ(ಹಿಂದುಳಿದ ವರ್ಗ ‘ಅ’ ಮಹಿಳೆ)51-ಹಳೇ ಗುಡ್ಡದಹಳ್ಳಿ (ಸಾಮಾನ್ಯ ಮಹಿಳೆ)52-ಪಾದರಾಯನಪುರ (ಸಾಮಾನ್ಯ)53-ರಾಯಪುರ (ಪರಿಶಿಷ್ಟ ಜಾತಿ) 54-ಬಿನ್ನಿಪೇಟೆ (ಸಾಮಾನ್ಯ)55-ಭುವನೇಶ್ವರಿನಗರ (ಹಿಂದುಳಿದ ವರ್ಗ ‘ಅ’)56-ಗೋಪಾಲಪುರ(ಹಿಂದುಳಿದ ವರ್ಗ ‘ಅ’) 57-ಕಾಟನ್‌ಪೇಟೆ(ಸಾಮಾನ್ಯ)58-ಚಿಕ್ಕಪೇಟೆ(ಸಾಮಾನ್ಯ ಮಹಿಳೆ)59-ನೆಹರುನಗರ (ಹಿಂದುಳಿದ ವರ್ಗ ‘ಅ’ ಮಹಿಳೆ)60-ಶೇಷಾದ್ರಿಪುರ(ಸಾಮಾನ್ಯ ಮಹಿಳೆ)61-ದತ್ತಾತ್ರೇಯ ವಾರ್ಡ್(ಸಾಮಾನ್ಯ)62-ಸ್ವತಂತ್ರಪಾಳ್ಯ ವಾರ್ಡ್ (ಪರಿಶಿಷ್ಟ ಜಾತಿ)63-ಓಕಳಿಪುರ (ಹಿಂದುಳಿದ ವರ್ಗ ‘ಅ’ ಮಹಿಳೆ)---
ಉತ್ತರ ನಗರ ಪಾಲಿಕೆ
ಒಟ್ಟು ವಾರ್ಡ್ ಸಂಖ್ಯೆ: 72ಪರಿಶಿಷ್ಟ ಜಾತಿ: 9 (4 ಮಹಿಳೆ)ಪರಿಶಿಷ್ಟ ಪಂಗಡ: 2 (1 ಮಹಿಳೆ)ಹಿಂದುಳಿದ ವರ್ಗ ‘ಅ’: 19 (9ಮಹಿಳೆ)ಹಿಂದುಳಿದ ವರ್ಗ ‘ಬ’: 5 (2ಮಹಿಳೆ)ಸಾಮಾನ್ಯ: 37 (18 ಮಹಿಳೆ)1- ರಾಜಾ ಕೆಂಪೇಗೌಡ ವಾರ್ಡ್ (ಸಾಮಾನ್ಯ ಮಹಿಳೆ)2-ಏರೋಸಿಟಿ ( ಹಿಂದುಳಿದ ವರ್ಗ ‘ಬ’ ಮಹಿಳೆ)3 ಚೌಡೇಶ್ವರಿ ವಾರ್ಡ್ ( ಹಿಂದುಳಿದ ವರ್ಗ ‘ಅ’ ಮಹಿಳೆ)4 ನ್ಯಾಯಾಂಗ ಬಡಾವಣೆ (ಪರಿಶಿಷ್ಟ ಜಾತಿ ಮಹಿಳೆ)5 ಯಲಹಂಕ ಸ್ಯಾಟಲೈಟ್ ಟೌನ್ ( ಹಿಂದುಳಿದ ವರ್ಗ ‘ಅ’)6-ದೊಡ್ಡಬೆಟ್ಟಹಳ್ಳಿ (ಪರಿಶಿಷ್ಟ ಪಂಗಡ)7 ಅಟ್ಟುರು ( ಹಿಂದುಳಿದ ವರ್ಗ ‘ಅ’ ಮಹಿಳೆ)8 ಸಿಂಗಾಪುರ (ಸಾಮಾನ್ಯ ಮಹಿಳೆ)9 ಕುವೆಂಪುನಗರ (ಪರಿಶಿಷ್ಟ ಜಾತಿ)10 ವಿದ್ಯಾರಣ್ಯಪುರ(ಸಾಮಾನ್ಯ ಮಹಿಳೆ)11 ದೊಡ್ಡಬೊಮ್ಮಸಂದ್ರ (ಸಾಮಾನ್ಯ)12 ತಿಂಡ್ಲು ( ಹಿಂದುಳಿದ ವರ್ಗ ‘ಬ’)13 ಕೊಡಿಗೆಹಳ್ಳಿ (ಸಾಮಾನ್ಯ ಮಹಿಳೆ)14 ರಾಜೀವ್‌ಗಾಂಧಿನಗರ (ಸಾಮಾನ್ಯ)15 ಬ್ಯಾಟರಾಯನಪುರ ( ಹಿಂದುಳಿದ ವರ್ಗ ‘ಅ’)16 ಅಮೃತಹಳ್ಳಿ ( ಹಿಂದುಳಿದ ವರ್ಗ ‘ಅ’)17 ಜಕ್ಕೂರು (ಸಾಮಾನ್ಯ ಮಹಿಳೆ)18 ಕೆಂಪಾಪುರ ( ಹಿಂದುಳಿದ ವರ್ಗ ‘ಬ’)19 ಥಣಿಸಂದ್ರ ( ಹಿಂದುಳಿದ ವರ್ಗ ‘ಅ’)20 ಸಂಪಿಗೆಹಳ್ಳಿ (ಸಾಮಾನ್ಯ)21 ಕೋಗಿಲು (ಹಿಂದುಳಿದ ವರ್ಗ ‘ಅ’ ಮಹಿಳೆ)22 ನಾಗವಾರ (ಸಾಮಾನ್ಯ)23 ಹೆಣ್ಣೂರು( ಸಾಮಾನ್ಯ)24 ಎಚ್‌ಬಿಆರ್ ಲೇಔಟ್ ( ಹಿಂದುಳಿದ ವರ್ಗ ‘ಅ’)25 ಗೋವಿಂದಪುರ (ಸಾಮಾನ್ಯ ಮಹಿಳೆ)26 ಸಮಾಧಾನ ನಗರ (ಸಾಮಾನ್ಯ ಮಹಿಳೆ)27 ಕೆ.ಜೆ.ಹಳ್ಳಿ (ಸಾಮಾನ್ಯ ಮಹಿಳೆ)28 ವೆಂಕಟೇಶಪುರಂ (ಸಾಮಾನ್ಯ)29 ಲಿಂಗರಾಜಪುರ ( ಹಿಂದುಳಿದ ವರ್ಗ ‘ಬ’)30 ಕಾಚರಕನಹಳ್ಳಿ(ಸಾಮಾನ್ಯ ಮಹಿಳೆ)31 ಕಲ್ಯಾಣನಗರ(ಸಾಮಾನ್ಯ ಮಹಿಳೆ)32 ಬಾಣಸವಾಡಿ ( ಹಿಂದುಳಿದ ವರ್ಗ ‘ಅ’)33ಎಚ್‌ಆರ್‌ಬಿಆರ್ ಲೇಔಟ್ (ಹಿಂದುಳಿದ ವರ್ಗ ‘ಬ’ ಮಹಿಳೆ)34 ಸುಬ್ಬಯ್ಯನಪಾಳ್ಯ(ಸಾಮಾನ್ಯ ಮಹಿಳೆ)35 ಕಮ್ಮನಹಳ್ಳಿ (ಪರಿಶಿಷ್ಟ ಜಾತಿ)36 ಮಾರುತಿಸೇವಾ ನಗರ(ಸಾಮಾನ್ಯ)37 ಜೀವನಹಳ್ಳಿ (ಪರಿಶಿಷ್ಟ ಜಾತಿ ಮಹಿಳೆ)38 ಶಾಂಪುರ (ಸಾಮಾನ್ಯ ಮಹಿಳೆ)39 ಕಾವಲ್ ಬೈರಸಂದ್ರ(ಸಾಮಾನ್ಯ ಮಹಿಳೆ)40 ಶಕ್ತಿ ನಗರ ( ಹಿಂದುಳಿದ ವರ್ಗ ‘ಅ’ ಮಹಿಳೆ)41 ಪೆರಿಯಾರ್ ನಗರ ( ಹಿಂದುಳಿದ ವರ್ಗ ‘ಅ’ ಮಹಿಳೆ)42 ಅರುಣಾ ಆಸಿಫ್ ಅಲಿ ವಾರ್ಡ್ (ಪರಿಶಿಷ್ಟ ಜಾತಿ ಮಹಿಳೆ)43 ವರಲಕ್ಷ್ಮೀ ನಗರ(ಸಾಮಾನ್ಯ ಮಹಿಳೆ)44 ದೊಡ್ಡಣ್ಣ ನಗರ (ಪರಿಶಿಷ್ಟ ಜಾತಿ)45 ಕುಶಾಲ್ ನಗರ ( ಹಿಂದುಳಿದ ವರ್ಗ ‘ಅ’)46 ಸಗಾಯಪುರಂ (ಪರಿಶಿಷ್ಟ ಜಾತಿ)47 ಪುಲಕೇಶಿನಗರ(ಸಾಮಾನ್ಯ)48 ಎಸ್.ಕೆ.ಗಾರ್ಡನ್(ಸಾಮಾನ್ಯ)49 ಜಯಚಾಮರಾಜೇಂದ್ರ ನಗರ(ಸಾಮಾನ್ಯ)50 ದಿಣ್ಣೂರು(ಸಾಮಾನ್ಯ )51 ಮನೋರಾಯನಪಾಳ್ಯ(ಸಾಮಾನ್ಯ ಮಹಿಳೆ)52 ವಿಶ್ವನಾಥ ನಾಗೇನಹಳ್ಳಿ (ಸಾಮಾನ್ಯ) 53, ಆರ್.ಟಿ.ನಗರ(ಸಾಮಾನ್ಯ)54 ಗಂಗೇನಹಳ್ಳಿ ( ಹಿಂದುಳಿದ ವರ್ಗ ‘ಅ’ ಮಹಿಳೆ)55 ಗಂಗಾನಗರ( ಹಿಂದುಳಿದ ವರ್ಗ ‘ಅ’ ಮಹಿಳೆ)56 ಹೆಬ್ಬಾಳ (ಪರಿಶಿಷ್ಟ ಜಾತಿ)57 ಭೂಪಸಂದ್ರ(ಸಾಮಾನ್ಯ ಮಹಿಳೆ)58 ನಾಗಶೆಟ್ಟಿಹಳ್ಳಿ(ಸಾಮಾನ್ಯ)59 ಗೆದ್ದಲಹಳ್ಳಿ( ಹಿಂದುಳಿದ ವರ್ಗ ‘ಅ’)60 ಜಾಲಹಳ್ಳಿ (ಪರಿಶಿಷ್ಟ ಪಂಗಡ ಮಹಿಳೆ)61 ಎಚ್‌ಎಂಟಿ ವಾರ್ಡ್(ಸಾಮಾನ್ಯ)62 ಬೃಂದಾವನ ನಗರ ( ಹಿಂದುಳಿದ ವರ್ಗ ‘ಅ’ ಮಹಿಳೆ)63 ಜೆಪಿ ಪಾರ್ಕ್( ಹಿಂದುಳಿದ ವರ್ಗ ‘ಅ’)64 ಯಶವಂತಪುರ(ಸಾಮಾನ್ಯ)65 ಅಬ್ಬಿಗೆರೆ (ಹಿಂದುಳಿದ ವರ್ಗ ‘ಅ’ ಮಹಿಳೆ)66 ಕಮ್ಮಗೊಂಡನಹಳ್ಳಿ(ಸಾಮಾನ್ಯ)67 ಶೆಟ್ಟಿಹಳ್ಳಿ (ಪರಿಶಿಷ್ಟ ಜಾತಿ ಮಹಿಳೆ)68 ಮಲ್ಲಸಂದ್ರ(ಸಾಮಾನ್ಯ)69 ಬಾಗಲಗುಂಟೆ(ಸಾಮಾನ್ಯ ಮಹಿಳೆ)70 ಮಂಜುನಾಥ ನಗರ (ಸಾಮಾನ್ಯ ಮಹಿಳೆ)71 ನೆಲೆ ಮಹೇಶ್ವರಮ್ಮ ದೇವಸ್ಥಾನ ವಾರ್ಡ್ (ಹಿಂದುಳಿದ ವರ್ಗ ‘ಅ’)72 ದಾಸರಹಳ್ಳಿ(ಸಾಮಾನ್ಯ)---
ಪಶ್ಚಿಮ ನಗರ ಪಾಲಿಕೆ
ಒಟ್ಟು ವಾರ್ಡ್ ಸಂಖ್ಯೆ:112ಪರಿಶಿಷ್ಟ ಜಾತಿ: 9 (4 ಮಹಿಳೆ)ಪರಿಶಿಷ್ಟ ಪಂಗಡ: 2 (1 ಮಹಿಳೆ)ಹಿಂದುಳಿದ ವರ್ಗ ‘ಅ’: 30 (15 ಮಹಿಳೆ)ಹಿಂದುಳಿದ ವರ್ಗ ‘ಬ’: 7 (3 ಮಹಿಳೆ)ಸಾಮಾನ್ಯ: 64 (32 ಮಹಿಳೆ)
1. ನಾಗಸಂದ್ರ (ಸಾಮಾನ್ಯ)
2.ಚೊಕ್ಕಸಂದ್ರ (ಹಿಂದುಳಿದ ವರ್ಗ ‘ಅ’)3.ನೆಲಗೆದರನಹಳ್ಳಿ (ಸಾಮಾನ್ಯ ಮಹಿಳೆ)4.ಪಾರ್ವತಿ ನಗರ(ಸಾಮಾನ್ಯ)5. ರಾಜೇಶ್ವರಿ ನಗರ (ಸಾಮಾನ್ಯ ಮಹಿಳೆ)6. ಶಿವಪುರ (ಪರಿಶಿಷ್ಟ ಜಾತಿ)7. ರಾಜಗೋಪಾಲ ನಗರ (ಸಾಮಾನ್ಯ)8. ಹೆಗ್ಗನಹಳ್ಳಿ (ಸಾಮಾನ್ಯ)9. ಶ್ರೀಗಂಧ ನಗರ (ಸಾಮಾನ್ಯ ಮಹಿಳೆ)10. ಸುಂಕದಕಟ್ಟೆ(ಸಾಮಾನ್ಯ ಮಹಿಳೆ)11. ದೊಡ್ಡ ಬಿದರಕಲ್ಲು (ಸಾಮಾನ್ಯ)12.ಅಂದ್ರಹಳ್ಳಿ (ಪರಿಶಿಷ್ಟ ಪಂಗಡ)13. ನಾಡಪ್ರಭು ಕೆಂಪೇಗೌಡ ನಗರ(ಸಾಮಾನ್ಯ)14. ಹೇರೋಹಳ್ಳಿ (ಹಿಂದುಳಿದ ವರ್ಗ ‘ಅ’ ಮಹಿಳೆ)15. ಬೈದರಹಳ್ಳಿ (ಹಿಂದುಳಿದ ವರ್ಗ ‘ಅ’)16. ಉಲ್ಲಾಳ್ (ಸಾಮಾನ್ಯ)17. ನಾಗದೇವನಹಳ್ಳಿ(ಸಾಮಾನ್ಯ ಮಹಿಳೆ)18. ಕೆಂಗಲ್ ಹನುಮಂತಯ್ಯ ಪೂರ್ವ (ಸಾಮಾನ್ಯ)19.ಶಿವನಪಾಳ್ಯ(ಸಾಮಾನ್ಯ ಮಹಿಳೆ)20. ಕೆಂಗೇರಿ ಕೋಟೆ (ಹಿಂದುಳಿದ ವರ್ಗ ‘ಅ’)21. ಕೆಂಗೇರಿ (ಹಿಂದುಳಿದ ವರ್ಗ ‘ಅ’ ಮಹಿಳೆ)22. ಬಂಗಾರಪ್ಪ ನಗರ (ಸಾಮಾನ್ಯ)23. ರಾಜರಾಜೇಶ್ವರಿ ನಗರ ( ಹಿಂದುಳಿದ ವರ್ಗ ‘ಬ’)24. ಜ್ಞಾನಭಾರತಿ(ಸಾಮಾನ್ಯ ಮಹಿಳೆ)25. ವಿನಾಯಕ ಲೇಔಟ್ (ಹಿಂದುಳಿದ ವರ್ಗ ‘ಅ’ ಮಹಿಳೆ)26. ಮಲ್ಲತ್ತಹಳ್ಳಿ (ಹಿಂದುಳಿದ ವರ್ಗ ‘ಅ’ ಮಹಿಳೆ)27. ಶ್ರೀಗಂಧದ ಕಾವಲ್ (ಹಿಂದುಳಿದ ವರ್ಗ ‘ಅ’)28. ಕೊಟ್ಟಿಗೆಪಾಳ್ಯ (ಸಾಮಾನ್ಯ)29. ಚೌಡೇಶ್ವರಿ ನಗರ(ಸಾಮಾನ್ಯ)30. ಕೆಂಪೇಗೌಡ ಲೇಔಟ್(ಸಾಮಾನ್ಯ ಮಹಿಳೆ)31. ಫ್ರೀಡಂಫೈಟರ್ ವಾರ್ಡ್(ಸಾಮಾನ್ಯ)32. ಲಗ್ಗೆರೆ(ಸಾಮಾನ್ಯ)33. ಲಕ್ಷ್ಮಿದೇವಿ ನಗರ (ಪರಿಶಿಷ್ಟ ಜಾತಿ)34. ಪೀಣ್ಯ (ಪರಿಶಿಷ್ಟ ಜಾತಿ ಮಹಿಳೆ)35. ಗೊರಗುಂಟೆಪಾಳ್ಯ (ಪರಿಶಿಷ್ಟ ಜಾತಿ ಮಹಿಳೆ)36. ನಾಲ್ವಡಿ ಕೃಷ್ಣರಾಜ ಒಡೆಯರ್ ವಾರ್ಡ್ (ಪರಿಶಿಷ್ಟ ಜಾತಿ)37. ಡಾ.ಪುನೀತ್‌ರಾಜ್‌ಕುಮಾರ್ ವಾರ್ಡ್(ಸಾಮಾನ್ಯ)38. ನಂದಿನಿ ಲೇಔಟ್ (ಹಿಂದುಳಿದ ವರ್ಗ ‘ಅ’)39. ಜೈ ಮಾರುತಿ ನಗರ(ಸಾಮಾನ್ಯ ಮಹಿಳೆ)40. ಮಹಾಲಕ್ಷ್ಮಿಪುರ(ಸಾಮಾನ್ಯ)41. ನಾಗಪುರ(ಸಾಮಾನ್ಯ)42. ರಾಜ ಮಯೂರವರ್ಮ ವಾರ್ಡ್(ಸಾಮಾನ್ಯ ಮಹಿಳೆ)43. ಕೇತಮಾರನಹಳ್ಳಿ(ಸಾಮಾನ್ಯ ಮಹಿಳೆ)44. ಶಂಕರ ಮಠ (ಹಿಂದುಳಿದ ವರ್ಗ ‘ಅ’)45. ಶಕ್ತಿ ಗಣಪತಿ ನಗರ (ಹಿಂದುಳಿದ ವರ್ಗ ‘ಅ’ ಮಹಿಳೆ)46. ಕಮಲಾನಗರ(ಸಾಮಾನ್ಯ ಮಹಿಳೆ)47. ವೃಷಭಾವತಿ ನಗರ (ಸಾಮಾನ್ಯ ಮಹಿಳೆ)48. ಮತ್ತಿಕೆರೆ(ಸಾಮಾನ್ಯ ಮಹಿಳೆ)49. ಅರಮನೆ ನಗರ (ಹಿಂದುಳಿದ ವರ್ಗ ‘ಅ’)50. ಸದಾಶಿವ ನಗರ(ಸಾಮಾನ್ಯ)51. ರಾಜಮಹಲ್ ( ಹಿಂದುಳಿದ ವರ್ಗ ‘ಬ’) 52. ಕೋದಂಡರಾಮಪುರ(ಸಾಮಾನ್ಯ ಮಹಿಳೆ)53. ಮಲ್ಲೇಶ್ವರ (ಹಿಂದುಳಿದ ವರ್ಗ ‘ಅ’)54. ಸುಬೇದಾರ್ ಪಾಳ್ಯ(ಸಾಮಾನ್ಯ ಮಹಿಳೆ)55. ಸುಬ್ರಹ್ಮಣ್ಯ ನಗರ(ಸಾಮಾನ್ಯ ಮಹಿಳೆ)56. ಗಾಯತ್ರಿ ನಗರ(ಸಾಮಾನ್ಯ)57. ಕುವೆಂಪು ವಾರ್ಡ್(ಸಾಮಾನ್ಯ ಮಹಿಳೆ)58. ದಯಾನಂದ ನಗರ (ಪರಿಶಿಷ್ಟ ಜಾತಿ ಮಹಿಳೆ)59. ಬಂಡಿರೆಡ್ಡಿ ವೃತ್ತ ವಾರ್ಡ್ (ಪರಿಶಿಷ್ಟ ಜಾತಿ)60. ಪ್ರಕಾಶ್ ನಗರ (ಹಿಂದುಳಿದ ವರ್ಗ ‘ಅ’ ಮಹಿಳೆ)61. ದ.ರ.ಬೇಂದ್ರೆ ವಾರ್ಡ್ ( ಹಿಂದುಳಿದ ವರ್ಗ ‘ಬ’)62. ರಾಮಮಂದಿರ (ಸಾಮಾನ್ಯ ಮಹಿಳೆ)63. ರಾಜಾಜಿನಗರ(ಸಾಮಾನ್ಯ)64. ಶಿವನಗರ (ಸಾಮಾನ್ಯ)65. ಮಂಜುನಾಥ ನಗರ (ಹಿಂದುಳಿದ ವರ್ಗ ‘ಅ’)66.ಸಾಣೇ ಗುರುವನಹಳ್ಳಿ (ಹಿಂದುಳಿದ ವರ್ಗ ‘ಅ’)67. ಬಸವೇಶ್ವರ ನಗರ (ಸಾಮಾನ್ಯ ಮಹಿಳೆ)68. ಕಾಮಾಕ್ಷಿಪಾಳ್ಯ (ಸಾಮಾನ್ಯ)69. ಅಗ್ರಹಾರ ದಾಸರಹಳ್ಳಿ (ಸಾಮಾನ್ಯ)70. ಡಾ.ರಾಜಕುಮಾರ ವಾರ್ಡ್ (ಸಾಮಾನ್ಯ)71. ತಿಮ್ಮೇನಹಳ್ಳಿ (ಹಿಂದುಳಿದ ವರ್ಗ ‘ಅ’)72. ಕಾವೇರಿಪುರ(ಸಾಮಾನ್ಯ ಮಹಿಳೆ)73. ಡಾ.ವಿಷ್ಣುವರ್ಧನ ವಾರ್ಡ್ (ಹಿಂದುಳಿದ ವರ್ಗ ‘ಅ’ ಮಹಿಳೆ)74. ಪಟ್ಟೇಗಾರ ಪಾಳ್ಯ(ಸಾಮಾನ್ಯ)75. ಮಾರೇನಹಳ್ಳಿ ಪೂರ್ವ (ಹಿಂದುಳಿದ ವರ್ಗ ‘ಅ’ ಮಹಿಳೆ)76. ಮೂಡಲಪಾಳ್ಯ (ಹಿಂದುಳಿದ ವರ್ಗ ‘ಅ’ ಮಹಿಳೆ)77. ಮಾರುತಿ ಮಂದಿರ ವಾರ್ಡ್ ( ಹಿಂದುಳಿದ ವರ್ಗ ‘ಬ’ ಮಹಿಳೆ)78. ಅನುಭವನಗರ (ಹಿಂದುಳಿದ ವರ್ಗ ‘ಅ’ ಮಹಿಳೆ)79. ನಾಗರಭಾವಿ (ಸಾಮಾನ್ಯ)80. ಚಂದ್ರಲೇಔಟ್ (ಹಿಂದುಳಿದ ವರ್ಗ ‘ಅ’)81. ನಾಯಂಡಹಳ್ಳಿ (ಪರಿಶಿಷ್ಟ ಜಾತಿ)82. ಅತ್ತಿಗುಪ್ಪೆ (ಹಿಂದುಳಿದ ವರ್ಗ ‘ಅ’)83. ಹಂಪಿನಗರ (ಹಿಂದುಳಿದ ವರ್ಗ ‘ಬ’)84. ಹೊಸಹಳ್ಳಿ (ಹಿಂದುಳಿದ ವರ್ಗ ‘ಅ’)85. ಆದಿಚುಂಚನಗಿರಿ ವಾರ್ಡ್(ಸಾಮಾನ್ಯ ಮಹಿಳೆ)86. ವಿದ್ಯಾರಣ್ಯ ನಗರ (ಹಿಂದುಳಿದ ವರ್ಗ ‘ಅ’ ಮಹಿಳೆ)87. ಕೆ.ಪಿ.ಅಗ್ರಹಾರ (ಹಿಂದುಳಿದ ವರ್ಗ ‘ಅ’ ಮಹಿಳೆ)88. ಸಂಗೊಳ್ಳಿ ರಾಯಣ್ಣ ವಾರ್ಡ್ (ಪರಿಶಿಷ್ಟ ಪಂಗಡ ಮಹಿಳೆ)89. ಬಾಪೂಜಿ ನಗರ (ಹಿಂದುಳಿದ ವರ್ಗ ‘ಅ’)90. ಕೃಷ್ಣದೇವರಾಯ ವಾರ್ಡ್ (ಪರಿಶಿಷ್ಟ ಜಾತಿ ಮಹಿಳೆ)91. ಗಾಳಿ ಆಂಜನೇಯ ದೇಗುಲ ವಾರ್ಡ್(ಸಾಮಾನ್ಯ ಮಹಿಳೆ)92. ಮುನೇಶ್ವರ ಬ್ಲಾಕ್ (ಸಾಮಾನ್ಯ ಮಹಿಳೆ )93. ಅವಲಹಳ್ಳಿ (ಹಿಂದುಳಿದ ವರ್ಗ ‘ಅ’ ಮಹಿಳೆ)94. ದೀಪಾಂಜಲಿ ನಗರ(ಸಾಮಾನ್ಯ)95. ಸ್ವಾಮಿ ವಿವೇಕಾನಂದ ವಾರ್ಡ್(ಸಾಮಾನ್ಯ)96. ಕತ್ರಿಗುಪ್ಪೆ (ಸಾಮಾನ್ಯ ಮಹಿಳೆ)97. ಶ್ರೀನಿವಾಸ ನಗರ(ಸಾಮಾನ್ಯ ಮಹಿಳೆ)98. ಅಶೋಕ ನಗರ(ಸಾಮಾನ್ಯ ಮಹಿಳೆ)99. ಟಿ.ಆರ್.ಶಾಮಣ್ಣ ನಗರ(ಸಾಮಾನ್ಯ)100. ಶ್ರೀನಗರ ( ಹಿಂದುಳಿದ ವರ್ಗ ‘ಬ’ ಮಹಿಳೆ)101. ಕೆಂಪಾಂಬೂದಿ ವಾರ್ಡ್ (ಸಾಮಾನ್ಯ)102. ಹನುಮಂತನಗರ (ಸಾಮಾನ್ಯ ಮಹಿಳೆ)103. ಎನ್.ಆರ್.ಕಾಲೋನಿ(ಸಾಮಾನ್ಯ)104. ತ್ಯಾಗರಾಜನಗರ (ಸಾಮಾನ್ಯ ಮಹಿಳೆ)105. ಯಡಿಯೂರು ( ಹಿಂದುಳಿದ ವರ್ಗ ‘ಬ’ ಮಹಿಳೆ)106. ದೇವಗಿರಿ ದೇವಸ್ಥಾನ ವಾರ್ಡ್(ಸಾಮಾನ್ಯ ಮಹಿಳೆ)107. ಧರ್ಮಗಿರಿ ವಾರ್ಡ್(ಸಾಮಾನ್ಯ ಮಹಿಳೆ) 108. ಗಣೇಶ ಮಂದಿರ ವಾರ್ಡ್ (ಹಿಂದುಳಿದ ವರ್ಗ ‘ಅ’ ಮಹಿಳೆ)109. ಕಾಮಾಕ್ಯ ಲೇಔಟ್(ಹಿಂದುಳಿದ ವರ್ಗ ‘ಅ’ ಮಹಿಳೆ)110. ಚಿಕ್ಕಲಸಂದ್ರ(ಸಾಮಾನ್ಯ)111. ಇಟ್ಟಮಡು (ಸಾಮಾನ್ಯ ಮಹಿಳೆ)112. ಹೊಸಕೆರೆಹಳ್ಳಿ (ಸಾಮಾನ್ಯ)

