ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಹಳೆ ಬಸ್‌ನಿಲ್ದಾಣದಲ್ಲಿ ಹೂ ಮಾರಾಟಗಾರರ ಹಾಗೂ ಹೂ ಬೆಳೆಗಾರರ ಸಮಸ್ಯೆ ಆಲಿಸಲು ಮಾರುಕಟ್ಟೆಗೆ ಭೇಟಿ ನೀಡಿದ ಸಂಸದ ಮಲ್ಲೇಶಬಾಬು ಮಾರುಕಟ್ಟೆ ವೀಕ್ಷಿಣೆ ಮಾಡಿ ಹೂ ಬೆಳೆಗಾರರಿಗೆ ತೊಂದರೆ ನೀಡದಂತೆ ನಗರಸಭೆ ಕಮೀಷನರ್ ನವೀನ್ ಚಂದ್ರ ಅವರಿಗೆ ಸೂಚನೆ ನೀಡಿ ಮಾರುಕಟ್ಟೆಗೆ ಮೂಲಭೂತ ಸೌರ್ಕಯ ಒದಗಿಸುವಂತೆ ಸೂಚಿಸಿದರು.ಮೂರು ದಿನದ ಹಿಂದೆ ಹೂ ಮಾರುಕಟ್ಟೆಗೆ ಭೇಟಿ ನೀಡಿದ ನಗರಸಭೆ ಆಯುಕ್ತ ನವೀನ್‌ಚಂದ್ರ, ರೈತರ ಹೂ ಹರಾಜು ಹಾಕದಂತೆ ಸೂಚನೆ ನೀಡಿದ್ದರು. ಇದ್ದರಿಂದ ಕೆರಳಿದ್ದ ರೈತರು ವ್ಯಾಪಾರಸ್ಥರು ರೈತಸಂಘದವರು ಹೂವನ್ನು ರಸ್ತೆಗೆ ಸುರಿಯುವ ನಿರ್ಧಾರ ಕೈಗೊಂಡಿರುವ ವಿಷಯ ತಿಳಿದು ಮಾರುಕಟ್ಟೆಗೆ ಬಂದ ಸಂಸದರು ಹೂಬೆಳೆಗಾರರ ರೈತರ ಜೊತೆ ಚರ್ಚಿಸಿದರು.
ರೈತರಿಗೆ ತೊಂದರೆ ಆಗದಿರಲಿಆಗ ಸ್ಥಳದಲ್ಲಿದ್ದ ನಗರಸಭೆ ಕಮೀಷನರ್‌ರಿಗೆ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ, ಆದರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಹೂ ಬೆಳೆಗಾರರಿಗೆ ತೊಂದರೆಯಾಗದಂತೆ ಕ್ರಮವಹಿಸಿ. ಜೊತೆಗೆ ಇಂದಿರಾ ಕ್ಯಾಂಟೀನ್ ಪಕ್ಕದ ಸ್ಥಳ ಅಭಿವೃದ್ಧಿಪಡಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.
೫೦-೬೦ ವರ್ಷದಿಂದ ಹಳೇ ಬಸ್ ನಿಲ್ದಾಣೆದಲ್ಲಿ ಹೂ ವ್ಯಾಪಾರ ಮಾಡಿಕೊಂಡು ರೈತರು ತರುವ ಹೂವನ್ನು ಹರಾಜು ಹಾಕಿ ಉತ್ತಮ ಬೆಲೆ ನೀಡುತ್ತಿದ್ದ ಈಗ ಏಕಾಏಕಿ ನಗರಸಭೆ ಹೊಸ ಕಾನೂನು ತರುವುದು ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ರೈತರಿಗೆ ತೊಂದರೆಯಾದರೆ ರೈತರ ಪರವಾಗಿ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ ಸಂಸದರು, ವ್ಯಾಪಾರಸ್ಥರು ರೈತರು ಸಹ ಮಾರುಕಟ್ಟೆಯಲ್ಲಿ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸಹಕಾರಿಸಬೇಕೆಂದು ಸಲಹೆ ನೀಡಿದರು. ಸಂಚಾರಕ್ಕೆ ಅಡಚಣೆ ಆಗದಿರಲಿಗಲ್ಪೇಟೆ ಉಪನೀರಿಕ್ಷಿ ಭಾರತಿ ಮಾತನಾಡಿ, ರೈತರು ಹೂ ತಂದ ವಾಹನಗಳನ್ನು ಬೇರೆ ಕಡೆ ಪಾರ್ಕಿಂಗ್ ಮಾಡಿ ಸಂಚಾರಿ ಅಡಚಣೆಯಾಗದಂತೆ ರೈತರ ಸಹಕರಿಸಿ ಯಾವುದೇ ದಂಡ ಹಾಕಿಸಿಕೊಳ್ಳದಂತೆ ರೈತರಿಗೆ ಸಲಹೆ ನೀಡಿದರು. ಆಯುಕ್ತರ ಭರವಸೆ
ನಗರಸಭೆ ಆಯುಕ್ತ ನವೀನ್‌ಚಂದ್ರ ಮಾತನಾಡಿ, ರೈತರಿಗೆ ವ್ಯಾಪಾರಸ್ಥರಿಗೆ ತೊಂದರೆ ನೀಡುವುದಿಲ್ಲ ಜೊತೆಗೆ ಒತ್ತುವರಿ ಮಾಡಿಕೊಂಡಿರುವ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿ ಇಂದಿರಾ ಕ್ಯಾಂಟೀನ್ ಪಕ್ಕ ಪಾರ್ಕಿಂಗ್ ವ್ಯವಸ್ಥೆ ಮಾಡುವ ಭರವಸೆ ನೀಡಿದರು.ಮುಖಂಡರಾದ ಇರಗಸಂದ್ರ ವಿಶ್ವನಾಥ, ಜಿಲ್ಲಾಧಕ್ಷ ಈಕಂಬಳ್ಳಿ ಮಂಜುನಾಥ, ಕೆ.ಎಂ.ಕೆ ಹೂ ಮಾರಾಟಗಾರರಾದ ಗೋಪಾಲ ಕೃಷ್ಣ, ಕಿಲಾರಿಪೇಟೆ ಮಣಿ, ಮುನಿಯಪ್ಪ, ವಿನಯ್, ಕೃಷ್ಣಮೂರ್ತಿ ಚಲಪತಿ, ಗಿರೀಶ್, ನಟರಾಜ್, ದಿಂಬ ನಾಗರಾಜ್ ಇದ್ದರು.