ಸಾರಾಂಶ
ಅಂತರ್ಜಲ ಅಭಿವೃದ್ಧಿ, ನಿರ್ವಹಣೆ ಅಭ್ಯಾಸಗಳ ತೃತೀಯ ಸ್ತರದ ತರಬೇತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಚಾಮರಾಜನಗರ
ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ದಗಳೇ ಸಂಭವಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ಕಳವಳ ವ್ಯಕ್ತಪಡಿಸಿದರು.ನಗರದ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಜಲಶಕ್ತಿ ಮಂತ್ರಾಲಯ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಮಂತ್ರಾಲಯ, ಕೇಂದ್ರೀಯ ಅಂತರ್ಜಲ ಮಂಡಳಿ ವತಿಯಿಂದ ಆಯೋಜಿಸಿದ್ದ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಅಭ್ಯಾಸಗಳ ಕುರಿತ ತೃತೀಯ ಸ್ತರದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೇವಲ ೨.೭ ರಷ್ಟು ಮಾತ್ರ ಕುಡಿಯುವ ನೀರು ಇದ್ದು, ಅಂತರ್ಜಲ ಮಟ್ಟವು ಸಹ ಕುಸಿತ ಕಾಣುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಯುದ್ಧಗಳು ಸಂಭವಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.ನಗರಸಭೆ, ಪುರಸಭೆಗಳಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಅರಿವು ಅಗತ್ಯವಾಗಿರುವುದರಿಂದ ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಡೆದುಕೊಂಡು, ನೀರನ್ನು ಮಿತವಾಗಿ ಹೇಗೆ ಬಳಕೆ ಮಾಡಬೇಕು ಎಂಬುದರ ಬಗ್ಗೆ ಜನರ ಅರಿವು ಮೂಡಿಸಿ, ನೀರನ್ನು ಉಳಿಸಲು ಪಣ ತೊಡಿ ಎಂದು ಸಲಹೆ ನೀಡಿದರು.
ಹಲವಡೆ ನೀರಿನ ಬಳಕೆಗಿಂತ ದುರುಪಯೋಗವೇ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಬೇಕಾಗಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನೀರಿನ ಕೊರತೆ ಹೆಚ್ಚಾಗಿದ್ದರೂ ಸಹ ಅವರು ಹೊರ ಜಿಲ್ಲೆಗಳಿಗೆ ತರಕಾರಿ ಪದಾರ್ಥಗಳನ್ನು ರಫ್ತು ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ನೀರಿನ ಬಳಕೆ ಬಗ್ಗೆ ತಿಳಿಸಿದರೆ ಅವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಹೊಂದಲಿದ್ದಾರೆ. ಆದ್ದರಿಂದ ಗ್ರಾಪಂ ಮಟ್ಟದಲ್ಲಿ ಹೆಚ್ಚಿನ ಅರಿವು ಅಗತ್ಯ ಎಂದರು.ನೀರಿನ ಅಭಾವದಿಂದ ಕಾಡಿನಲ್ಲೂ ಸಹ ನೀರಿಲ್ಲದೇ ಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದರು.
ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಪ್ರತಿ ವರ್ಷ ಎಷ್ಟು ನೀರನ್ನು ಬಳಕೆ ಮಾಡಲಾಗುತ್ತಿದೆ ಎಂದು ಸರ್ವೇ ಮಾಡಲಾಗುತ್ತಿದ್ದು, ಅದರ ಪ್ರಕಾರ ಚಾಮರಾಜನಗರದಲ್ಲಿ ಶೇ.೯೯ ರಷ್ಟು, ಗುಂಡ್ಲುಪೇಟೆಯಲ್ಲಿ ಶೇ. ೧೧೬ ರಷ್ಟು, ಕೊಳ್ಳೇಗಾಲ, ಹನೂರು ಹಾಗೂ ಯಳಂದೂರಿನಲ್ಲಿ ತಲಾ ಶೇ. ೮೦-೯೦ ರಷ್ಟು ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಆರ್. ಧನಲಕ್ಷ್ಮೀ, ಸಿಜಿಡಬ್ಲ್ಯುಬಿನ ವಿಜ್ಞಾನಿಗಳಾದ ಕ್ಯಾರೋಲಿನ್ ಲೂಯಿಸ್, ಯೋಗೇಶ್, ಶ್ವೇತಾ, ನಿವೃತ್ತ ಹಿರಿಯ ವಿಜ್ಞಾನಿ ಸೂರ್ಯನಾರಾಯಣ, ರವಿಕುಮಾರ್ ಇದ್ದರು.
ಮಳೆ ನೀರು ಸಮರ್ಪಕವಾಗಿ ಬಳಸಿಸಿಜಿಡಬ್ಲ್ಯೂಬಿ ಹಿರಿಯ ವಿಜ್ಞಾನಿ ಎಚ್.ಪಿ. ಜಯಪ್ರಕಾಶ್ ಮಾತನಾಡಿ, ನಿರಂತರವಾಗಿ ಅಂತರ್ಜಲವನ್ನು ತೆಗೆಯುತ್ತಿರುವುದರಿಂದ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಅಂತರ್ಜಲದ ಮಹತ್ವವನ್ನು ತಿಳಿಸಬೇಕಾಗಿದೆ. ವರ್ಷದಲ್ಲಿ ೩ ರಿಂದ ೪ ತಿಂಗಳು ಬರುವ ಮಳೆಯನ್ನು ವರ್ಷಪೂರ್ತಿ ಬಳಕೆ ಮಾಡಬೇಕಾಗಿರುವುದರಿಂದ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಅಭ್ಯಾಸಗಳ ಕುರಿತ ತೃತೀಯ ಸ್ತರದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ಉದ್ಘಾಟಿಸಿದರು.ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಅಭ್ಯಾಸಗಳ ಕುರಿತ ತೃತೀಯ ಸ್ತರದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ಉದ್ಘಾಟಿಸಿದರು.