ದಾವಣಗೆರೆ ನಗರದ ಜವಳಿ ವ್ಯಾಪಾರಿ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‌ನ ಬಿ.ಎಸ್.ಸಿ. ಎಕ್ಸ್‌ಕ್ಲೂಸಿವ್‌ ಶಾಪಿಂಗ್ ಹಬ್ಬ 2024ರ 3ನೇ ವಾರದ ಲಕ್ಕಿ ಡ್ರಾ ವಿಜೇತರ ಆಯ್ಕೆ ಮಾಡಲಾಯಿತು. 3ನೇ ವಾರದ ಡ್ರಾವನ್ನು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‌ ಮಾಲೀಕ ಬಿ.ಎಸ್.ಮೃನಾಲ್, ಗ್ರಾಹಕರು ಹಾಗೂ ಸಿಬ್ಬಂದಿ ಸಮ್ಮುಖ ನೆರವೇರಿಸಲಾಯಿತು.

- ಬಿಎಸ್‌ಸಿ ಎಕ್ಸ್‌ಕ್ಲೂಸಿವ್‌ ಶಾಪಿಂಗ್‌ ಹಬ್ಬ ಕಾರ್ಯಕ್ರಮ - - - ದಾವಣಗೆರೆ: ನಗರದ ಜವಳಿ ವ್ಯಾಪಾರಿ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‌ನ ಬಿ.ಎಸ್.ಸಿ. ಎಕ್ಸ್‌ಕ್ಲೂಸಿವ್‌ ಶಾಪಿಂಗ್ ಹಬ್ಬ 2024ರ 3ನೇ ವಾರದ ಲಕ್ಕಿ ಡ್ರಾ ವಿಜೇತರ ಆಯ್ಕೆ ಮಾಡಲಾಯಿತು.

3ನೇ ವಾರದ ಡ್ರಾವನ್ನು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್‌ ಮಾಲೀಕ ಬಿ.ಎಸ್.ಮೃನಾಲ್, ಗ್ರಾಹಕರು ಹಾಗೂ ಸಿಬ್ಬಂದಿ ಸಮ್ಮುಖ ನೆರವೇರಿಸಲಾಯಿತು.

ದಾವಣಗೆರೆಯ ಕೆಟಿಜೆ ನಗರದ ಗ್ರಾಹಕರಾದ ಮುಸ್ಕಾನ್ ಅಂಜುಂ (ಕೂಪನ್ ಸಂ. 23488) ವಿಜೇತರಾಗಿ ಆಯ್ಕೆಯಾಗಿ, ಮೂರನೇ ವಾರದ ಬಹುಮಾನ ಹೈಯರ್ ಕಂಪನಿಯ ವಾಷಿಂಗ್ ಮೆಷಿನ್‌ ತಮ್ಮದಾಗಿಸಿಕೊಂಡರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ ಮಾತನಾಡಿ, ನಗರದ ಬಿ.ಎಸ್.ಸಿ. ಸಂಸ್ಥೆ ನಮ್ಮ ರಾಜ್ಯದಲ್ಲಿ, ಅಂತರ ರಾಜ್ಯದಲ್ಲಿಯೂ ಪ್ರಸಿದ್ಧಿ ಹೊಂದಿದೆ. ಈ ಶಾಪಿಂಗ್ ಹಬ್ಬದಲ್ಲಿ ಬಟ್ಟೆಗಳ ಖರೀದಿ ಮುಖಾಂತರ ಬಹುಮಾನಗಳನ್ನು ಪಡೆದುಕೊಳ್ಳಲು ಹೇಳಿದರು.

ಸಂಸ್ಥೆ ಮಾಲೀಕ ಬಿ.ಎಸ್. ಮೃನಾಲ್ ಮಾತನಾಡಿ, ಬಿ.ಎಸ್.ಸಿ. ಎಕ್ಸ್‌ಕ್ಲೂಸಿವ್‌ ಶಾಪಿಂಗ್ ಹಬ್ಬ-2024ರ ಪ್ರಯೋಜನ ಪಡೆದುಕೊಳ್ಳಲು ಕೋರಿದರು.

ಗ್ರಾಹಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಇನ್ನೂ 3 ವಾರದ ಲಕ್ಕಿ ಡ್ರಾ ಬಾಕಿ ಇದೆ. 4ನೇ ವಾರದ ಬಹುಮಾನವಾಗಿ ಏರ್ ಕೂಲರ್, 5ನೇ ವಾರದ ಬಹುಮಾನವಾಗಿ ಹೋಂ ಥಿಯೇಟರ್ ಹಾಗೂ ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಇದೆ.

- - - -15ಕೆಡಿವಿಜಿ46ಃ:

ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‌ನ ಬಿಎಸ್‌ಸಿ ಎಕ್ಸ್‌ಕ್ಲೂಸಿವ್‌ ಶಾಪಿಂಗ್ ಹಬ್ಬ-2024ರ 3ನೇ ವಾರದ ಲಕ್ಕಿ ಡ್ರಾ ವಿಜೇತರ ಆಯ್ಕೆ ಮಾಡಲಾಯಿತು.