ರಾಯಚೂರು: ಭಾರತ-ಪಾಕಿಸ್ತಾನ ಏಕದಿನ ವಿಶ್ವಕಪ್ ಐತಿಹಾಸಿಕ ಪಂದ್ಯವನ್ನು ಬೃಹತ್ ಎಲ್‌ಇಡಿ ಪರದೆಯಲ್ಲಿ ಆಟಗಾರರ ಪರಾಕ್ರಮವನ್ನು ನೋಡಿ ಸಾರ್ವಜನಿಕರು ಸಂಭ್ರಮಿಸಿದರು. ವೀರ ಸಾವರ್ಕರ್ ಯೂಥ್ ಅಸೊಸಿಯೇಶನ್ನಿಂದ ಸ್ಥಳೀಯ ಆಶಾಪುರ ಫಂಕ್ಷನ್ ಹಾಲ್‌ನಲ್ಲಿ ದೊಡ್ಡ ಎಲ್‌ಇಡಿ ಪರದೆ ಅಳವಡಿಸಿ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಚಿತ್ರಮಂದಿರ ಮಾದರಿಯಲ್ಲಿ ಬೃಹತ್ ಪರದೆ ಅಳವಡಿಸಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಒಂದು ಗಂಟೆಯಿಂದಲೇ ಸಾಕಷ್ಟು ಜನ ಪಂದ್ಯ ವೀಕ್ಷಣೆಗೆ ಆಗಮಿಸಿದರು. ಆಯೋಜಕರು ಪಾಸ್‌ಗಳ ವ್ಯವಸ್ಥೆ ಮಾಡುವ ಮೂಲಕ ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದ್ದರು. ಯುವಕರು, ವೃದ್ಧರು, ಚಿಕ್ಕಮಕ್ಕಳು, ಯುವತಿಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಪಂದ್ಯ ವೀಕ್ಷಿಸಿದರು. ಯುವಕರು, ಮಕ್ಕಳಂತೂ ಭಾರತ ಉತ್ತಮ ಪ್ರದರ್ಶನ ನೀಡಿದಾಗ ಕುಣಿದು ಕುಪ್ಪಳಿಸುತ್ತಿದ್ದರು. ದೊಡ್ಡ ದೊಡ್ಡ ತ್ರಿವರ್ಣ ಧ್ವ್ವಜಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು. ಇದರ ಜತೆಗೆ ಸ್ಥಳೀಯ ಗಾಯಕರಿಂದ ಆರ್ಕೆಸ್ಟ್ರಾ ಕೂಡ ಆಯೋಜಿಸುವ ಮೂಲಕ ದೇಶಭಕ್ತಿ ಗೀತೆಗಳು, ರಸಮಂಜರಿ ಹಾಡುಗಳನ್ನು ಹಾಡಿಸಲಾಯಿತು. ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಸಂಘಟನೆಯ ಸದಸ್ಯರು, ಯುವಕರು, ಮಹಿಳೆಯರು, ಸಾರ್ವಜನಿಕರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.