ಕೋಚರಿ ಏತ ನೀರಾವರಿಯಿಂದ ಕೆನಾಲ್‌ಗಳಿಗೆ ಹರಿದ ನೀರು

| Published : Apr 12 2024, 01:02 AM IST

ಸಾರಾಂಶ

ಹುಕ್ಕೇರಿ ತಾಲೂಕಿನ ಕೋಚರಿ ಏತ ನೀರಾವರಿ ಯೋಜನೆ ಮೂಲಕ ಗುರುವಾರ ವಿವಿಧ ಗ್ರಾಮಗಳ ಕೆನಾಲ್‌ಗಳಿಗೆ ನೀರು ಹರಿಬೀಡಲಾಯಿತು. ಕೋಚರಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಸುಲ್ತಾನಪೂರ, ಶಿರಗಾಂವ, ಬೆಣಿವಾಡ, ಮದಿಹಳ್ಳಿ, ಮದಮಕ್ಕನಾಳ, ಬಸ್ತವಾಡ, ಹುಕ್ಕೇರಿ, ಮಸರಗುಪ್ಪಿ ಕಾಲುವೆಗಳಿಗೆ ನೀರು ಹರಿಬಿಡಲಾಯಿತು. ಇದರಿಂದ ಈ ಪ್ರದೇಶಗಳ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಿದಂತಾಗಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ ತಾಲೂಕಿನ ಕೋಚರಿ ಏತ ನೀರಾವರಿ ಯೋಜನೆ ಮೂಲಕ ಗುರುವಾರ ವಿವಿಧ ಗ್ರಾಮಗಳ ಕೆನಾಲ್‌ಗಳಿಗೆ ನೀರು ಹರಿಬೀಡಲಾಯಿತು. ಕೋಚರಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಸುಲ್ತಾನಪೂರ, ಶಿರಗಾಂವ, ಬೆಣಿವಾಡ, ಮದಿಹಳ್ಳಿ, ಮದಮಕ್ಕನಾಳ, ಬಸ್ತವಾಡ, ಹುಕ್ಕೇರಿ, ಮಸರಗುಪ್ಪಿ ಕಾಲುವೆಗಳಿಗೆ ನೀರು ಹರಿಬಿಡಲಾಯಿತು. ಇದರಿಂದ ಈ ಪ್ರದೇಶಗಳ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಿದಂತಾಗಿದೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಅವರ ಸೂಚನೆ ಮೇರೆಗೆ ಪಂಪಹೌಸ್ ದುರಸ್ತಿ ಮಾಡಲಾಗಿದ್ದು ಉದ್ಯೋಗ ಖಾತರಿ ಯೋಜನೆಯಲ್ಲಿಯೂ ಕಾಲುವೆಗಳ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗಿದೆ. ಮಹತ್ವಾಕಾಂಕ್ಷಿ ಈ ಯೋಜನೆಯ ಕೊನೆಯ ಹಂತದವರೆಗೂ ಸರಾಗವಾಗಿ ನೀರು ಸಾಗಲು ಕೋಚರಿ ಪಂಪ್‌ಹೌಸ್‌ನಲ್ಲಿ ಹೊಸ ಪಂಪ್ ಮತ್ತು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ₹1.70 ಕೋಟಿಗಳನ್ನು ವೆಚ್ಚ ಮಾಡುವ ಮೂಲಕ ಯೋಜನೆಯನ್ನು ನವೀಕರಣಗೊಳಿಸಲಾಗಿದೆ.

ಈ ವೇಳೆ ಯುವ ನಾಯಕರಾದ ಪೃಥ್ವಿ ಕತ್ತಿ, ಪವನ ಕತ್ತಿ ಮಾತನಾಡಿ, ಬೇಸಿಗೆ-ಬರಗಾಲದಲ್ಲಿ ಈ ಸಂದರ್ಭದಲ್ಲಿ ರೈತರ ಹಿತ ಕಾಪಾಡಲು ಯೋಜನೆ ನವೀಕರಣಗೊಳಿಸಲಾಗಿದೆ. ಈ ವ್ಯಾಪ್ತಿಯ ಗ್ರಾಮಗಳ ರೈತರು ನೀರನ್ನು ಹಿತ-ಮಿತವಾಗಿ ಬಳಸಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.

ಜಿಆರ್‌ಬಿಸಿ ಮೆಕ್ಯಾನಿಕಲ್ ವಿಭಾಗದ ಎಇಇ ಮಂಜುನಾಥ ಹೊಸಮನಿ, ಗುತ್ತಿಗೆದಾರ ಬಸವರಾಜ ಗಂಗಣ್ಣವರ, ನ್ಯಾಯವಾದಿ ಭೀಮಸೇನ ಬಾಗಿ, ಮುಖಂಡರಾದ ಮಹಾದೇವ ಪಾಟೀಲ, ಬಸವಂತ ರೆಡ್ಡಿ, ಶ್ರೀಶೈಲ ಮಠಪತಿ, ಮಹಾನಿಂಗ ಸನದಿ, ಶಿವನಗೌಡ ಮದವಾಲ, ಮಾರುತಿ ಬನ್ನನವರ, ರಾಯಪ್ಪಾ ವಿಭೂತಿ, ಮಾರುತಿ ಬಾಗಿ ಮತ್ತಿತರರು ಉಪಸ್ಥಿತರಿದ್ದರು.