ಮನೆಯೊಳಗೆ ನುಗ್ಗಿದ ಖಾಲಿ ನಿವೇಶನದ ನೀರು

| Published : Oct 20 2025, 01:02 AM IST

ಸಾರಾಂಶ

ಜೋರು ಮಳೆಯಿಂದ ಪಟ್ಟಣದ ಜೈನಿಗರ ಬೀದಿಯ ಖಾಲಿ ನಿವೇಶನದಲ್ಲಿ ಸಂಗ್ರಹವಾದ ಮಳೆ ನೀರು ಸರಾಗವಾಗಿ ಹೊರಗೆ ಹರಿಯಲು ಸಾಧ್ಯವಾಗದೇ ಕಾಂಪೌಂಡ್ ಕುಸಿದು ಮಳೆ ನೀರು ಮನೆ ನುಗ್ಗಿ ಆತಂಕ ಸೃಷ್ಠಿಸಿತು. ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಕಾಂಪೌಂಡ್ ಕುಸಿದು ಮಳೆ ನೀರು ಏಕಾಏಕಿ ಮಂಜುನಾಥ್ ಎಚ್.ಎಸ್. ಎಂಬುವರ ಮನೆಗೆ ನುಗ್ಗಿ ಆತಂಕ ಸೃಷ್ಠಿಸಿದೆ. ಮನೆಯಲ್ಲಿ ಇದ್ದ ದಿನಸಿ ಪಾದಾರ್ಥಗಳು, ಮಕ್ಕಳ ಪುಸ್ತಕಗಳು, ಹಾಸಿಗೆ, ಹೊದಿಕೆ, ಪ್ರಾತೆಗಳು ಹಾಗು ದಿನಬಳಕೆ ವಸ್ತುಗಳು ನೀರಿನಲ್ಲಿ ನೆಂದು ಕೆಮ್ಮಣ್ಣಿನ ಕೆಸರು ತುಂಬಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಜೋರು ಮಳೆಯಿಂದ ಪಟ್ಟಣದ ಜೈನಿಗರ ಬೀದಿಯ ಖಾಲಿ ನಿವೇಶನದಲ್ಲಿ ಸಂಗ್ರಹವಾದ ಮಳೆ ನೀರು ಸರಾಗವಾಗಿ ಹೊರಗೆ ಹರಿಯಲು ಸಾಧ್ಯವಾಗದೇ ಕಾಂಪೌಂಡ್ ಕುಸಿದು ಮಳೆ ನೀರು ಮನೆ ನುಗ್ಗಿ ಆತಂಕ ಸೃಷ್ಠಿಸಿತು.

ಪಟ್ಟಣದ ಪೇಟೆಯ ಜೈನಿಗರ ಬೀದಿಯಲ್ಲಿ ಒಂದು ಎಕರೆಗೂ ಹೆಚ್ಚು ವಿಸ್ತೀರ್ಣದ ಖಾಲಿ ನಿವೇಶನದ ಬಂದೋಬಸ್ತಿಗಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ. ಆದರೆ ಇಳಿಜಾರು ಮುಖವಾಗಿರುವ ನಿವೇಶನದಲ್ಲಿ ಸಂಗ್ರಹವಾಗುವ ಮಳೆ ನೀರು ಸರಾಗವಾಗಿ ಹೊರ ಹೋಗಲು ಯಾವುದೇ ಪೈಪ್ ವ್ಯವಸ್ಥೆ ಕಲ್ಪಿಸಿಲ್ಲ. ಆದ್ದರಿಂದ ಶನಿವಾರ ರಾತ್ರಿ ಸುರಿದ ಜೋರು ಮಳೆಗೆ ನಿವೇಶನದಲ್ಲಿ ಸಂಗ್ರಹವಾದ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಕಾಂಪೌಂಡ್ ಕುಸಿದು ಮಳೆ ನೀರು ಏಕಾಏಕಿ ಮಂಜುನಾಥ್ ಎಚ್.ಎಸ್. ಎಂಬುವರ ಮನೆಗೆ ನುಗ್ಗಿ ಆತಂಕ ಸೃಷ್ಠಿಸಿದೆ. ಮನೆಯಲ್ಲಿ ಇದ್ದ ದಿನಸಿ ಪಾದಾರ್ಥಗಳು, ಮಕ್ಕಳ ಪುಸ್ತಕಗಳು, ಹಾಸಿಗೆ, ಹೊದಿಕೆ, ಪ್ರಾತೆಗಳು ಹಾಗು ದಿನಬಳಕೆ ವಸ್ತುಗಳು ನೀರಿನಲ್ಲಿ ನೆಂದು ಕೆಮ್ಮಣ್ಣಿನ ಕೆಸರು ತುಂಬಿದೆ.

ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಯಂತ್ರೋಪಕರಣಗಳ ಸಹಾಯದಿಂದ ಮನೆಯಲ್ಲಿ ತುಂಬಿದ್ದ ನೀರನ್ನು ಹೊರ ಹಾಕಿದರು. ಆದರೆ ಕೆಸರಿನಲ್ಲಿ ನಡೆದಾಡಲೂ ಸಾಧ್ಯವಾಗದೇ, ಕುಟುಂಬ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದರು. ಮಂಜುನಾಥ್ ಮನೆ ಪಕ್ಕದ ರೇಣುಕುಮಾರ್ ಮನೆಗೂ ಮಳೆ ನೀರು ನುಗ್ಗಿ ಅತಂಕ ಸೃಷ್ಠಿಸಿತ್ತು.