ಅಕ್ಟೋಬರ್‌ವರೆಗೆ ಕಾಲುವೆಗೆ ನೀರು: ಜೆ.ಟಿ.ಪಾಟೀಲ

| Published : Jul 09 2025, 12:25 AM IST

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ವರೆಗೆ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷರು ಹಾಗೂ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಮುಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ವರೆಗೆ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷರು ಹಾಗೂ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ತಾಲೂಕಿನ ಸಿದ್ದಾಪುರ ಏತ ನೀರಾವರಿ ಯೋಜನೆಯ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸುವ ಕಾರ್ಯಕ್ಕೆ ಮೋಟಾರ್ ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಮಾತನಾಡಿ, ಬೆಳೆಗಳಿಗೆ ಅನುಗುಣವಾಗಿ ರೈತರು ಹಿತಮಿತವಾಗಿ ನೀರುಣಿಸಬೇಕೆಂದ ಅವರು,

ಚಿಕ್ಕಸಂಗಮ ಬಾಂದಾರ ಸಹಿತ ಸೇತುವೆ ನಿರ್ಮಿಸಲು ₹೨೪ ಕೋಟಿ ಹಾಗೂ

ಕಾರ್ಮಿಕ ಇಲಾಖೆಯಿಂದ ಸುನಗ ಗ್ರಾಮದಲ್ಲಿ ೮ ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ಹೈಟೆಕ್ ವಸತಿ ಶಾಲೆ ನಿರ್ಮಾಣಕ್ಕೆ ₹೩೪.೪೫ ಲಕ್ಷ ಅನುದಾನ ಸಚಿವ ಸಂಪುಟ ಸಭೆಯಲ್ಲಿ ಮಂಜೂರಿಯಾಗಿವೆ ಎಂದು ಹೇಳಿದರು.

ಕೃಷ್ಣಾ ಜಲ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ವಿ.ಎಲ್. ಶೇಗುಣಸಿ, ಎಇಇ ಅಮರೇಶ ಬಿರಾದಾರ, ಎಇ ಅನೀಲ ರಾಠೋಡ, ಮುಖಂಡರಾದ ಎಂ.ಎಸ್. ಕಾಳಗಿ, ದೊಡ್ಡಣ್ಣ ದೇಸಾಯಿ, ಗೋವಿಂದಪ್ಪ ಜಕರಡ್ಡಿ, ಶ್ರೀಶೈಲ ಅಂಟೀನ, ಶಿವಾನಂದ ಮಾದರ, ಹನಮಂತ ಸಿಂಗರಡ್ಡಿ, ಹನುಮಂತ ಕಟ್ಟೆಪ್ಪನವರ, ತಮೇಶ ನಾಯ್ಕರ, ಸಿದ್ದು ಸಂಕಣ್ಣವರ, ಚಂದ್ರಶೇಖರ ನಾಯಕ ಮತ್ತಿತರಿದ್ದರು.