ಮನುಷ್ಯನಿಗೆ ಆಹಾರಕ್ಕಿಂತ ನೀರು ಮುಖ್ಯ

| Published : Mar 27 2025, 01:05 AM IST

ಸಾರಾಂಶ

ಮನುಷ್ಯನಿಗೆ ಆಹಾರಕ್ಕಿಂತಲೂ ಕುಡಿಯುವ ನೀರು ಬಹುಮುಖ್ಯವಾಗಿದ್ದು ನಮಗೆಷ್ಟು ಅಗತ್ಯವೋ ಅಷ್ಟೇ ಬಳಸಿಕೊಂಡು ನೀರು ವ್ಯರ್ಥವಾಗಿ ಹರಿದುಹೋಗದಂತೆ ಜಾಗೃತಿ ವಹಿಸಬೇಕು. ಹಣ ಕೊಟ್ಟರೆ ಆಹಾರ ಎಲ್ಲಿಯಾದರೂ ಸಿಗಬಹುದು. ಆದರೆ, ಹಣ ಕೊಟ್ಟರು ನೀರು ಸಿಗುವುದು ಕಷ್ಟ ಸಾಧ್ಯ.

ಯಲಬುರ್ಗಾ:

ಪ್ರತಿಯೊಬ್ಬರು ನೀರಿನ ಮಹತ್ವ ಅರಿತುಕೊಂಡು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕು. ವ್ಯರ್ಥವಾಗಿ ನೀರನ್ನು ಹರಿಬಿಡದೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.

ತಾಲೂಕಿನ ಮುಧೋಳ ಗ್ರಾಮದಲ್ಲಿ ಶ್ರೀತ್ರಿಲಿಂಗೇಶ್ವರ ಸಮುದಾಯ ಭವನದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ತಾಲೂಕು ಸೇವಾ ಸಮಿತಿ ವರ್ಗ, ಕೃಷಿ, ತೋಟಗಾರಿಕೆ, ರೇಷ್ಮೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಜಲ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನುಷ್ಯನಿಗೆ ಆಹಾರಕ್ಕಿಂತಲೂ ಕುಡಿಯುವ ನೀರು ಬಹುಮುಖ್ಯವಾಗಿದ್ದು ನಮಗೆಷ್ಟು ಅಗತ್ಯವೋ ಅಷ್ಟೇ ಬಳಸಿಕೊಂಡು ನೀರು ವ್ಯರ್ಥವಾಗಿ ಹರಿದುಹೋಗದಂತೆ ಜಾಗೃತಿ ವಹಿಸಬೇಕು. ಹಣ ಕೊಟ್ಟರೆ ಆಹಾರ ಎಲ್ಲಿಯಾದರೂ ಸಿಗಬಹುದು. ಆದರೆ, ಹಣ ಕೊಟ್ಟರು ನೀರು ಸಿಗುವುದು ಕಷ್ಟ ಸಾಧ್ಯ. ಹೀಗಾಗಿ ಜಲವನ್ನು ನಾವು ಹೆಚ್ಚು ಸಂರಕ್ಷಿಸಬೇಕು. ಯಾವುದೇ ರೀತಿಯಿಂದ ಕಲುಷಿತಗೊಳಿಸದೆ, ವ್ಯರ್ಥವಾಗಿ ಹರಿಬಿಡಿದೆ ಮಿತವಾಗಿ ಬಳಸಿಕೊಂಡು ಮುಂದಿನ ಪೀಳಿಗೆಗೆ ಅದನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.

ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ ಮಾತನಾಡಿ, ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇದನ್ನು ನಿರ್ಲಕ್ಷ್ಯಿಸಿದರೆ ನಮಗೆ ಅಪಾಯ ತಪ್ಪಿದ್ದಲ್ಲ ಎಂದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗನಗೌಡ ಪಾಟೀಲ ಮಾತನಾಡಿ, ಹನಿ ನೀರಾವರಿ ಮತ್ತು ತುಂತುರು ನೀರಾವರಿಯಿಂದ ಕಡಿಮೆ ಪ್ರಮಾಣದಲ್ಲಿ ನೀರು ಬಳಸಿಕೊಂಡು ಉತ್ತಮ ಆದಾಯವನ್ನು ರೈತರು ಪಡೆಯಬೇಕು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಮಮತಾಜ್ ಹಿರೇಮನಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಗ್ರಾಪಂ ಉಪಾಧ್ಯಕ್ಷ ಭೀಮಪ್ಪ ಭಜಂತ್ರಿ, ಸಂಘದ ಉಪಾಧ್ಯಕ್ಷ ಎಚ್.ಎಚ್. ಹಿರೇಮನಿ, ಗ್ರಾಪಂ ಸದಸ್ಯ ಬಸಪ್ಪ ಅಕ್ಕಿ, ಎಎಸ್‌ಐ ಬಸವರಾಜ ಮಾಲಗಿತ್ತಿ, ಶ್ರೀಶಕ್ತಿ ಸಂಘದ ಮಹಿಳಾ ರೈತ ಸಂಘ, ಸಾರ್ವಜನಿಕರು ಸೇರಿದಂತೆ ಮತ್ತಿತರರು ಇದ್ದರು. ವೀರಭದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.