ನೀರಿನ ಸಮಸ್ಯೆ ಕುರಿತು ಕನ್ನಡಪ್ರಭ ಸೋಮವಾರ "ಕುಡಿಯುವ ನೀರಿಗಾಗಿ ಏಳೆಂಟು ಕಿಲೋ ಮೀಟರ್ ಅಲೆದಾಟ " ಎಂದು ಸಮಗ್ರ ವರದಿ ಪ್ರಕಟಿಸಿತ್ತು. ಇದನ್ನು ನೋಡುತ್ತಿದ್ದಂತೆ ಎಚ್ಚೆತ್ತುಕೊಂಡ ತಾಪಂ ಇಒ ದುಂಡಪ್ಪ ದುರಾದಿ, ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿಗಳು, ಪಿಡಿಒ ಸೇರಿದಂತೆ ಅಧಿಕಾರಿಗಳು ಗುಡಿಗೇರಿ ಗ್ರಾಮಕ್ಕೆ ಭೇಟಿ ನೀಡಿದರು.
ಕೊಪ್ಪಳ:
ಗುಡಿಗೇರಿ, ಕವಲೂರು ಸೇರಿದಂತೆ ನಾಲ್ಕಾರು ಗ್ರಾಮಗಳ ಜನರು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಏಳೆಂಟು ಕಿಲೋ ಮೀಟರ್ ಸುತ್ತಾಡಿ ನೀರು ತರುತ್ತಿರುವ ಕುರಿತು ಕನ್ನಡಪ್ರಭ ವರದಿ ಪ್ರಕಟಿಸುತ್ತಿದ್ದಂತೆ ಗ್ರಾಮಕ್ಕೆ ಅಧಿಕಾರಿಗಳು ದೌಡಾಯಿಸಿ ಜನರ ಸಮಸ್ಯೆ ಆಲಿಸಿದ್ದಾರೆ.ನೀರಿನ ಸಮಸ್ಯೆ ಕುರಿತು ಕನ್ನಡಪ್ರಭ ಸೋಮವಾರ "ಕುಡಿಯುವ ನೀರಿಗಾಗಿ ಏಳೆಂಟು ಕಿಲೋ ಮೀಟರ್ ಅಲೆದಾಟ " ಎಂದು ಸಮಗ್ರ ವರದಿ ಪ್ರಕಟಿಸಿತ್ತು. ಇದನ್ನು ನೋಡುತ್ತಿದ್ದಂತೆ ಎಚ್ಚೆತ್ತುಕೊಂಡ ತಾಪಂ ಇಒ ದುಂಡಪ್ಪ ದುರಾದಿ, ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಇಲಾಖೆ ಅಧಿಕಾರಿಗಳು, ಪಿಡಿಒ ಸೇರಿದಂತೆ ಅಧಿಕಾರಿಗಳು ಗುಡಿಗೇರಿ ಗ್ರಾಮಕ್ಕೆ ಭೇಟಿ ನೀಡಿದರು.
ದುರಸ್ತಿಗೆ ಸೂಚನೆ:ಗ್ರಾಮದಲ್ಲಿರುವ ಎರಡು ಶುದ್ಧೀಕರಣ ದುರಸ್ತಿಯಲ್ಲಿದ್ದು ಅವುಗಳನ್ನು ಸರಿಪಡಿಸುವಂತೆ ಅಧಿಕಾರಿಗಳು ಸೂಚಿಸಿದರು. ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ನೀರು ಪೂರೈಕೆ ಮಾಡುವಲ್ಲಿ ನೀರುಗಂಟಿ ನಿರ್ಲಕ್ಷ್ಯ ವಹಿಸಿರುವ ಕುರಿತು ಗ್ರಾಮಸ್ಥರು ದೂರಿದರು. ಆಗ ಅಧಿಕಾರಿಗಳು ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಸೋಮವಾರ ಗುಡಿಗೇರಿ ಗ್ರಾಮದ ಸಂಪಿಗೆ ನೀರು ಪೂರೈಕೆ ಮಾಡಿದ್ದರೂ ಗ್ರಾಮಸ್ಥರು ನಿತ್ಯ ನೀರು ಪೂರೈಕೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಧಿಕಾರಿಗಳಿಗೆ ತರಾಟೆ:ನೀರು ಶುದ್ಧೀಕರಣ ಘಟಕ ದುರಸ್ತಿಗೆ ಬಂದು ಹಲವು ದಿನ ಕಳೆದರೂ ದುರಸ್ತಿ ಮಾಡಿಸಿಲ್ಲ. ಇದರಿಂದ ಕುಡಿಯುವ ನೀರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಂಸದ ಸ್ಪಂದನೆ:ಕನ್ನಡಪ್ರಭ ವರದಿ ನೋಡಿದ ಸಂಸದ ರಾಜಶೇಖರ ಹಿಟ್ನಾಳ, ಬೆಳಗ್ಗೆಯೇ ಜಿಪಂ ಸಿಇಒ, ತಾಪಂ ಇಒ, ಪಿಡಿಒ ಅವರೊಂದಿಗೆ ದೂರವಾಣಿಯಲ್ಲಿಯೇ ಚರ್ಚಿಸಿದ್ದಾರೆ. ಕುಡಿಯುವ ನೀರಿಗಾಗಿ ಜನರು ಏಳೆಂಟು ಕಿಮೀ ಅಲೆದಾಡುವುದು ಎಂದರೆ ಹೇಗೆ. ನಿಮಗೆ ಕಾಣಿಸಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಇದ್ದರೂ ಸಮರ್ಪಕವಾಗಿ ನಿರ್ವಹಿಸಿ ಏಕೆ ಎಂದು ಪ್ರಶ್ನಿಸಿದರು. ತಕ್ಷಣ ಗ್ರಾಮಕ್ಕೆ ಹೋಗಿ ಸಮಸ್ಯೆ ನಿಗಿಸುವಂತೆ ಸೂಚಿಸಿದ ಬೆನ್ನಲೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿದ್ದರು.
ಗುಡಿಗೇರಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕಳೆದ ವರ್ಷ ಸಿಂಗಟಾಲೂರು ಏತನೀರಾವರಿ ಯೋಜನೆ ಕಾಲುವೆಯಿಂದ ನೀರು ಲಿಫ್ಟ್ ಮಾಡಲು ಅನುಮತಿ ಪಡೆದು ₹ 25 ಲಕ್ಷ ವ್ಯಯಿಸಿ ಪಂಪಸೆಟ್ ಅಳವಡಿಕೆ, ಪೈಪ್‌ಲೈನ್ ಮಾಡಿ ಪೂರೈಕೆ ಮಾಡಲಾಗಿತ್ತು. ಆದರೆ, ಕಳ್ಳರು ಒಂದೇ ತಿಂಗಳಲ್ಲಿ ಪಂಪ್‌ಸೆಟ್ ಕಳ್ಳತನ ಮಾಡಿದ್ದರಿಂದ ಸಮಸ್ಯೆಯಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ. ಅಧಿಕಾರಿಗಳು ಗ್ರಾಮಕ್ಕೆ ಬಂದರೂ ಕೇರಿ ಮತ್ತಿತರರ ಭಾಗಗಳಿಗೆ ಭೇಟಿ ನೀಡಿದ್ದಾರೆ ಹೊರತು. ನೀರಿನ ಗಂಭೀರ ಸಮಸ್ಯೆ ಇರುವ ಹೊಸ ಪ್ಲಾಟ್‌ಗಳತ್ತ ಬಂದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಗ್ರಾಮಕ್ಕೆ ಭೇಟಿ ನೀಡಿ ನೀರು ನಿರ್ವಹಣೆಯಲ್ಲಿನ ವ್ಯತ್ಯಾಸ ಸರಿಪಡಿಸಲು ಸೂಚಿಸಿದ್ದೇವೆ. ದುರಸ್ತಿಯಲ್ಲಿರುವ ನೀರು ಶುದ್ಧೀಕರಣ ಘಟಕ ಸರಿಪಡಿಸಲು ಸೂಚಿಸಲಾಗಿದೆ.
ದುಂಡಪ್ಪ ತೂರಾದಿ ಇಒ ತಾಪಂ ಕೊಪ್ಪಳ ಗುಡಿಗೇರಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಕನ್ನಡಪ್ರಭದಲ್ಲಿ ಗಮನಿಸಿ ತಕ್ಷಣ ಇತ್ಯರ್ಥಕ್ಕೆ ಸೂಚಿಸಿದ್ದೇನೆ. ಯಾವುದೇ ಗ್ರಾಮಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.ರಾಜಶೇಖರ ಹಿಟ್ನಾಳ ಸಂಸದ