ಸಾರಾಂಶ
-ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಮಾದರಿ ಪರೀಕ್ಷೆ ಕಡ್ಡಾಯ
-ಪಿಡಿಒಗಳ ತರಬೇತಿಯಲ್ಲಿ ಜಿಪಂ ಕಾರ್ಯದರ್ಶಿ ಕೆ.ತಿಮ್ಮಪ್ಪ ಸೂಚನೆ-----
ಕನ್ನಡಪ್ರಭವಾರ್ತೆ, ಚಿತ್ರದುರ್ಗಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರತಿ ತಿಂಗಳು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಕುಡಿವ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡುವುದು ಕಡ್ಡಾಯ ಎಂದು ಜಿಪಂ ಕಾರ್ಯದರ್ಶಿ ಕೆ.ತಿಮ್ಮಪ್ಪ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಗ್ರಾಮೀಣ ಕುಡಿವ ನೀರು ನೈರ್ಮಲ್ಯ ವಿಭಾಗ ಸಹಯೋಗದಲ್ಲಿ ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ಮತ್ತು ಹೆಚ್2ಎಸ್ ವೈಲ್ಸ್ ಉಪಯೋಗಿಸಿ ನೀರು ಪರೀಕ್ಷೆ ಕೈಗೊಳ್ಳುವುದರ ಕುರಿತು ಆಯೋಜಿಸಲಾದ ತರಭೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು ಪರೀಕ್ಷೆಯ ವರದಿಯನ್ನು ತಪ್ಪದೇ ಡಬ್ಲೂಕ್ಯೂಎಂಐಎಸ್ ಪೋರ್ಟಲ್ ನಲ್ಲಿ ಇರಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಜಲ ಮೂಲಗಳಿಂದ ನೀರನ್ನು ಸಂಗ್ರಹಿಸಿ ನೀರಿನ ಮಾದರಿಯನ್ನು ಪರೀಕ್ಷಿಸಿಬೇಕು. ಗ್ರಾಮದಲ್ಲಿ ನೀರುಗಂಟಿ ಮೂಲಕ ಪೈಪ್ ಲೈನ್ ಹೊಡೆದು ಹೋಗಿದ್ದರೆ ಕೂಡಲೇ ಗುರುತಿಸಿ ಸರಿಪಡಿಸಿ ನೀರು ಸರಬರಾಜು ಮಾಡಬೇಕು. ಓವರ್ ಹೆಡ್ ಟ್ಯಾಂಕ್, ಆರ್ ಓಪ್ಲಾಂಟ್, ಮಿನಿ ಟ್ಯಾಂಕ್ ಹಾಗೂ ಜಲ ಮೂಲಗಳ ಸ್ವಚ್ಛಗೊಳಿಸಿ ಜಾಗೃತ ವಹಿಸಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಪುನರ್ ರಚನೆ ಮಾಡಿ ನಮೂನೆಗಳನ್ನು ಕಡ್ಡಾಯವಾಗಿ ಜಿಲ್ಲಾ ಪಂಚಾಯತ್ ಕಛೇರಿಗೆ ಸಲ್ಲಿಸಬೇಕು. ಸಮಿತಿ ಸದಸ್ಯರ ಸಹಕಾರದಿಂದ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ 3 ತಿಂಗಳಿಗೊಮ್ಮೆ ಚರ್ಚಿಸಿ ಸಭಾ ನಡವಳಿಯನ್ನು ರಿಜಿಸ್ಟರ್ ಪುಸ್ತಕದಲ್ಲಿ ನಮೂದಿಸಲು ತಿಳಿಸಿದರು.ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳ ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ಸಂಪರ್ಕ ಕಾಮಗಾರಿಗಳ ಕುರಿತು ಮಾಹಿತಿ ನೀಡಿದ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್, ಇಂಜಿನಿಯರ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮನ್ವಯದೊಂದಿಗೆ ಗ್ರಾಮಸ್ಥರಿಗೆ ಶುದ್ದ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸಬೇಕು. ಮಿತವಾಗಿ ಬಳಸಲು ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸಬೇಕು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸ ಬೇಕು. ಗ್ರಾಪಂ ಗಳು ಕಡ್ಡಾಯವಾಗಿ ಕ್ಷೇತ್ರ ಪರೀಕ್ಷಾ ಕಿಟ್ ಗಳನ್ನು ಬಳಸಿಕೊಳ್ಳಲು ತಿಳಿಸಿದರು.
ತರಬೇತಿಯಲ್ಲಿ ನೀರು ಪರೀಕ್ಷೆ ಪ್ರಯೋಗ ಕುರಿತು ಮಾಹಿತಿ ನೀಡಿ ಪ್ರಾತ್ಯಕ್ಷತೆ ನಡೆಸಿಕೊಡಲಾಯಿತು. ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್.ಎಸ್.ನಾಡರ್, ಜಿಲ್ಲಾ ಸಮಾಲೋಚಕ ಸ್ನೇಹನ್, ಬಿ.ಸಿ.ನಾಗರಾಜು, ಲ್ಯಾಬ್ ಸಿಬ್ಬಂದಿ ಹಾಜರಿದ್ದರು.-------------
ಪೋಟೋ ಕ್ಯಾಪ್ಸನ್ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ಮತ್ತು ಹೆಚ್2ಎಸ್ ವೈಲ್ಸ್ ಉಪಯೋಗಿಸಿ ನೀರು ಪರೀಕ್ಷೆ ಕೈಗೊಳ್ಳುವುದರ ಕುರಿತು ತರಭೇತಿ ನೀಡಲಾಯಿತು.-------ಪೋಟೋ ಪೈಲ್ ನೇಮ್-5 ಸಿಟಿಡಿ 5