ಸಾರಾಂಶ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ । ಜಲಪಾತ ಸಾಗರದ ಮಾದರಿಯಲ್ಲಿ ಇಡೀ ಪರಿಸರ ಗೋಚರ
ಜಿ ದೇವರಾಜ ನಾಯ್ಡುಕನ್ನಡಪ್ರಭ ವಾರ್ತೆ ಹನೂರು
ಕೆಆರ್‌ಎಸ್ ಡ್ಯಾಂ ನಿಂದ ಲಕ್ಷಾಂತರ ಕ್ಯೂಸಕ್ ನೀರು ಕಾವೇರಿ ನದಿಗೆ ಬಿಟ್ಟಿರುವುದರಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಾವೇರಿ ನದಿಯ ಹೊಗೆನಕಲ್ ಜಲಪಾತದಲ್ಲಿ ಜಲ ವೈಭವ ಸೃಷ್ಟಿಯಾಗಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹೊಗೆನಕಲ್ ಜಲಪಾತ ಸಾಗರದ ಮಾದರಿಯಲ್ಲಿ ಇಡೀ ಪರಿಸರ ಗೋಚರಿಸುತ್ತಿದೆ.
ಹೊಗೆನಕಲ್ ಜಲಪಾತ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಬರುವ ಭಾರತದ ನಯಾಗರ ಎಂದೇ ಕರೆಸಿಕೊಳ್ಳುವ ಜಲಪಾತದಲ್ಲಿ ಕಲ್ಲು ಬಂಡೆಗಳಿಂದ ಧುಮುಕುತ್ತಿದ್ದ ನೀರು ಈಗ ಡ್ರೋನ್ ದೃಶ್ಯದಲ್ಲಿ ಸಾಗರದಂತೆ ಗೋಚರಿಸುತ್ತಿದ್ದು, ಹೊಗೆನಕಲ್ ಜಲಪಾತದಲ್ಲಿ ಜಲವೈಭವವೇ ಸೃಷ್ಟಿಯಾಗಿದೆ.ಹೊಗೆನಕಲ್ ಜಲಪಾತ ರುದ್ರರಮಣೀಯವಾಗಿ ಹೊರಹರಿವು ಹೆಚ್ಚಳವಾಗಿರುವುದರಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಗಡಿ ಗ್ರಾಮದಲ್ಲೂ ಜಿಲ್ಲಾಡಳಿತ ಎಚ್ಚರಿಕೆ ವಹಿಸುವ ಮೂಲಕ ಪ್ರವಾಸಿಗರಿಗೆ ನಿಷೇಧ ಹೇರಿದೆ. ಅಲ್ಲದೇ ನದಿಯ ಪಾತ್ರದಲ್ಲಿರುವ ಜನರು ಸಹ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿ ಕಟ್ಟುನಿಟ್ಟಿನ ಮುಂಜಾಗ್ರತ ಕ್ರಮ ಸಹ ವಹಿಸುವ ಮೂಲಕ ಕ್ರಮ ಕೈಗೊಂಡಿದೆ.
ತಮಿಳುನಾಡು ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಪ್ರವಾಸಿಗರಿಗೆ ಜಲಪಾತದ ಕಡೆ ಹೋಗಲು ನಿಷೇಧ ವಿಧಿಸುವ ಮೂಲಕ ಭಾರಿ ಕಟ್ಟುನಿಟ್ಟಿನ ಕ್ರಮವಹಿಸಿದೆ.ತಮಿಳುನಾಡಿನ ಹೊಗೆನಕಲ್ ಜಲಪಾತದ ತೆಪ್ಪ ನಡೆಸುವವರ ತೆಪ್ಪಗಳನ್ನು ಸಂರಕ್ಷಿಸುವ ಸ್ಥಳವೇ ಮುಳುಗಡೆ ಆಗಿದ್ದು, ಧರ್ಮಪುರಿ ಕೃಷ್ಣಗಿರಿ ಸೇಲಂ ಈ ರೋಡ್ ನಾಮಕಲ್ ತಿರುಚಿ ಕರೂರ್ ಪಂಜಾ ಊರು ಭಾಗಗಳಲ್ಲಿ ಎಚ್ಚರಿಕೆ ವಹಿಸುವಂತೆ ಅಲ್ಲಿನ ಸಿಡಬ್ಲ್ಯೂಸಿ ಇಂಜಿನಿಯರ್ ಪನ್ನೀರ್ ಪತ್ರಿಕಾ ಪ್ರಕಟಣೆ ಹೊರಡಿಸಿ ತಮಿಳುನಾಡಿನ ಭಾಗದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ