ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ, 2ನೇ ಘಟ್ಟದ 2700 ಮಿ.ಮೀ. ವ್ಯಾಸದ ಮುಖ್ಯ ಕೊಳವೆ ಮಾರ್ಗದಲ್ಲಿನ ಚೈನೇಜ್ 65.80 ಕಿ.ಮೀ ನೈಸ್ ಜಂಕ್ಷನ್ ಸಮೀಪವಿರುವ ‘ಸ್ಕೌರ್ ವಾಲ್ವ್’ ಸೋರಿಕೆಯನ್ನು ಸರಿಪಡಿಸಲು ಜಲಮಂಡಳಿ ಕಾಮಗಾರಿ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ, 2ನೇ ಘಟ್ಟದ 2700 ಮಿ.ಮೀ. ವ್ಯಾಸದ ಮುಖ್ಯ ಕೊಳವೆ ಮಾರ್ಗದಲ್ಲಿನ ಚೈನೇಜ್ 65.80 ಕಿ.ಮೀ ನೈಸ್ ಜಂಕ್ಷನ್ ಸಮೀಪವಿರುವ ‘ಸ್ಕೌರ್ ವಾಲ್ವ್’ ಸೋರಿಕೆಯನ್ನು ಸರಿಪಡಿಸಲು ಜಲಮಂಡಳಿ ಕಾಮಗಾರಿ ಕೈಗೊಂಡಿದೆ.

ಈ ಹಿನ್ನೆಲೆಯಲ್ಲಿ ಆ.28ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಾಮಗಾರಿಯ ಕಾರಣದಿಂದ ಸುಮಾರು ಒಟ್ಟು 8 ಗಂಟೆ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಸ್ಥಗಿತದಿಂದಾಗಿ ಕಾವೇರಿ ನೀರು ಸರಬರಾಜು ಆಗುವ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರಿಗೆ ಜಲಮಂಡಳಿ ಸೂಚನೆ ಕಾಮಗಾರಿ ನಡೆಯುವ ಸಮಯದಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿಯೇ ಶೇಖರಿಸಿಟ್ಟುಕೊಳ್ಳಬೇಕು ಹಾಗೂ ಜಲಮಂಡಳಿಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

ಪಶ್ಚಿಮ ಹಾಗೂ ದಾಸರಹಳ್ಳಿ ವಲಯ:

ನಂದಿನಿ ಲೇಔಟ್ (4ನೇ ಬ್ಲಾಕ್), ಬಿ.ಹೆಚ್.ಇ.ಎಲ್ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ. ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್‌ಜಿಇಎಫ್ ಲೇಔಟ್, ಐಟಿಐ ಲೇಔಟ್ (ಪಾರ್ಟ್), ರೈಲ್ವೇ ಲೇಔಟ್ (1 ಮತ್ತು 2ನೇ ಹಂತ), ಆರ್.ಹೆಚ್.ಬಿ.ಸಿ.ಎಸ್ ಲೇಔಟ್. ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣಪಾಳ್ಯ, ಡಿ ಗ್ರೂಪ್ ಲೇಔಟ್, ಕೆಬ್ಬಹಳ್ಳಿ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಜಿಯೋಲೊಜಿ ಲೇಔಟ್, ನರಸಪುರ. ಪಾಪರೆಡ್ಡಿಪಾಳ್ಯ, ಬಿ.ಇ.ಎಲ್ (1 ಮತ್ತು 2ನೇ ಹಂತ), ಬಿಲೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ.ಟೆಲಿಕಾಂ ಲೇಔಟ್, ವಿನಾಯಕ ಲೇಔಟ್, ಉಲ್ಲಾಳ, ಬಾಲಾಜಿ ಲೇಔಟ್, ಸರ್.ಎಂ.ವಿಶ್ವೇಶರಯ್ಯ ಲೇಔಟ್ (1 ರಿಂದ 9ನೇ ಬ್ಲಾಕ್), ಪ್ರಕೃತಿನಗರ, ಹೆಚ್.ಎಂ.ಟಿ ಲೇಔಟ್, ನಿಸರ್ಗ ಲೇಔಟ್, ಇನ್‌ಕಮ್ ಟ್ಯಾಕ್ಸ್ ಲೇಔಟ್, ರಾಮಯ್ಯ ಲೇಔಟ್, ಗಂಗಮ್ಮ ಬಡಾವಣೆ, ಶೆಟ್ಟಿಹಳ್ಳಿ.ವಾರ್ಡ್‌ಗಳು: ಬಗಳಗುಂಟೆ (ವಾರ್ಡ್-13), ಚೊಕ್ಕಸಂದ್ರ (ವಾರ್ಡ್-38), ಲಗ್ಗೆರೆ (ವಾರ್ಡ್-42), ಕೊಟ್ಟಿಗೆಪಾಳ್ಯ (ವಾರ್ಡ್-73), ಮಲ್ಲಸಂದ್ರ (ವಾರ್ಡ್-12), ಹೆಚ್.ಎಂ.ಟಿ (ವಾರ್ಡ್-16), ದಾಸರಹಳ್ಳಿ (ವಾರ್ಡ್-14), ಜಾಲಹಳ್ಳಿ (ವಾರ್ಡ್-15), ಪೀಣ್ಯ ಇಂಡಸ್ಟ್ರಿಯಲ್ ಏರಿಯಾ (ವಾರ್ಡ್-39), ಲಕ್ಷ್ಮಿದೇವಿ ನಗರ (ವಾರ್ಡ್-41), ರಾಜಗೋಪಾಲನಗರ (ವಾರ್ಡ್-69), ಹೆಗ್ಗನಹಳ್ಳಿ (ವಾರ್ಡ್-70), ಹೇರೋಹಳ್ಳಿ (ವಾರ್ಡ್-71, 72).

ವಿಜಯಗರ, ಕೆಂಗೇರಿ ಆರ್‌ಆರ್‌ ನಗರ ಸುತ್ತ:ಐಡಿಯಲ್ ಹೋಮ್ (1 ಮತ್ತು 2ನೇ ಫೇಸ್), ಕೆಂಚನಹಳ್ಳಿ, ಜವರೇಗೌಡ ನಗರ, ಹಲಗೆವಡೇರಹಳ್ಳಿ, ಎಲ್.ಐ.ಸಿ ಲೇಔಟ್, ನಾಗಪ್ಪ ಲೇಔಟ್, ಕೃಷ್ಣಪ್ಪ ಗಾರ್ಡನ್, ಬಿಎಚ್ಇಎಲ್ ಲೇಔಟ್ (ನಾರ್ತ್, ಸೌತ್, ಎಕ್ಸ್‌ಟೆನ್ಷನ್, ಎಲ್‌-ಶೇಪ್). ಪಟ್ಟಣ್ಣಗೆರೆ, ಮೈಲಸಂದ್ರ, ಯುನಿವರ್ಸಿಟಿ ಲೇಔಟ್ (4 ಮತ್ತು 5ನೇ ಸ್ಟೇಜ್), ಬಿ.ಇ.ಎಂ.ಎಲ್ 10ನೇ ಸ್ಟೇಜ್, ಮಣಿಪಾಲ 5ನೇ ಸ್ಟೇಜ್, ಭುವನೇಶ್ವರಿನಗರ.ಕೆಂಗೇರಿ ಉಪನಗರ, ಕೆಂಗೇರಿ, ನಾಗದೇವನಹಳ್ಳಿ, ಜ್ಞಾನಭಾರತಿ (1 ರಿಂದ 4ನೇ ಬ್ಲಾಕ್), ಆರ್.ಆರ್ ಲೇಔಟ್, ಜಗಜ್ಯೋತಿ ಲೇಔಟ್, ಮರಿಯಪ್ಪನಪಾಳ್ಯ, ದುಬಾಸಿ ಪಾಳ್ಯ, ಬೃಂದಾವನ್ ಲೇಔಟ್, ದೊಡ್ಡಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿ, ಶಿರರ್ಕೆ, ಮೈಸೂರು ರೋಡ್.ರಾಜಾಜಿನಗರ/ವಿಜಯನಗರ ವ್ಯಾಪ್ತಿ: ಎಂ.ಸಿ. ಲೇಔಟ್, ಸುಬ್ಬಣ್ಣ ಗಾರ್ಡನ್, ಮಾರೇನಹಳ್ಳಿ, ಬಿನ್ನಿ ಲೇಔಟ್, ಆರ್‌ಪಿಸಿ ಲೇಔಟ್, ನಾಗರಬಾವಿ, ಮಾನಸನಗರ, ಹೊಯ್ಸಳನಗರ, ನಾಯಂಡಹಳ್ಳಿ, ರಂಗನಾಥ ಕಾಲೋನಿ, ಬಿಸಿಸಿ ಲೇಔಟ್, ಕಾಮಾಕ್ಷಿಪಾಳ್ಯ, ಪಟ್ಟೇಗಾರಪಾಳ್ಯ, ಪ್ರಶಾಂತನಗರ, ತಿಮ್ಮೆನಹಳ್ಳಿ, ಗೋವಿಂದರಾಜನಗರ, ಕೆ.ಹೆಚ್.ಬಿ ಕಾಲೋನಿ, ಎಂಆರ್ಸಿಆರ್ ಲೇಔಟ್, ಸರಸ್ವತಿನಗರ, ಮೂಡಲಪಾಳ್ಯ, ಮಧುರನಗರ, ಅನ್ನಪೂರ್ಣೇಶ್ವರಿ ನಗರ, ಅಮರಜ್ಯೋತಿನಗರ.ಯಲಹಂಕ, ವಿದ್ಯಾರಣ್ಯಪುರ, ಉತ್ತರ ಬೆಂಗಳೂರು:ಕೊಡಿಗೆಹಳ್ಳಿ, ಟಾಟಾನಗರ, ದೇವಿನಗರ, ಬ್ಯಾಟರಾಯನಪುರ, ಯಶೋಧನಗರ, ಅಮೃತನಗರ, ಅಮೃತಹಳ್ಳಿ, ಜಕ್ಕೂರು, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಜಿ.ಕೆ.ವಿ.ಕೆ, ಯಲಹಂಕ ನ್ಯೂಟೌನ್, ಜುಡಿಷಿಯಲ್ ಲೇಔಟ್, ಅಟ್ಟೂರು, ಯಲಹಂಕ ಓಲ್ಡ್ ಟೌನ್, ಕೋಗಿಲು ಎಪಿಎಂಸಿ ವಿದ್ಯಾರಣ್ಯಪುರ, ಸಿಂಗಾಪುರ, ಎಂ.ಎಸ್.ಪಾಳ್ಯ, ರಾಮಚಂದ್ರಪುರ, ಡಿಫೆನ್ಸ್ ಲೇಔಟ್, ಏರ್‌ಫೋರ್ಸ್ ಸ್ಟೇಷನ್ ಜಾಲಹಳ್ಳಿ ಈಸ್ಟ್, ಮಾನ್ಯತಾ ರೆಸಿಡೆನ್ಸಿ, ಮರಿಯಣ್ಣಪಾಳ್ಯ, ಯಶವಂತಪುರ (ಪಾರ್ಟ್), ಮುತ್ಯಾಲನಗರ, ಜೆ.ಪಿ.ಪಾರ್ಕ್, ಬಿ.ಇ.ಎಲ್ ರಸ್ತೆ, ಡಾಲರ್ಸ್ ಕಾಲೋನಿ.ಇಂದಿರಾನಗರ, ಎಚ್‌ಎಎಲ್‌ ಮತ್ತು ಪೂರ್ವ ವಲಯ:ಈಜಿಪುರ, ಹೆಚ್.ಎ.ಎಲ್ 2ನೇ ಮತ್ತು 3ನೇ ಹಂತ, ಇಂದಿರಾನಗರ (1ನೇ ಹಂತ ಸೇರಿದಂತೆ), ಜೀವನ್ ಭೀಮನಗರ, ನ್ಯೂ ತಿಪ್ಪಸಂದ್ರ, ಗೀತಾಂಜಲಿ ಲೇಔಟ್, 515 ಕಾಲೋನಿ, ಕಗ್ಗದಾಸಪುರ, ನಾಗವಾರ ಪಾಳ್ಯ, ಸದಾನಂದ ನಗರ, ನ್ಯೂ ಬೈಯ್ಯಪ್ಪನಹಳ್ಳಿ, ಜಿ.ಎಮ್. ಪಾಳ್ಯ, ಮಲ್ಲೇಶ್ ಪಾಳ್ಯ, ಕೊನೇನ ಅಗ್ರಹಾರ, ಕೋಡಿಹಳ್ಳಿ, ವರ್‌ಸೋವ ಲೇಔಟ್, ಬೈರಸಂದ್ರ. ಮಾರತ್ತಹಳ್ಳಿ, ಯಮಲೂರು, ಕೆಂಪಾಪುರ, ಮುರುಗೇಶ ಪಾಳ್ಯ, ಎನ್.ಆರ್. ಕಾಲೋನಿ, ಎನ್.ಎ.ಎಲ್, ವಿನ್ಯಾಕ ನಗರ (ಎ ಮತ್ತು ಬಿ ಬ್ಲಾಕ್), ಹರಲೂರು, ಅಂಬಲಿಪುರ, ಕಸವನಹಳ್ಳಿ, ಕೈಕೊಂಡನಹಳ್ಳಿ, ದೊಡ್ಡ ಕಣ್ಣಹಳ್ಳಿ, ಜುನ್ನಸಂದ್ರ. ಹೆಚ್‌ಬಿಆರ್ ಲೇಔಟ್, ಹೆಚ್‌ಆರ್‌ಬಿಆರ್ ಲೇಔಟ್, ಕಲ್ಯಾಣ ನಗರ, ಗೋವಿಂದಪುರ, ನಾಗವಾರ, ಹೆಣ್ಣೂರು, ಕಮ್ಮನಹಳ್ಳಿ, ಕಾಚರಕನಹಳ್ಳಿ, ಒಎಂಬಿಆರ್ ಲೇಔಟ್, ಚಿಕ್ಕಬಾಣಸವಾಡಿ, ಕಸ್ತೂರಿನಗರ, ಬಾಣಸವಾಡಿ, ಬಿ ಚನ್ನಸಂದ್ರ.ಬೊಮ್ಮನಹಳ್ಳಿ, ಜೆಪಿನಗರ, ಸರ್ಜಾಪುರ ರಸ್ತೆ ವ್ಯಾಪ್ತಿ:ಜೆ.ಪಿ.ನಗರ 8ನೇ ಫೇಸ್ ( 1ಮತ್ತು 2ನೇ ಬ್ಲಾಕ್), ಜೆ.ಪಿ. ನಗರ 9ನೇ ಫೇಸ್ (1 ರಿಂದ 7ನೇ ಬ್ಲಾಕ್), ಅಂಜನಾಪುರ (1 ರಿಂದ 5ನೇ ಜಿ ಬ್ಲಾಕ್), ಬಿಲೇಕಹಳ್ಳಿ, ಅರಕೆರೆ, ನ್ಯಾಯನಪ್ಪನಹಳ್ಳಿ, ಹುಳಿಮಾವು, ಜಂಬುಸವಾರಿ ದಿಣ್ಣೆ, ಕೊತನೂರು ದಿಣ್ಣೆ. ಹೊಂಗಸಂದ್ರ, ಬೇಗೂರು ರೋಡ್, ನ್ಯೂ ಮೈಕೋ ಲೇಔಟ್, ಮಂಗಮ್ಮನ ಪಾಳ್ಯ (ಪಾರ್ಟ್), ಗಾರ್ವೆಭಾವಿ ಪಾಳ್ಯ, ಸಿಂಗಸಂದ್ರ, ಬೊಮ್ಮನಹಳ್ಳಿ, ವಿರಾಟ್ ನಗರ, ರೂಪೇನ ಅಗ್ರಹಾರ, ದೇವರಚಿಕ್ಕನಹಳ್ಳಿ, ಹೊಸಪಾಳ್ಯ, ಎಂ.ಜಿ.ಪಾಳ್ಯ, ಬಂಡೆಪಾಳ್ಯ, ಸಿ.ಕೆ. ನಗರ. ದೊಡ್ಡನೆಕ್ಕುಂದಿ, ಕುಂದಲಹಳ್ಳಿ, ಅಶ್ವತ್ ನಗರ, ಬಸವಣ್ಣನಗರ, ವೈಟ್‌ಫೀಲ್ಡ್, ಪಟ್ಟಣದೂರು ಅಗ್ರಹಾರ, ಸಪ್ತಗಿರಿ ಲೇಔಟ್, ಮುನೇಖೊಳಾಲ, ಅಯ್ಯಪ್ಪ ನಗರ, ಹೂಡಿ, ವಿಜ್ಞಾನ ನಗರ, ಅಕ್ಷಯ ನಗರ, ಪೈ ಲೇಔಟ್, ವಿಭೂತಿಪುರ, ಅಣ್ಣಸಂದ್ರ ಪಾಳ್ಯ, ಎಲ್.ಬಿ.ಎಸ್ ನಗರ, ಎನ್‌ಜಿವಿ (ಪಾರ್ಟ್) ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.