ಬೇಸಿಗೆಯ ತೀವ್ರ ಬಿಸಿಲಿನಿಂದಾಗಿ ನೀರಿಲ್ಲದೆ ಪರದಾಡುವ ಮೂಕ ಪ್ರಾಣಿ,ಪಕ್ಷಿಗಳಿಗೆ ನೀರುಣಿಸುವ ಮಾನವೀಯ ಕಳಕಳಿಯ ಕೆಲಸ ಮಾಡುತ್ತಿರುವ ಶ್ರೀ ಯಶವಂತರಾಯಗೌಡ ಪಾಟೀಲ ಫೌಂಡೇಶನ್‌ ಕಾರ್ಯ ಶ್ಲಾಘನೀಯ ಎಂದು ಚಡಚಣ ತಹಸೀಲ್ದಾರ್‌ ಸಂಜಯ ಇಂಗಳೆ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಬೇಸಿಗೆಯ ತೀವ್ರ ಬಿಸಿಲಿನಿಂದಾಗಿ ನೀರಿಲ್ಲದೆ ಪರದಾಡುವ ಮೂಕ ಪ್ರಾಣಿ,ಪಕ್ಷಿಗಳಿಗೆ ನೀರುಣಿಸುವ ಮಾನವೀಯ ಕಳಕಳಿಯ ಕೆಲಸ ಮಾಡುತ್ತಿರುವ ಶ್ರೀ ಯಶವಂತರಾಯಗೌಡ ಪಾಟೀಲ ಫೌಂಡೇಶನ್‌ ಕಾರ್ಯ ಶ್ಲಾಘನೀಯ ಎಂದು ಚಡಚಣ ತಹಸೀಲ್ದಾರ್‌ ಸಂಜಯ ಇಂಗಳೆ ಹೇಳಿದರು.

ತಾಲೂಕಿನ ಝಳಕಿ ಗ್ರಾಮದಲ್ಲಿ ಯಶವಂತರಾಯಗೌಡ ಪಾಟೀಲ ಫೌಂಡೇಶನ್‌ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡ ಪಕ್ಷಿಗಳಿಗೆ ನೀರಿನ ತೊಟ್ಟಿ ಕಟ್ಟಿ ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿ ಸಮತೋಲನ ಕಾಯ್ದುಕೊಂಡಾಗ ಮಾತ್ರ ಪ್ರಾಣಿ, ಪಕ್ಷಿ, ಮನುಷ್ಯ ಬದುಕು ಸಾಗಿಸಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಪ್ರಕೃತಿಯನ್ನು ಪ್ರೀತಿಸಬೇಕು. ಪ್ರಾಣಿ,ಪಕ್ಷಿಗಳಿಗೆ ನೀರು,ಕಾಳು ಒದಗಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು.ಝಳಕಿ ಗ್ರಾಪಂ ಮಾಜಿ ಅಧ್ಯಕ್ಷ ಸಣ್ಣಪ್ಪ ತಳವಾರ ಮಾತನಾಡಿ, ಬೇಸಿಗೆ ಕಾಲದಲ್ಲಿ ನೀರಿಗಾಗಿ ಪ್ರಾಣಿ,ಪಕ್ಷಿಗಳು ಬಹಳಷ್ಟು ಪರದಾಡಿ, ಜೀವ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಮಾನವೀಯತೆಯ ದೃಷ್ಠಿಯಿಂದ ನಾವೆಲ್ಲರೂ ಪಕ್ಷಿಗಳಿಗೆ ಮಣ್ಣಿನ ಪಾತ್ರೆಯಲ್ಲಿ ನೀರು ಇಡುವ ಕೆಲಸ ಮಾಡಬೇಕು. ಬೇಸಿಗೆ ಇರುವುದರಿಂದ ನಮ್ಮಂತೆ ಪ್ರಾಣಿ,ಪಕ್ಷಿಗಳಿಗೂ ನೀರು ಅವಶ್ಯಕ. ಹೀಗಾಗಿ ಮನೆಯ ಮೇಲೆ, ಮರಗಳಲ್ಲಿ ನೀರಿನ ತೊಟ್ಟಿ ಇಟ್ಟು ಪಕ್ಷಿಗಳಿಗೆ ನೀರಿನ ದಾಹ ತೀರಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ತಿಳಿಸಿದರು.

ಬೇಸಿಗೆಯ ತೀವೃ ಬೀಸಿಲಿನ ತಾಪಕ್ಕೆ ಪ್ರಾಣಿ,ಪಕ್ಷಿಗಳು ಕುಡಿಯಲು ನೀರಿನಿಂದ ತೊಂದರೆ ಅನುಭವಿಸುತ್ತಿದ್ದು, ಅವುಗಳ ಬಾಯಾರಿಕೆ ನೀಗಿಸಲು ಶ್ರೀ ಯಶವಂತರಾಯಗೌಡ ವಿ ಪಾಟೀಲ ಪೌಂಡೇಶನದಿಂದ ನಗರ, ತಾಲೂಕಿನಾಧ್ಯಂತ ನೀರಿನ ತೊಟ್ಟಿಗಳು ಮರಗಳಿಗೆ ಕಟ್ಟಿ ನೀರು ಇಡುವ ಕೆಲಸ ಮಾಡುತ್ತಿರುವುದು ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತ ಖಡೆಖಡೆ, ಎಇಇ ಸಂತೋಷ ದಾಯಗೊಡೆ, ಸುರೇಶ ನಾಯಕ, ಎಇ ಚಂದ್ರಕಾಂತ ಕೋಳಿ, ಸಾಹೇಬಗೌಡ ಬಿರಾದಾರ, ಉಮೇಶ ಕಾರಕಲ್ಲ, ಅಮಸಿದ್ದ ಡಾಳೆ, ಅಕ್ಬರ್‌ ಖಾನಪೂರ ಇತರರು ಇದ್ದರು.