ನಮಗಿನ್ನೂ ನಾಗನಗೌಡರ ಮಾರ್ಗದರ್ಶನ ಬೇಕಿತ್ತು: ಜಿ.ತಮ್ಮಣ್ಣ

| Published : Feb 03 2024, 01:49 AM IST

ಸಾರಾಂಶ

ಗುರುಮಠಕಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರ ಅವರಿಗೆ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಜೆಡಿಎಸ್‌ ಮುಖಂಡ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಮಾಜಿ ಶಾಸಕರು ಹಾಗೂ ಜೆಡಿಎಸ್ ಮುತ್ಸದ್ಧಿ ನಾಯಕರಾದ ದಿ.ನಾಗನಗೌಡ ಕಂದಕೂರ ಅವರ ನೇತೃತ್ವದಲ್ಲಿ ಹಲವು ಜನಪರ ಕಾರ್ಯಗಳು ಹಾಗೂ ಅವರು ನಡೆಸಿದ ಹೋರಾಟಗಳು ಕ್ಷೇತ್ರದ ಜನಪರವಾಗಿದ್ದವು. ಅವರ ಮಾರ್ಗದರ್ಶನ ಇನ್ನೂ ಕೆಲ ವರ್ಷಗಳು ನಮಗೆ ಸಿಗಬೇಕಿತ್ತು ಎಂದು ಜೆಡಿಎಸ್ ಮುಖಂಡ ಜಿ. ತಮ್ಮಣ್ಣ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿ. ನಾಗನಗೌಡ ಕಂದಕೂರ ಅವರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಭಾವುಕರಾಗಿ ಅವರು ಮಾತನಾಡಿದರು.

ಮುಖಂಡರಾದ ತಾಯಪ್ಪ ಬದ್ದೇಪಲ್ಲಿ ಹಾಗೂ ಸುಭಾಷ್ ಕಟಕಟಿ ಮಾತನಾಡಿ, ಅಪ್ಪಾಜಿಯವರ ಸಲಹೆ-ಸೂಚನೆಗಳು ಮತ್ತು ನಾಯಕತ್ವದಲ್ಲಿ ನಾವೆಲ್ಲಾ ಕೆಲಸ ಮಾಡಿದ್ದೇವು. ಎಂತಹ ಕಠಿಣ ಸಂದರ್ಭಗಳಲ್ಲೂ ಕಾರ್ಯಕರ್ತರಿಗೆ ಧೈರ್ಯ ತುಂಬುವ ಮೂಲಕ ನಮ್ಮನ್ನೆಲ್ಲಾ ಒಂದು ಕುಟುಂಬವೆಂಬ ಭಾವನೆಯಲ್ಲಿ ಕಂಡಿದ್ದರು. ಯುವ ನಾಯಕತ್ವಕ್ಕೆ ಆಸಕ್ತಿ ತೋರಿದ್ದ ಅವರು ಯುವಕರು ಹೆಚ್ಚು ಸಾಮಾಜಿಕ ಕ್ಷೇತ್ರದಲ್ಲಿ ತೊಡಗುವಂತೆ ಪ್ರೋತ್ಸಾಹ ನೀಡಿದ್ದರು. ಅವರ ಅಗಲಿಕೆಯು ನಮ್ಮೆಲ್ಲ ಕುಟುಂಬಗಳಲ್ಲೂ ನೋವು ತುಂಬಿದೆ ಎಂದರು.

ದಿ.ನಾಗನಗೌಡ ಕಂದಕೂರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೂ ಹಾಗೂ ಅಭಿಮಾನಿಗಳಲ್ಲಿ ಚೈತನ್ಯ ನೀಡುವಂತೆ ಕೋರಿ ಮೌನಾಚರಣೆ ಮಾಡಲಾಯಿತು.

ಕಿಷ್ಟರೆಡ್ಡಿ ಗವಿನೋಳ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಆವಂಟಿ, ಕಾರ್ಯದರ್ಶಿ ಅನಿಲ್ ಹೆಡಗಿಮದ್ರಾ, ಬ್ಲಾಕ್ ಅಧ್ಯಕ್ಷ ಪ್ರಕಾಶ ನಿರೇಟಿ, ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ವಕ್ತಾರ ದೀಪಕ ಬೆಳ್ಳಿ, ಅನಂತಪ್ಪ ಯದ್ಲಾಪುರ, ಬಸಣ್ಣ ದೇವರಳ್ಳಿ, ಭೀಮಶಪ್ಪ ಗುಡಿಸೆ, ರಾಜಾ ರಮೇಶಗೌಡ್, ಗುರುನಾಥ ತಲಾರಿ, ರವಿ ಗವಿನೋಳ, ಬಾಲು ದಾಸರಿ ಸೇರಿದಂತೆ ಇತರರಿದ್ದರು.