ಸಾರಾಂಶ
ಯಮಕನಮರಡಿ: ವಿವಿಧತೆಯಲ್ಲಿ ಏಕತೆಯುಳ್ಳ ಭಾರತದಲ್ಲಿ ಸೈನಿಕರು ಗಡಿ ಕಾಯುತ್ತಿರುವುದರಿಂದ ನಾವೆಲ್ಲ ಸುರಕ್ಷಿತವಾಗಿದ್ದು, ಸುಖ, ಶಾಂತಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಚಿಕ್ಕಲದಿನ್ನಿ-ತೋಲಗಿಯ ಅದೃಶ್ಯಾನಂದ ಮಹಾಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿವಿವಿಧತೆಯಲ್ಲಿ ಏಕತೆಯುಳ್ಳ ಭಾರತದಲ್ಲಿ ಸೈನಿಕರು ಗಡಿ ಕಾಯುತ್ತಿರುವುದರಿಂದ ನಾವೆಲ್ಲ ಸುರಕ್ಷಿತವಾಗಿದ್ದು, ಸುಖ, ಶಾಂತಿ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಚಿಕ್ಕಲದಿನ್ನಿ-ತೋಲಗಿಯ ಅದೃಶ್ಯಾನಂದ ಮಹಾಸ್ವಾಮೀಜಿ ನುಡಿದರು.
ಚಿಕ್ಕಲದಿನ್ನಿಯ ಕಮಲಾದೇವಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಕೇಂದ್ರ ಮೀಸಲು ಪಡೆ (ಸಿಆಆರ್‌ಪಿಎಫ್)ಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ನಿವೃತ್ತ ಸೈನಿಕ ಲಗಮಪ್ಪ ಗಡಕರಿ ಸ್ವಾಗತ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ದೇಶ ಕಾಯುವ ಸೈನಿಕ, ಅನ್ನದಾತ ರೈತನ ಸೇವೆ ಅತ್ಯಮೂಲ್ಯವಾದುದು ಎಂದರು.ಗುಟಗುದ್ದಿಯ ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಲಗಮಪ್ಪ ಗಡಕರಿ ಸಲ್ಲಿಸಿರುವ ಸಾಮಾಜಿಕ ಸೇವೆಯು ಇತರರಿಗೂ ಮಾದರಿಯಾಗಿದೆ ಎಂದರು.
ನಿವೃತ್ತ ಶಿಕ್ಷಕ ಮುಲ್ಲಾ, ತಾಯಿ ಮಲ್ಲವ್ವ ಫಕೀರ ಗಡಕರಿ, ಪತ್ನಿ ವಿಜಯಲಕ್ಷ್ಮೀ ಲಗಮಪ್ಪ ಗಡಕರಿ, ಮಗ ಓಂಕಾರ ಲಗಮಪ್ಪ ಗಡಕರಿ ಇದ್ದರು. ಸೇವಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ಲಗಮಪ್ಪ ಗಡಕರಿಯನ್ನು ಶಹಾಬಂದರ್ ವಾಲ್ಮೀಕಿ ಸರ್ಕಲ ಬಳಿ ಸ್ವಾಗತಿಸಿ ಬರಮಾಡಿಕೊಂಡರು. ಲಗಮಾ ಗಡಕರಿ ಇವರು ವಾಲ್ಮೀಕಿ ಪ್ರತಿಮೆಗೆ ಪೂಜೆ ಸಲ್ಲಿಸಿ ಗೌರವಿಸಿದರು. ನಂತರ ತೆರೆದ ವಾಹನದಲ್ಲಿ ಪುಷ್ಪ ವೃಷ್ಟಿಗಳನ್ನು ಹಾಕಿ ಶಹಾಬಂದರದಿಂದ ಚಿಕ್ಕಲದಿನ್ನಿ ಕಮಲಾದೇವಿ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಯಲ್ಲಪ್ಪ ಭೀ.ಗಡಕರಿ, ರಾಮಚಂದ್ರ ನಾಯಿಕ, ಭೀಮಪ್ಪ ದಾಸ, ಸಿದ್ರಾಮ ಪೂಜಾರಿ, ಪ್ರಕಾಶ ಮಠದವರ, ಶಂಕರ ಡೊಂಬಾರ, ಶಿವಪ್ಪ ಪಾಟೀಲ, ಫಕೀರಪ್ಪ ಪಾಟೀಲ, ಮಹೇಶ ಪೂಜೇರಿ, ಭೀಮಪ್ಪ ಮುತ್ಯಾನಟ್ಟಿ, ಹಣಮಂತ ದಾಸ, ರಾಜು ಸೂರ್ಯವಂಶಿ ಸೇರಿದಂತೆ ಹಲವರು ಇದ್ದರು. ಸೈನಿಕರಾದ ಯುನಸ ವಂಟಿಗಾರ, ದಸ್ತಗಿರ, ಗಿಡಮುಲ್ಲಾ, ಬಸವರಾಜ ಮುತ್ಯಾನಟ್ಟಿ, ಕೆಂಪಣ್ಣ ಜಂಬಲವಾಡಿ, ಶಿವರಾಜ ಮುಕ್ಕಪ್ಪಗೋಳ ಅವರನ್ನು ಸತ್ಕರಿಸಲಾಯಿತು.