ಸಾರಾಂಶ
ಶಸ್ತ್ರಚಿಕಿತ್ಸೆಯಿಲ್ಲದೆ ರೋಗಗಳನ್ನು ಗುಣಪಡಿಸುವ ಸುರಕ್ಷಿತ, ವೆಚ್ಚ-ಪರಿಣಾಮಕಾರಿ ಚಿಕಿತ್ಸಾ ವ್ಯವಸ್ಥೆಯಾಗಿ ಆಯುರ್ವೇದ ಮಹತ್ವವನ್ನು ತಿಳಿಸಿದರು.
ಕನ್ನಡಪ್ರಭವಾರ್ತೆ ಕೆಜಿಎಫ್
ಆಯುರ್ವೇದದಲ್ಲಿ ಯಾವುದೇ ರೋಗಕ್ಕೆ ಔಷಧವಿಲ್ಲ ಎಂದಿಲ್ಲ, ಆದರೆ ಆಧುನಿಕ ವೈದ್ಯ ಮೋಹದಿಂದ ಆಯುರ್ವೇದವನ್ನು ಮರೆಯುತ್ತಿದ್ದೇವೆಂದು ಬೆಮೆಲ್‌ನ ಸಂಕೀರ್ಣ ಮುಖ್ಯಸ್ಥರಾದ ಯೋಗಾನಂದ ಜಿ. ತಿಳಿಸಿದರು.ಬಿಇಎಂಎಲ್ ಕೆಜಿಎಫ್ ಕಾಂಪ್ಲೆಕ್ಸ್ ಕಲಾಕ್ಷೇತ್ರ ಸಭಾಂಗಣದಲ್ಲಿ ೧೦ನೇ ರಾಷ್ಟ್ರೀಯ ಆಯುರ್ವೇದ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಸ್ತ್ರಚಿಕಿತ್ಸೆಯಿಲ್ಲದೆ ರೋಗಗಳನ್ನು ಗುಣಪಡಿಸುವ ಸುರಕ್ಷಿತ, ವೆಚ್ಚ-ಪರಿಣಾಮಕಾರಿ ಚಿಕಿತ್ಸಾ ವ್ಯವಸ್ಥೆಯಾಗಿ ಆಯುರ್ವೇದ ಮಹತ್ವವನ್ನು ತಿಳಿಸಿದರು.
ಸಮತೋಲಿತ ಜೀವನಶೈಲಿಯ ಮೂಲಕ ಒಟ್ಟಾರೆ ಯೋಗಕ್ಷೇಮ ಮತ್ತು ರೋಗ ತಡೆಗಟ್ಟುವಿಕೆಯನ್ನು ಉತ್ತೇಜಿಸುವಲ್ಲಿ ಆಯುರ್ವೇದದ ಪಾತ್ರವನ್ನು ಮುಖ್ಯಸ್ಥೆ, ಮಾನವ ಸಂಪನ್ಮೂಲ ಅಧಿಕಾರಿ ನೀನಾ ಸಿಂಗ್ ತಿಳಿಸಿದರು. ಪ್ರಸಿದ್ಧ ಆಯುರ್ವೇದ ಸಲಹೆಗಾರರಾದ ಡಾ. ನಾಗಪದ್ಮ ಅವರು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಯುರ್ವೇದದ ಸಾಮರ್ಥ್ಯ, ವ್ಯವಸ್ಥಿತ ಆಹಾರ ಯೋಜನೆಗಳು ಮತ್ತು ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ಪ್ರಮುಖ ಭಾಷಣ ಮಾಡಿದರು.ಆಯುರ್ವೇದದ ಮೂಲಕ ಬೊಜ್ಜು ನಿರ್ವಹಣೆಯ ಕುರಿತು ಡಾ. ಸೌಪರ್ಣಿಕಾ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು, ಪರಿಣಾಮಕಾರಿ ಚಿಕಿತ್ಸೆಗಳ ಕುರಿತು ಚರ್ಚಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಶ್, ಅಧ್ಯಾಪಕರು, ಶಾಲಾ ಮಕ್ಕಳು ಮತ್ತು ಬಿಇಎಂಎಲ್ ವೈದ್ಯಕೀಯ ಸಿಬ್ಬಂದಿ ಸೇರಿ ಅತಿಥಿಗಳು ಭಾಗವಹಿಸಿದ್ದರು.-----------------
೨೩ಕೆಜಿಎಫ್೪ಬೆಮೆಲ್ನ ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಆಯುರ್ವೇದ ದಿನದಲ್ಲಿ ಬಾಗವಹಿಸಿದ್ದ ಗಣ್ಯರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))