ನಾವ್ಯಾರು ಕಾಂಗ್ರೆಸ್‌ಗೆ ಹೋಗಲುಹಸಿದು ಕೂತಿಲ್ಲ: ಜೆಡಿಎಸ್‌ ಶಾಸಕರು

| Published : Nov 27 2024, 01:06 AM IST

ಸಾರಾಂಶ

ಪಕ್ಷ ಟಾಸ್ಕ್‌ ಕೊಟ್ಟರೆ ಜೆಡಿಎಸ್‌ನ ಎಲ್ಲಾ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರಲು ಸಿದ್ಧ ಎಂಬ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಹೇಳಿಕೆಗೆ ಇದೀಗ ಜೆಡಿಎಸ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ/ತಾಳಿಕೋಟೆ/ತುಮಕೂರು

ಪಕ್ಷ ಟಾಸ್ಕ್‌ ಕೊಟ್ಟರೆ ಜೆಡಿಎಸ್‌ನ ಎಲ್ಲಾ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರಲು ಸಿದ್ಧ ಎಂಬ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಹೇಳಿಕೆಗೆ ಇದೀಗ ಜೆಡಿಎಸ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಾವೇನು ಕಾಂಗ್ರೆಸ್‌ಗೆ ಹೋಗಲು ಹಸಿದು ಕೂತಿಲ್ಲ, ಯೋಗೇಶ್ವರ್‌ ಅವರನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದುಬಂದಿಲ್ಲ, ನಮ್ಮನ್ನೇನೂ ಖರೀದಿ ಮಾಡಲು ಆಗಲ್ಲ ಎಂದು ಜೆಡಿಎಸ್‌ ಶಾಸಕರಾದ ಶಾರದಾ ನಾಯಕ್‌, ರಾಜುಗೌಡ ಪಾಟೀಲ, ಎ.ಟಿ.ಕೃಷ್ಣಪ್ಪ ತಿರುಗೇಟು ನೀಡಿದ್ದಾರೆ.

ಮಂಗಳವಾರ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಸಿದ್ಧಾಂತಕ್ಕೆ ಒಳಪಟ್ಟ ಶಾಸಕರು ಪಕ್ಷ ನಿಷ್ಠೆಯಾಗಿ ಸಂವಿಧಾನಬದ್ಧರಾಗಿದ್ದೇವೆ. ಜೆಡಿಎಸ್ ಶಾಸಕರ್‍ಯಾರೂ ಕಾಂಗ್ರೆಸ್‌ಗೆ ಹೋಗಲು ಹಸಿದು ಕುಂತಿಲ್ಲ ಎಂದು ತಾಳಿಕೋಟೆ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ತಿರುಗೇಟು ನೀಡಿದ್ದಾರೆ.

ಇನ್ನು ನಾವು ನಿಮ್ಮನ್ನು ನಂಬಿ ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿಲ್ಲ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್‌ ಹೇಳಿದ್ದಾರೆ.

ನಾವು ಜಿ.ಟಿ.ದೇವೇಗೌಡರ ರೀತಿ ನಾವು ಗೆದ್ದುಬಂದಿದ್ದೇವೆ, ನಮ್ಮನ್ನೇನು ಖರೀದಿ ಮಾಡಲು ಆಗುವುದಿಲ್ಲ ಎಂದು ತುರುವೇಕೆರೆ ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು.