ಸೇನೆ ಕರೆದರೆ ಇಂದೇ ಗಂಟು-ಮೂಟೆ ಕಟ್ಟಲು ನಾವು ಸಿದ್ಧ: ಪ್ರಕಾಶ್ ಶೆಟ್ಟಿ

| Published : May 11 2025, 01:18 AM IST

ಸೇನೆ ಕರೆದರೆ ಇಂದೇ ಗಂಟು-ಮೂಟೆ ಕಟ್ಟಲು ನಾವು ಸಿದ್ಧ: ಪ್ರಕಾಶ್ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಪೆಹಲ್ಗಾಮ್ ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ಅತ್ಯಂತ ನೋವಾಗಿದೆ. ನಾನು ಜಮ್ಮು- ಕಾಶ್ಮೀರದಲ್ಲಿ ಮುಸ್ಲಿಂ ಹೆಣ್ಣು ಮಗಳ ಮದುವೆಗೆ ಕಾವಾಲಾಗಿ ನಿಂತಿದ್ದೆ, ಇಡೀ ರಾತ್ರಿ ನಿದ್ದೆ ಇಲ್ದೆ ಕಾವಾಲು ಕಾದಿದ್ದೇವೆ. ಅವರಿಗೂ ಕೂಡ ಉಗ್ರವಾದಿಗಳ ಭಯವಿತ್ತು. ಅದಕ್ಕೆ ಇಡೀ ರಾತ್ರಿ ಕಾದಿದ್ದೇವೆ ಎಂದು 13 ವರ್ಷ ಜಮ್ಮು-ಕಾಶ್ಮೀರದಲ್ಲಿ ಸೈನಿಕ ಸೇವೆ ಸಲ್ಲಿಸಿರುವ ಮಾಜಿ ಸೈನಿಕ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.

ಯುದ್ಧದ ಕಾರ್ಮೋಡ: ಮಾಜಿ ಸೈನಿಕರ ಆಕ್ರೋಶಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪೆಹಲ್ಗಾಮ್ ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ಅತ್ಯಂತ ನೋವಾಗಿದೆ. ನಾನು ಜಮ್ಮು- ಕಾಶ್ಮೀರದಲ್ಲಿ ಮುಸ್ಲಿಂ ಹೆಣ್ಣು ಮಗಳ ಮದುವೆಗೆ ಕಾವಾಲಾಗಿ ನಿಂತಿದ್ದೆ, ಇಡೀ ರಾತ್ರಿ ನಿದ್ದೆ ಇಲ್ದೆ ಕಾವಾಲು ಕಾದಿದ್ದೇವೆ. ಅವರಿಗೂ ಕೂಡ ಉಗ್ರವಾದಿಗಳ ಭಯವಿತ್ತು. ಅದಕ್ಕೆ ಇಡೀ ರಾತ್ರಿ ಕಾದಿದ್ದೇವೆ ಎಂದು 13 ವರ್ಷ ಜಮ್ಮು-ಕಾಶ್ಮೀರದಲ್ಲಿ ಸೈನಿಕ ಸೇವೆ ಸಲ್ಲಿಸಿರುವ ಮಾಜಿ ಸೈನಿಕ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.19 ವರ್ಷದ ಸೇವೆಸಲ್ಲಿಸಿರುವ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ನಮಗೆ ವಯಸ್ಸಾಗಿದೆ, ಆದರೆ ದೇಹಕ್ಕಷ್ಟೆ, ಕಲಿತ ವಿದ್ಯೆಗಲ್ಲ, ದೇಶ ಸೇವೆ ಸಿದ್ಧಾಂತಕ್ಕಲ್ಲ. ಮೋದಿ ಕೊಟ್ಟಿರುವ ಹೆಲ್ಮೆಟ್, ಬುಲೆಟ್ ಪ್ರೂಫ್, ಎ.ಕೆ.47 ಗನ್ ಸಾಕು. ಕೇಂದ್ರ-ಸೇನೆ ಕರೆದರೆ, ಇಂದೇ ಗಂಟು-ಮೂಟೆ ಕಟ್ಟಲು ನಾವು ಸಿದ್ಧ ಎಂದು ನುಡಿದರು.ನಿಮ್ಮ ರಾಜಕೀಯ ಏನೇ ಇರಲಿ, ದೇಶ ಅಂತ ಬಂದಾಗ ದೇಶ-ಸೇನೆ ಬೆನ್ನಿಗೆ ನಿಲ್ಲುತ್ತೇವೆ. ನೀವು ಏನೂ ಮಾಡೋದು ಬೇಡ, ಸಾಥ್ ಕೊಟ್ಟು ಬೆನ್ನಿಗೆ ನಿಲ್ಲಿ ಸಾಕು ಎಂದರು.ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಇಂತಹಾ ಘಟನೆ ಆಗಿಲ್ಲವೇ, ಭದ್ರತಾ ವೈಫಲ್ಯ ಆಗಿಲ್ಲವೇ ? ಪ್ರಧಾನಿ ಅಲ್ಲದಿದ್ದರೂ ವಾಜಪೇಯಿ ಇಂದಿರಾಗಾಂಧಿಗೆ ದುರ್ಗಿಯಾಗು ನಿನ್ನ ಬೆನ್ನ ಹಿಂದೆ ನಾವಿರ್ತೀವಿ ಅಂದಿದ್ರು, ಇಂತಹಾ ಸಂದರ್ಭದಲ್ಲಿ ಅಂತಹಾ ಮಾತು ಹೇಳಿ ಬೆನ್ನಿಗೆ ನಿಲ್ಲಿ ಸಾಕು. ಜಮ್ಮು ಕಾಶ್ಮೀರದಲ್ಲಿ ಮುಸ್ಲಿಂ-ಹಿಂದೂ ಹೆಣ್ಣು ಮಕ್ಕಳಿಗೆ 303 ರೈಫಲ್ ಕೊಟ್ಟಿದ್ದನ್ನೂ ನೋಡಿದ್ದೇವೆ. ತಮ್ಮ ಮನೆ, ಅಪ್ಪ ಅಮ್ಮ, ಅಣ್ಣ ತಂಗಿ ಅವರನ್ನ ಅವರೇ ಕಾಯುತ್ತಿದ್ದರು. ನಮ್ಮ ಜೊತೆ ಅಲ್ಲಿನ ಹೆಣ್ಣು ಮಕ್ಕಳು ಕುಟುಂಬದ ರಕ್ಷಣೆಗೆ ಡ್ಯೂಟಿ ಮಾಡಿದ್ದಾರೆ ಎಂದು ಹೇಳಿದರು.ಪೋಟೋ ಫೈಲ್ ನೇಮ್‌ 10 ಕೆಸಿಕೆಎಂ 3