ಸಾರಾಂಶ
ಎಲ್ಲ ಬಗೆಯ ಕಬ್ಬಿಗೆ ಪ್ರತಿ ಟನ್‌ಗೆ ಸಕ್ಕರೆ ಕಾರ್ಖಾನೆಗಳಿಂದ ಹೆಚ್ಚುವರಿ 50 ರು. ಪಾವತಿಸುವಂತೆ ಸರ್ಕಾರ ಮಾಡಿರುವ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ದಕ್ಷಿಣ ಭಾರತ ಷುಗರ್ ಮಿಲ್ಸ್ ಅಸೋಸಿಯೇಷನ್ ತಿಳಿಸಿದೆ.
- ರಿಕವರಿ ದರ ಹೆಚ್ಚಿದ್ದರೆ ಮಾತ್ರ ಕೊಡ್ತೀವಿ- ಹೆಚ್ಚುವರಿ ಪಾವತಿ ಬಗ್ಗೆ ವಿರೋಧ
---ಕನ್ನಡಪ್ರಭ ವಾರ್ತೆ ಬೆಂಗಳೂರು
ಎಲ್ಲ ಬಗೆಯ ಕಬ್ಬಿಗೆ ಪ್ರತಿ ಟನ್‌ಗೆ ಸಕ್ಕರೆ ಕಾರ್ಖಾನೆಗಳಿಂದ ಹೆಚ್ಚುವರಿ 50 ರು. ಪಾವತಿಸುವಂತೆ ಸರ್ಕಾರ ಮಾಡಿರುವ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ದಕ್ಷಿಣ ಭಾರತ ಷುಗರ್ ಮಿಲ್ಸ್ ಅಸೋಸಿಯೇಷನ್ ತಿಳಿಸಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅಸೋಸಿಯೇಷನ್, ಸರ್ಕಾರದ ಭರವಸೆಯಂತೆ ಬೆಳಗಾವಿ ಭಾಗದ ಕಬ್ಬು ಬೆಳೆಗಾರರು ಪೂರೈಸಿರುವ ಕಬ್ಬಿಗೆ ಪ್ರತಿ ಕ್ವಿಂಟಾಲ್‌ಗೆ ಕಾರ್ಖಾನೆಗಳ ಹೆಚ್ಚುವರಿ ದರ ಸೇರಿಸಿ 3,200 ರು. ಪಾವತಿಸಲು ಸಿದ್ಧವಿದ್ದೇವೆ. ಹಾಗೆಯೇ, ಶೇ. 11.25ರ ಸಕ್ಕರೆ ಇಳುವರಿ ಹೊಂದಿರುವ ಕಬ್ಬಿನ ಪ್ರತಿ ಟನ್‌ಗೂ 3,200 ರು. ಪಾವತಿಸುತ್ತೇವೆ. ಅದನ್ನು ಹೊರತುಪಡಿಸಿ ಶೇ. 9.5 ಅಥವಾ ಅದಕ್ಕಿಂತ ಕಡಿಮೆ ಇಳುವರಿಯ ಹಾಗೂ ಶೇ.10.25ರ ರಿಕವರಿ ದರಕ್ಕೆ ಎಲ್ಲ ಜಿಲ್ಲೆಗಳಿಗೂ ಹೆಚ್ಚುವರಿ ದರ ಪಾವತಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
;Resize=(128,128))
;Resize=(128,128))
;Resize=(128,128))
;Resize=(128,128))