ಸಾರಾಂಶ
ಮಹಿಳಾ ಸಮಾಜದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ವಿಶ್ವ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ನಾವು ಪ್ರತಿಷ್ಠಾನ ಸೇವಾ ಸಂಸ್ಥೆಯ ವತಿಯಿಂದ ಮಹಿಳಾ ಸಮಾಜದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ವಿಶ್ವ ಭೂದಿನವನ್ನು ಅರ್ಥಪೂರ್ಣವಾಗಿ ಮಂಗಳವಾರ ಆಚರಿಸಲಾಯಿತು.ಭೂಮಿಯ ಅವಶ್ಯಕತೆ, ಜೀವರಾಶಿಗಳ ಬದುಕು, ಪರಿಸರ ರಕ್ಷಣೆ, ಭೂಮಿಯ ಮೇಲೆ ಮಾನವನ ದೌರ್ಜನ್ಯ, ಪ್ರಕೃತಿನಾಶ ಇವುಗಳ ಬಗ್ಗೆ ಮಕ್ಕಳಿಗೆ ರೂಪಕದ ಮೂಲಕ ಜಾಗೃತಿ ಮೂಡಿಸಲಾಯಿತು. ಪರಿಸರ ರಕ್ಷಣೆ, ಜೀವರಾಶಿಗಳ ಬದುಕು, ಹವಮಾನ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು.
ನಾವು ಪ್ರತಿಷ್ಠಾನದ ಕಾರ್ಯನಿರ್ವಹಕ ನಿರ್ದೇಶಕಿ ಸುಮನ ಮ್ಯಾಥ್ಯು ಮಾತನಾಡಿ, ಮಾನವ ಸೇರಿದಂತೆ ಜೀವರಾಶಿಗಳ ಬದುಕು ಭೂಮಿಯ ಮೇಲೆ ನಿಂತಿರುವುದು. ಭೂಮಿ ನಮಗೆ ಬದುಕು ಹೌದು, ಭವಿಷ್ಯವೂ ಹೌದು, ಆದು ಗೊತ್ತಿದ್ದರೂ ಭೂಮಿಯ ಮಹತ್ವದ ಬಗ್ಗೆ ನಾವು ತಿಳಿದುಕೊಳ್ಳುತ್ತಿಲ್ಲ. ಮರಗಿಡಗಳನ್ನು ಕಡಿದು ನಾಶಪಡಿಸುತ್ತಿದ್ದೇವೆ. ಪರಿಸರ ಸಂರಕ್ಷಣೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಮಕ್ಕಳು ಪರಿಸರ ರಕ್ಷಣೆ, ತ್ಯಾಜ್ಯವಿಲೇವಾರಿಯ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು. ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಕಾರ್ಯಕ್ರಮ ನಿರ್ವಹಿಸಿದರು.;Resize=(128,128))
;Resize=(128,128))
;Resize=(128,128))