ಉದ್ದೂರುಹೊಸಳ್ಳಿಯಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದ ನಂತರ ಸಚಿವ ಜಮೀರ್ ಅಹಮದ್ ಜೆಡಿಎಸ್ ಸೇರ್ಪಡೆ ಕುರಿತಂತೆ ಕೇಳಿದ ಪಶ್ನೆಗೆ ಕಾರವಾಗಿ ಉತ್ತರಿಸಿದರು. ಯಾವುದೇ ಕಾರಣಕ್ಕೂ ರಾಜಕೀಯದಲ್ಲಿ ಏನೋ ಶಕ್ತಿ ಬರುತ್ತೆ ಅಂಥೇಳಿ ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲವೆಂದರು. ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವುದು, ಕಾಂಗ್ರೆಸ್ ನಾಯಕರು ಅನ್ನ ತಿನ್ನುತ್ತಿರುವುದು ಆ ವರ್ಗದ ಜನಗಳಿಂದಲೇ ಅಂಥ ಹೇಳುತ್ತಿದ್ದಾರೆ. ಇವತ್ತು ಆ ಪರಿಸ್ಥಿತಿ ರಾಜ್ಯಕ್ಕೆ ತಂದು ಇಟ್ಟಿದ್ದಾರೆ. ಪ್ರತಿನಿತ್ಯ ಅನ್ನ ತಿನ್ನುತ್ತಿರುವುದೇ ಆ ಒಂದು ವರ್ಗದಿಂದ ಅಂಥ ಹೇಳುತ್ತಿದ್ದಾರೆ. ಇವತ್ತು ಕಾಂಗ್ರೆಸ್‌ನವರು ಯಾರದರೂ ಅದನ್ನು ವಿರೋಧ ಮಾಡಿದ್ದೀರಾ ಎಂದು ಪ್ರಶ್ನಿಸಿದರು.ಎಲ್ಲೆಲ್ಲಿಗೆ ಹೋಗುತ್ತೋ ನೋಡೋಣ ಬನ್ನಿ ಎಂದು ಬಹಳ ಅರ್ಥಗರ್ಭಿತವಾಗಿ ನುಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರನಮ್ಮ ಪಕ್ಷದಲ್ಲಿ ಅಧಿಕಾರಕ್ಕೋಸ್ಕರವಾಗಿ ಜಮೀರ್‌ ಅಂತಹ ಜನಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲಾ, ನಮಗೆ ಅದರ ಎಲ್ಲಾ ಅನುಭವಗಳಾಗಿದೆ. ಯಾವುದೇ ಕಾರಣಕ್ಕೂ ಆ ಸಬ್ಜೆಕ್ಟ್‌ನೇ ರೈಜ್ ಮಾಡಬೇಡಿ. ಅದರ ಅವಶ್ಯಕತೆನೂ ಇಲ್ಲಾ ನಮಗೆ, ನಾನು ಅನುಭವಿಸಿದ್ದೀನಿ, ಆ ಸಬ್ಜೆಕ್ಟ್ ನೇ ರೈಸ್‌ " ಮಾಡಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶದಿಂದ ನುಡಿದರು. ತಾಲೂಕಿನ ಉದ್ದೂರುಹೊಸಳ್ಳಿಯಲ್ಲಿ ಶ್ರೀ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದ ನಂತರ ಸಚಿವ ಜಮೀರ್ ಅಹಮದ್ ಜೆಡಿಎಸ್ ಸೇರ್ಪಡೆ ಕುರಿತಂತೆ ಕೇಳಿದ ಪಶ್ನೆಗೆ ಕಾರವಾಗಿ ಉತ್ತರಿಸಿದರು. ಯಾವುದೇ ಕಾರಣಕ್ಕೂ ರಾಜಕೀಯದಲ್ಲಿ ಏನೋ ಶಕ್ತಿ ಬರುತ್ತೆ ಅಂಥೇಳಿ ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ಕೈ ಹಾಕಲ್ಲವೆಂದರು. ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವುದು, ಕಾಂಗ್ರೆಸ್ ನಾಯಕರು ಅನ್ನ ತಿನ್ನುತ್ತಿರುವುದು ಆ ವರ್ಗದ ಜನಗಳಿಂದಲೇ ಅಂಥ ಹೇಳುತ್ತಿದ್ದಾರೆ. ಇವತ್ತು ಆ ಪರಿಸ್ಥಿತಿ ರಾಜ್ಯಕ್ಕೆ ತಂದು ಇಟ್ಟಿದ್ದಾರೆ. ಪ್ರತಿನಿತ್ಯ ಅನ್ನ ತಿನ್ನುತ್ತಿರುವುದೇ ಆ ಒಂದು ವರ್ಗದಿಂದ ಅಂಥ ಹೇಳುತ್ತಿದ್ದಾರೆ. ಇವತ್ತು ಕಾಂಗ್ರೆಸ್‌ನವರು ಯಾರದರೂ ಅದನ್ನು ವಿರೋಧ ಮಾಡಿದ್ದೀರಾ ಎಂದು ಪ್ರಶ್ನಿಸಿದರು.ಎಲ್ಲೆಲ್ಲಿಗೆ ಹೋಗುತ್ತೋ ನೋಡೋಣ ಬನ್ನಿ ಎಂದು ಬಹಳ ಅರ್ಥಗರ್ಭಿತವಾಗಿ ನುಡಿದರು.

ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆಗಳು ಮುಗಿಯುವ ಹಂತಕ್ಕೆ ಬರುತ್ತಿದೆ. ಜತೆಗೆ ರಾಜಕೀಯದಲ್ಲಿ ಅನುಭವಸ್ಥರು, ಹಿರಿತನದಿಂದ ಬಂದವರು ಬಳಸಿರುವ ಪದಬಳಕೆ ನೋಡಿದಾಗ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಯುವ ಜನಾಂಗಕ್ಕೆ ಯಾವ ರೀತಿ ದಾರಿ ತೋರಿಸುತ್ತಾರೆ ಎಂದು ಯೋಚನೆ ಮಾಡಬೇಕು. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರು ಕರ್ನಾಟಕದವರು, ಅವರ ಮನಸ್ಸಿನಲ್ಲಿ ಯಾವ ರೀತಿಯ ಭಾವನೆಗಳನ್ನು ಇಟ್ಟುಕೊಂಡಿದ್ದಾರೆ ಎಂಬುದು ಗೌರವಾನ್ವಿತ ಪ್ರಧಾನಮಂತ್ರಿಗಳನ್ನ ಟೆರೆರಿಸ್ಟ್ ಅಂಥಾ ಕರೀತಾರೆ ಎಂದರೆ ಎಷ್ಟು ಉದ್ಧಟತನ ಇರಬಹುದು ಅರ್ಥೈಸಿಕೊಳ್ಳಬೇಕು.ಕಮಿಟ್‌ಮೆಂಟ್ ಇಲ್ಲ:

ಅಭಿವೃದ್ಧಿ ಹೆಸರಿನಲ್ಲಿ ಯಾರು ಚುನಾವಣೆಯಲ್ಲಿ ಮತ ಕೇಳಲಿಲ್ಲ. ದೇಶಕ್ಕೆ ಏನು ಕೊಡ್ತಿವಿ ಅನ್ನೋದನ್ನು ಬಿಟ್ಟು ಫ್ರೀ ಕೊಡಲು ಕಾಂಪಿಟೇಷನ್ ಮಾಡುತ್ತಾ, ನೀನು ಅದು ಕೊಟ್ಟರೆ ನಾನು ಇದು ಕೊಡ್ತಿನಿ ಅಂತಾರೆ. ಇದು ಸ್ವಲ್ಪ ಆಘಾತ ತರುವ ವಿಷಯ. ಹಿಮಾಚಲ ಪ್ರದೇಶದಲ್ಲಿ ಚೀಫ್ ಸೆಕ್ರೆಟರಿಗೆ ಸಂಬಳ ಕಟ್ ಮಾಡಿದ್ದಾರೆ. ಇವತ್ತಿನ ಸರ್ಕಾರ ಜನಸಾಮಾನ್ಯರ ಬದುಕು ಸರಿಪಡಿಸುವುದು ಇರಲಿ, ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟ ಆಡ್ತಿದ್ದಾರೆ. ಜತೆಗೆ ೨೦೨೮ ಕ್ಕೆ ನಾವೇ ಅಧಿಕಾರಕ್ಕೆ ಬರ್ತೀವಿ ಅಂಥ ಹೇಳ್ತಾರೆ. ಕಳೆದ ಮೂರು ವರ್ಷ ನಿರಂತರವಾಗಿ ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆ ನಡೆಯುತ್ತಿದೆ. ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದರ ಬಗ್ಗೆ ಒಬ್ಬನೇ ಒಬ್ಬ ಮಂತ್ರಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿಲ್ಲ. ಇವರಿಗೆ ಈ ಸಮಸ್ಯೆಗಳಿಗೆ ಪರಿಹಾರ ತಂದು ಕೊಡುವ ಕಮಿಟ್‌ಮೆಂಟ್ ಇಲ್ಲ.ಕಳೆದ ಮೂರು ವರ್ಷದಿಂದ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಅವರ ಮೇಲೆ ಇವರು ಇವರ ಮೇಲೆ ಅವರು ಹೇಳುತ್ತಿದ್ದರು. ಇನ್ನೊಬ್ಬರು ದೇವರ ಮೊರೆ ಹೋಗುತ್ತಿದ್ದಾರೆ. ಇದೀಗ ಮಾಟಮಂತ್ರದ್ದು ಪ್ರಾರಂಭವಾಗಿದೆ. ಮುಖ್ಯಮಂತ್ರಿಗಳ ಮೇಲೆ ಮಾಟ ಮಾಡ್ದಿದ್ದಾರೆ ಅಂಥ ಆ ಪಕ್ಷದ ಶಾಸಕರೇ ಹೇಳ್ತಾರೆ.

ಇದನ್ನು ನೋಡಿದರೆ ಇವರೇನು ಹುಡುಗಾಟದ ರಾಜಕಾರಣ ಮಾಡ್ತಿದ್ದಾರ ಎಂದು ಚಿಂತಿಸಬೇಕಿದೆ ಎಂದರು.ಡಿಸಿಎಂ ವಿರುದ್ಧ ವಾಗ್ದಾಳಿ:

ತಮಿಳುನಾಡಿಗೆ ಹೋಗಿ ವೀರಾವೇಷದ ಭಾಷಣ ಮಾಡ್ತಾರೆ. ಅಲ್ಲಿ ಡಿಎಂಕೆ ಗೆಲ್ಸಿ ಅಂತಾರೆ, ಇಲ್ಲಿ ಮೇಕೆದಾಟು ಮಾಡ್ತೀವಿ ಅಂತಾರೆ, ಆದರೆ ಅವರು ಕೋರ್ಟ್‌ಗೆ ಹೋಗಿ ಮೇಕೆದಾಟು ಮಾಡಲು ತಡೆ ಒಡ್ಡುತ್ತಿದ್ದಾರೆ. ಇವರು ನಮ್ಮ ಮೇಲೆ, ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ರೇವಣ್ಣ ಮಾತನಾಡಿ ಕುಮಾರಸ್ವಾಮಿಯವರು ಹೊಳೆನರಸೀಪುರ ಅಭಿವೃದ್ಧಿಗೆ ಕುಮಾರಣ್ಣ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಸಮುದಾಯ ಆಸ್ಪತ್ರೆಗಳನ್ನು ನಿರ್ಮಿಸಿದವರು ಎಚ್.ಡಿ.ದೇವೇಗೌಡರು ಈ ಸರ್ಕಾರದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದೆ ಎಂದರು. ನಾನು ಮಂತ್ರಿ ಇದ್ದಾಗ ವಿದ್ಯುತ್ ದರ ಜಾಸ್ತಿ ಮಾಡಿದ್ನಾ, ಈ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿದೆ? ನಾವು ಐದು ಸಾವಿರ ರು.ಗೆ ಟ್ರಾನ್ಸ್‌ಫಾರ್ಮರ್ಸ್‌ಗಳನ್ನು ಕೊಟ್ಟೆವು ಎಂದು ರೈತರ ಏಳಿಗೆಗೆ ಕೈಗೊಂಡ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಹಿತಿ ಮಾಡಿದರು.ಶ್ರೀ ಆಂಜನೇಯನನ್ನು ನಂಬಿದವರು ಯಾರು ಕೆಟ್ಟಿಲ್ಲ ಎಂದು ತಿಳಿಸಿ, ದೇವರು ಗ್ರಾಮಸ್ಥರಿಗೆ ಒಳ್ಳೆಯದನ್ನು ಮಾಡಲಿ ಎಂದರು.

====* ಬಾಕ್ಸ್‌:::: ಕುಮಾರಣ್ಣ ಒಂದೆರಡು ಕಾರ್ಖಾನೆ ಮಾಡಿಕೊಡಿ

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಇಪ್ಪತ್ತೈದು ಸಾವಿರ ಯುವಕರಿಗೆ ಉದ್ಯೋಗ ಕೊಡಬೇಕು. ಆದ್ದರಿಂದ ಹಾಸನ ಜಿಲ್ಲೆಗೆ ಒಂದೆರಡು ಕಾರ್ಖಾನೆ ಬೇಕು. ಕುಮಾರಣ್ಣ ಒಂದೆರಡು ಕಾರ್ಖಾನೆ ಮಾಡಿಕೊಡಿ ಎಂದು ಕೋರಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡಿದವರು ಯಾರಾದರು ಇದ್ದರೇ ಅದು ಕುಮಾರಣ್ಣ ಮಾತ್ರ. ರೈತರ ಪರವಾದ ಅಭಿವೃದ್ಧಿ ಕಾರ್ಯದಲ್ಲಿ ಕುಮಾರಣ್ಣ ಅವರ ಕಾರ್ಯಕ್ಕೆ ಅಭಿನಂದನೆಗಳು ಎಂದರು.