ಸಾರಾಂಶ
ಕೇಡು ಬಯಸುವವರನ್ನು ಚಾಮುಂಡೇಶ್ವರಿ ನೋಡಿಕೊಳ್ತಾಳೆ
ಕನ್ನಡಪ್ರಭ ವಾರ್ತೆ ಬೆಂಗಳೂರುನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ, ದರ್ಶನ್ ಅಭಿಮಾನಿಗಳಿಗೆ ಶಾಂತಿಯಿಂದಿರಲು ಸಾಮಾಜಿಕ ಮಾಧ್ಯಮದಲ್ಲಿ ಪತ್ರ ಮುಖೇನ ಮನವಿ ಮಾಡಿದ್ದಾರೆ. ಈ ಪತ್ರದಲ್ಲಿ ಅವರು, ‘ದರ್ಶನ್‌ರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ’ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಬಂಧನವಾಗಿ ಜೈಲಿಗೆ ಹೋದ ಬಳಿಕ ಪತಿ ಪರ ಮೊದಲ ಬಾರಿ ದನಿ ಎತ್ತಿರುವ ವಿಜಯಲಕ್ಷ್ಮೀ, ‘ಇದು ನಮಗೆಲ್ಲ ಪರೀಕ್ಷೆಯ ಸಮಯ. ಈಗ ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ ಸೆಲೆಬ್ರಿಟಿಗಳನ್ನು ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ನಿಮ್ಮ ಆತಂಕವನ್ನು ನಾನು, ದರ್ಶನ್‌ರಿಗೆ ತಲುಪಿಸಿದ್ದೇನೆ. ಅವರೂ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ. ನಾವು ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ’ ಎಂದು ವಿಜಯಲಕ್ಷ್ಮೀ ಬರೆದಿದ್ದಾರೆ.ಈ ಪೋಸ್ಟ್ ಜೊತೆಗೆ ಬೆಟ್ಟದ ಮೇಲಿರುವ ‘ಡಿ ಬಾಸ್’ ಎಂಬ ಧ್ವಜದತ್ತ ದರ್ಶನ್ ಅಭಿಮಾನಿಗಳು ಕೈ ಹಿಡಿದು ಸಾಗುವ ಪೋಸ್ಟರ್ ಅನ್ನೂ ಹಂಚಿಕೊಂಡಿದ್ದಾರೆ.ನಾನು ದರ್ಶನ್ ಪರ
ನಿಲ್ಲುವೆ: ನಟಿ ಭಾವನಾಬೆಂಗಳೂರು: ‘ನಮ್ಮ ಕನ್ನಡ ಚಿತ್ರರಂಗ ಒಂದು ಕುಟುಂಬವಿದ್ದಂತೆ. ಇಲ್ಲಿ ಒಬ್ಬ ವ್ಯಕ್ತಿಗೆ ಸಮಸ್ಯೆ ಆಗಿದೆ ಅಂದರೆ ನಾವು ಅವರ ಪರ ನಿಲ್ಲಲೇ ಬೇಕು. ನಾನು ದರ್ಶನ್ ಪರವಾಗಿ ನಿಲ್ಲುತ್ತೇನೆ. ಅವರು ಅಪರಾಧಿ ಎಂದು ಸಾಬೀತಾದರೂ ಯಾವ ಹಿಂಜರಿಕೆಯೂ ಇಲ್ಲದೇ ಅವರನ್ನು ಬೆಂಬಲಿಸುತ್ತೇನೆ’ ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಕುರಿತು ಮಾತನಾಡಿರುವ ಅವರು, ‘ದರ್ಶನ್ ಜೈಲುಪಾಲಾಗಿರುವುದನ್ನು ಒಪ್ಪಿಕೊಳ್ಳುವುದೇ ಮನಸ್ಸಿಗೆ ಭಾರ. ಅವರು ನನಗೆ ಗೊತ್ತಿರುವವರು. ಸಾಕಷ್ಟು ವರ್ಷಗಳಿಂದ ಪರಿಚಿತರು. ಅವರಿಗೆ ತೊಂದರೆಯಾಗಿದೆ ಎಂದರೆ ಸಹಜವಾಗಿಯೇ ನನಗೆ ನೋವಾಗಿದೆ’ ಎಂದರು.ತಾಯಿಯಾದವಳು ಮಗ ಹೇಗಿದ್ದರೂ ಒಪ್ಪಿಕೊಳ್ಳುತ್ತಾಳೆ. ಕುಟುಂಬ ಅಂದಮೇಲೆ ಸಿಹಿ ಜೊತೆಗೆ ಕಹಿಯನ್ನೂ ತಗೊಳ್ಳಬೇಕು. ಈಗ ನಾನು ಆ ಜವಾಬ್ದಾರಿಯಿಂದ ನುಣುಚಿಕೊಂಡರೆ ನನ್ನ ವ್ಯಕ್ತಿತ್ವಕ್ಕೇ ಚ್ಯುತಿ ತಂದುಕೊಂಡ ಹಾಗೆ. ಹೀಗಾಗಿ ಎಂದೆಂದಿಗೂ ದರ್ಶನ್ ಪರವಾಗಿಯೇ ನಿಲ್ಲುವೆ’ ಎಂದು ಹೇಳಿದ್ದಾರೆ.‘ಹತ್ಯೆಗೊಳಗಾದ ಕುಟುಂಬಕ್ಕೂ ನಾನು ಸಾಂತ್ವನ ಹೇಳುವೆ. ಅವರಿಗೆ ನೋವು ಭರಿಸುವ ಶಕ್ತಿ ಸಿಗಲಿ. ಅವರಿಗೆ ಕಾನೂನು ರೀತ್ಯಾ ಸಿಗಬೇಕಾದ್ದು ಸಿಗಲಿ ಎಂದು ಆಶಿಸುವೆ. ಆದರೆ ನಮ್ಮ ಬೆಂಬಲ ದರ್ಶನ್‌ಗೆ’ ಎಂದು ಭಾವನಾ ಗಟ್ಟಿದನಿಯಲ್ಲಿ ಪುನರುಚ್ಚರಿಸಿದ್ದಾರೆ.ರೇಣುಕಾಸ್ವಾಮಿ ಕುಟುಂಬಕ್ಕೆ
ನಟ ಧ್ರುವಸರ್ಜಾ ಸಾಂತ್ವನಚಿತ್ರದುರ್ಗ: ನಟ ದರ್ಶನ್ ಗ್ಯಾಂಗ್ ನಿಂದ ಇತ್ತೀಚೆಗೆ ಹತ್ಯೆಗೊಳಗಾಗಿ ನೋವಿನಲ್ಲಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ಖ್ಯಾತ ನಟ ಧ್ರುವ ಸರ್ಜಾ ಸಮಾಧಾನ ಹೇಳಿದ್ದಾರೆ. ಧೈರ್ಯವಾಗಿರಿ ನಿಮ್ಮ ಜತೆಗೆ ನಾವಿದ್ದೇವೆ ಎಂದು ತಿಳಿಸಿದ್ದಾರೆ. ಧ್ರುವ ಸರ್ಜಾ ರಾಜ್ಯ ಅಭಿಮಾನಿ ಸಂಘದ ಅಧ್ಯಕ್ಷ ಮಹಾನ್ ಅವರು ಬುಧವಾರ ಚಿತ್ರದುರ್ಗದಲ್ಲಿರುವ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿದಾಗ ಧ್ರುವ ಅವರಿಗೆ ಕರೆ ಮಾಡಿ, ರೇಣುಕಾಸ್ವಾಮಿಯ ತಂದೆ-ತಾಯಿಯ ಜೊತೆ ಮಾತನಾಡಿಸಿದರು. ಈ ವೇಳೆ ಅವರಿಗೆ 50 ಸಾವಿರ ರುಪಾಯಿ ಆರ್ಥಿಕ ನೆರವನ್ನೂ ನೀಡಿದರು.
ಈ ಸಂದರ್ಭದಲ್ಲಿ ಧ್ರುವ ಸರ್ಜಾ ಅವರಿಗೆ ಕರೆ ಮಾಡಿ ಕುಟುಂಬದ ಜತೆಗೆ ಮಹಾನ್ ಅವರು ಮಾತನಾಡಿಸಿದ್ದು, ಈ ವೇಳೆ ಧ್ರುವ ಸರ್ಜಾ ಅವರು ಧೈರ್ಯವಾಗಿರಿ ನಿಮ್ಮ ಜತೆಗೆ ನಾವಿದ್ದೇವೆ ಎಂದು ಪೋಷಕರಿಗೆ ಧೈರ್ಯ ಹೇಳಿದರು.ಫೋಟೋ ಇದೆ