ಇಲ್ಲಿನ ಯಕ್ಷಗಾನ ಕಲಾರಂಗದ ಐ.ವೈ.ಸಿ. ಕಟ್ಟಡದ ಎರಡನೆ ಮಹಡಿಯಲ್ಲಿ ಪ್ರಭಾ ವಿ. ಶೆಣೈ ಮತ್ತು ಯು. ವಿಶ್ವನಾಥ್ ಶೆಣೈ ದಂಪತಿ ನೆರವಿನಿಂದ ನವೀಕರಣಗೊಂಡ ಪ್ರತಿಧ್ವನಿಮುಕ್ತ, ಹವಾನಿಯಂತ್ರಿತ ''''ವಿಶ್ವಪ್ರಭಾ ಸಭಾಂಗಣ'''' ಲೋಕಾರ್ಪಣೆಗೊಂಡಿತು.
ಉಡುಪಿ : ಇಲ್ಲಿನ ಯಕ್ಷಗಾನ ಕಲಾರಂಗದ ಐ.ವೈ.ಸಿ. ಕಟ್ಟಡದ ಎರಡನೆ ಮಹಡಿಯಲ್ಲಿ ಪ್ರಭಾ ವಿ. ಶೆಣೈ ಮತ್ತು ಯು. ವಿಶ್ವನಾಥ್ ಶೆಣೈ ದಂಪತಿ ನೆರವಿನಿಂದ ನವೀಕರಣಗೊಂಡ ಪ್ರತಿಧ್ವನಿಮುಕ್ತ, ಹವಾನಿಯಂತ್ರಿತ ''''''''''''''''ವಿಶ್ವಪ್ರಭಾ ಸಭಾಂಗಣ'''''''''''''''' ಲೋಕಾರ್ಪಣೆಗೊಂಡಿತು.
ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಶೆಣೈ ದಂಪತಿಗ, ದಾನ ಮಾಡುವಲ್ಲಿ ನಾವು ಸಂತೋಷವನ್ನು ಕಂಡಿದ್ದೇವೆ. ಕಷ್ಟದಿಂದ ಆರ್ಜಿಸಿದ ಎಲ್ಲಾ ಸಂಪತ್ತು ಸಮಾಜಕ್ಕೆ ಸಮರ್ಪಿತವಾಗಬೇಕೆಂಬುದು ನಮ್ಮ ಆಶಯ. ನಾವು ಯಕ್ಷಗಾನ ಕಲಾರಂಗಕ್ಕೆ ನೀಡಿದ ಹಣ ಸಮಾಜಕ್ಕೆ ಸಲ್ಲುತ್ತದೆ ಎಂಬುದು ನಮ್ಮ ಅನುಭವದ ಸತ್ಯ. ಇರುವವರೆಗೆ ಸಂಪತ್ತನ್ನು ಸತ್ಪಾತ್ರರಿಗೆ ನೀಡಿ, ನಿಧನಾನಂತರ ಈ ದೇಹವನ್ನು ದಾನ ಮಾಡಲು ನಿರ್ಣಯಿಸಿದ್ದೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ ಮಾತನಾಡಿ ವಿಶ್ವನಾಥ್ ಶೆಣೈ - ಪ್ರಭಾ ವಿ. ಶೆಣೈ ನಿಜಾರ್ಥದ ಆದರ್ಶ ದಂಪತಿಗಳು. ದಾನ ಮಾಡುವಲ್ಲಿ ಅವರಿಗಿರುವ ಸಂತೋಷ ಅವರ ಕೃತಿಯಲ್ಲೂ, ಇಂದು ಅವರಾಡಿದ ಮಾತುಗಳಲ್ಲಿಯೂ ವೇದ್ಯವಾಗಿದೆ ಎಂದರು.ನಾಡೋಜ ಡಾ.ಕೆ. ಪಿ. ರಾವ್ ದಾನದ ಮಹತ್ವವನ್ನು ತಿಳಿಸಿ ಶೆಣೈ ದಂಪತಿಯನ್ನು ಅಭಿನಂದಿಸಿದರು. ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್ ಇದ್ದರು. ಉಡುಪಿಯ ಬೇರೆ ಬೇರೆ ಸಂಘಟನೆಗಳ ಮುಖ್ಯಸ್ಥರು, ಗಣ್ಯರು ಮತ್ತು ಸಂಸ್ಥೆಯ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ವತಿಯಿಂದ ವಿಶ್ವನಾಥ್ ಶೆಣೈ ದಂಪತಿಗಳನ್ನು ಅಭಿನಂದಿಸಲಾಯಿತು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಿಸಿದ ಕಾರ್ಯದರ್ಶಿ ಮುರಲಿ ಕಡೆಕಾರ್, ಶೆಣೈ ಅವರ ಈ ಕೊಡುಗೆಯ ಪ್ರಯೋಜನ ಉಡುಪಿಯ ಎಲ್ಲಾ ಸಾಂಸ್ಕೃತಿಕ ಸಂಘಟನೆ ಮತ್ತು ಶ್ರೋತೃಗಳಿಗೆ, ಕಲಾರಂಗದ ಕಾರ್ಯಕರ್ತರಿಗೆ ಅದರ ನಿರ್ವಹಣೆಯ ಜವಾಬ್ದಾರಿ ಮಾತ್ರ. ಎಲ್ಲರೂ ನೆಮ್ಮದಿಯಿಂದ ಕಾರ್ಯಕ್ರಮ ನಡೆಸಿಕೊಂಡು ಹೋಗಬೇಕೆಂಬುದೇ ನಮ್ಮ ಆಶಯ ಎಂದರು.ರವಿರಾಜ್ ಎಚ್. ಪಿ. ನಿರ್ದೇಶಿಸಿದ, ವಿಶ್ವನಾಥ್ ಶೆಣೈ ಅವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.