ಗ್ಯಾರೆಂಟಿ ಈಡೇರಿಸಿದ್ದೇವೆ, ಅಳುಕಿಲ್ಲದೆ ಮತ ಕೇಳಿ: ಶಾಸಕ ಬಿ.ಜಿ.ಗೋವಿಂದಪ್ಪ

| Published : Mar 31 2024, 02:05 AM IST

ಗ್ಯಾರೆಂಟಿ ಈಡೇರಿಸಿದ್ದೇವೆ, ಅಳುಕಿಲ್ಲದೆ ಮತ ಕೇಳಿ: ಶಾಸಕ ಬಿ.ಜಿ.ಗೋವಿಂದಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರೆಂಟಿ ಕಾರ್ಡ್ ಕೊಟ್ಟು ಮತ ಕೇಳಿದ್ದೆವು. ಈಗ ಗ್ಯಾರೆಂಟಿ ಈಡೇರಿಸಿದ್ದೇವೆ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಅಂಜಿಕೆ ಅಳುಕಿಲ್ಲದೆ ಮತ ಕೇಳಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ಶ್ರೀದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಹೊಸದುರ್ಗ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವಾಗ ಯಾವುದೇ ಜಾತಿ, ವರ್ಗ, ಪಕ್ಷಗಳನ್ನು ನೋಡದೆ ಎಲ್ಲರಿಗೂ ಸಮಾನವಾಗಿ ಯೋಜನೆಗಳನ್ನು ನೀಡಿದೆ . ಅದೇ ರೀತಿ ಕೇಂದ್ರದಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕುಟುಂಬಕ್ಕೆ ಒಂದು ಲಕ್ಷ ರು.ಸಹಾಯಧನ ಸೇರಿದಂತೆ ಪಂಚ ಗ್ಯಾರಂಟಿಗಳನ್ನು ಕೇಂದ್ರದ ನಾಯಕರು ಘೋಷಣೆ ಮಾಡಿದ್ದಾರೆ ಎಂದರು.ಚುನಾವಣೆ ಬಂದಾಗ ಘೋಷಣೆ ಮಾಡುವುದೇ ಸಾಧನೆಯಾಗಬಾರದು, ತಾಲೂಕಿನ ಅಭಿವೃದ್ಧಿಯ ಬಗ್ಗೆ ಚಿಂತನೆಯಾಗಬೇಕು. ತಾಲೂಕಿನಲ್ಲಿ ಭದ್ರಾ ಮೆಲ್ದಂಡೆ ಯೋಜನೆ ಸೇರಿದಂತೆ ಕೆರೆಗಳೀಗೆ ನೀರು ತುಂಬಿಸುವ, ಕೃಷಿಗೆ ನೀರು ಹರಿಸುವ ಹಾಗೆಯೇ ತಾಲೂಕಿನ ಎಲ್ಲಾ ಹಳ್ಳೀಗಳಿಗೆ ಶುದ್ದನೀರು ಕೊಡುವ ಯೋಜನೆ ಈಗಾಗಲೇ ಚಾಲನೆ ನೀಡಲಾಗಿದ್ದು, ಕೇವಲ ಘೋಷಣೆಯ ಮೂಲಕ ಮತ ಕೇಳದೆ ನಮ್ಮ ಸಾಧನೆಯನ್ನು ತೋರಿಸಿ ಮತ ಕೇಳಿ. ಕಾಂಗ್ರೆಸ್‌ ಗೆದ್ದರೆ ಈ ದೇಶ ಸುಭೀಕ್ಷವಾಗಲಿದೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಿ ಎಂದರು .

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಜಾತಿ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಮೂಲಕ ಬಿಜೆಪಿ ರಾಜಕೀಯ ಮಾಡುತ್ತಿದೆ. ಯುವಕರಿಗೆ ಉದ್ಯೋಗ ನೀಡಲಿಲ್ಲ. 15 ಲಕ್ಷ ಹಣ ಕೊಡುತ್ತೇವೆ ಎಂದ ಮೋದಿ 15 ಪೈಸೆನೂ ಕೊಡಲಿಲ್ಲ, 2 ಕೋಟಿ ಉದ್ಯೋಗನೂ ಕೊಡಲಿಲ್ಲ. ಇದನ್ನು ಮರೆ ಮಾಚಲು ಮಾಧ್ಯಮಗಳನ್ನು ಬಳಸಿಕೊಂಡು ಸುಳ್ಳನ್ನು ಸತ್ಯವನ್ನಾಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದವರು ಕೆಲಸ ಮಾಡುತ್ತಾರೆ ಆದರೆ, ಅವರು ಪ್ರಚಾರ ಪಡೆಯುತ್ತಿಲ್ಲ. ಇದೆ ಕಾಂಗ್ರೆಸ್ ಪಕ್ಷದ ದೌರ್ಭಾಗ್ಯ. ನನ್ನ ಕ್ಷೇತ್ರಕ್ಕೆ ಹಿಂದಿನ ಅವಧಿಯಲ್ಲಿ ನೀಡಿದ್ದ ಶೇ.70 ರಷ್ಟು ಹಣವನ್ನು ಕಡು ಬಡವರು ಕುಡಿಯುವ ನೀರಿಗೆ ಕೊಟ್ಟಿದ್ದೆ. ಬಸ್ ನಿಲ್ದಾಣ ಕಟ್ಟಿಸಿದ್ದೇನೆ. ಕಳೆದ ನನ್ನ ಅವಧಿಯಲ್ಲಿ 363 ಸಾರಿ ಜಿಲ್ಲೆಯ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಮಾಡಿದ್ದೇನೆ. ಈಗಿದ್ದ ಬಿಜೆಪಿ ಸಂಸದ ಎಷ್ಟು ಬಾರಿ ಪ್ರಶ್ನಿಸಿದ್ದಾರೆ. ಎಂಬುದನ್ನು ಮತದಾರರಾದ ನೀವು ತಿಳಿಯಬೇಕು. 2014 ರಲ್ಲಿ ನನ್ನನ್ನು 1.02 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ, ಈ ಋಣ ನನ್ನ ಮೇಲಿದೆ. ಆದರೆ 2019ರಲ್ಲಿ ನನನ್ನು ಸೋಲಿಸಿದರೂ ಕೂಡ ಕ್ಷೇತ್ರದಿಂದ ಹಿಂದೆ ಸರಿಯದೆ ಜನರ ಒಡನಾಟ ಇಟ್ಟುಕೊಂಡಿದ್ದೆ ಇದರ ಫಲವೇ ಮತ್ತೆ ನಿಮ್ಮ ಮುಂದೆ ಬಂದು ನಿಲ್ಲಲು ಸಾಧ್ಯವಾಗಿದೆ ಎಂದರು. ಪ್ರತಿಯೊಬ್ಬ ಕಾರ್ಯಕರ್ತನೂ ಅಭ್ಯರ್ಥಿಗಳಾದಾಗ ಮಾತ್ರ ಈ ದರಿದ್ರ ಬಿಜೆಪಿ ಸರ್ಕಾರ ತೊಲಗಿಸಲು ಸಾಧ್ಯ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿಗಳಿಗೆ ಮುಸ್ಲಿಮರು ಬೇಡ, ಕ್ರಿಶ್ಚಿಯನ್ನರು ಬೇಡ. ಹೀಗಿದ್ದಾಗ ಸಬ್ ಕಾ ವಿಕಾಸ್‌ ಹೇಗೆ ಆಗುತ್ತದೆ? ಭಾವನೆಗಳನ್ನು ಕೆರಳಿಸುವ, ಸುಳ್ಳನ್ನು ಸತ್ಯವನ್ನಾ ಗಿಸುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮತ ಹಾಕಿ ಎಂದರು. ಕಾರ್ಮಿಕ ಸಂಘಟನೆಯ ರಾಜ್ಯಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ತಾಜ್‌ಪೀರ್, ಕಾಂಗ್ರೆಸ್ ಮುಖಂಡರಾದ ಎಂ. ಎಚ್.ಕೃಷ್ಣಮೂರ್ತಿ, ಜಿ.ಎಸ್.ಮಂಜುನಾಥ್, ಗೊ.ತಿಪ್ಪೇಶ್, ಎಚ್.ಬಿ.ಮಂಜುನಾಥ್, ಕೆಪಿಸಿಸಿ ಸದಸ್ಯರಾದ ಎಂ.ಪಿ.ಶಂಕರ್, ಅಲ್ತಾಪ್ ಪಾಷ, ಆಗ್ರೋ ಶಿವಣ್ಣ ಕೆ.ಅನಂತ್ ಸೇರಿದಂತೆ ಹೊಸದುರ್ಗ ಹಾಗೂ ಶ್ರೀರಾಂಪುರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.