ಮಕ್ಕಳ ಶಿಕ್ಷಣದ ದಾಹ ನೀಗಿಸುವ ಉತ್ತಮ ಶಿಕ್ಷಕರು ನಮ್ಮಲ್ಲಿದ್ದಾರೆ

| Published : Apr 01 2024, 12:53 AM IST

ಸಾರಾಂಶ

ಮುದಗಲ್ ಡಾ.ಎಸ್‌ಬಿ ಭಮಸಾಗರ ಪಬ್ಲಿಕ್ ಶಾಲೆಯಲ್ಲಿ ತರಂಗ್ ಕಲಾ ಕಂಪು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುದಗಲ್: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಲ್ಲಿ ವಿವಿಧ ರೀತಿಯ ಕಲೆ, ಕೌಶಲ್ಯ, ಶಿಕ್ಷಣದ ಜ್ಞಾನ ಹೊಂದಿದ್ದಾರೆ. ಅಂತಹ ಮಕ್ಕಳಿಗೆ ಶಿಕ್ಷಣದ ದಾಹವನ್ನು ನೀಗಿಸುವ ಸಾಮರ್ಥ್ಯವುಳ್ಳ ಶಿಕ್ಷಕ ಸಮೂಹವೇ ನಮ್ಮ ಭಾಗದಲ್ಲಿದೆ ಎಂದು ಸಿಆರ್‌ಪಿ ರಾಮಚಂದ್ರ ಢವಳೆ ಹೇಳಿದರು.

ಡಾ.ಎಸ್.ಬಿ. ಭಮಸಾಗರ ಮೆಮೋರಿಯಲ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ತರಂಗ್ (ಕಲಾ ಕಂಪು) ಕಾರ್ಯಕ್ರಮದ ಮಾತನಾಡಿ, ಮಕ್ಕಳ ಜ್ಞಾನ, ಬುದ್ಧಿ ವಿಭಿನ್ನವಾಗಿವೆ. ಅಷ್ಟೇ ಚಾಣಾಕ್ಷ ಮನೋಭಾವನೆ ಯುಳ್ಳವರನ್ನು ನಾವಿಂದು ಕಾಣುತ್ತಿದ್ದೇವೆ. ಮಕ್ಕಳ ಬುದ್ಧಿ ಮಟ್ಟಕ್ಕನುಗುಣವಾಗಿ ಶಿಕ್ಷಣದ ದಾಹವನ್ನು ನೀಗಿಸುವ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಹಿಂದುಳಿದ ಭಾಗ ಎನ್ನುವ ಮಧ್ಯೆಯೇ ಸಾಮರ್ಥ್ಯವುಳ್ಳವರನ್ನು ನಮ್ಮ ಭಾಗದಲ್ಲಿ ಕಾಣುತ್ತಿದ್ದೇವೆ. ಆದರೆ ನಾವು ನಮ್ಮ ಮಕ್ಕಳಿಗೆ ಮೊಬೈಲ್ ಕೊಟ್ಟು, ಶಾಲೆಗೆ ಕಳಿಸಿದರೆ ಸಾಲದು. ಮಕ್ಕಳ ಚಟುವಟಿಕೆಗಳ ಬಗ್ಗೆ ಪಾಲಕರು ನಿಗಾವಹಿಸಬೇಕು, ಅವರನ್ನು ಆಗಾಗ್ಗೆ ಪರೀಕ್ಷಿಸುತ್ತ ಇರಬೇಕೆಂದು ಪಾಲಕರಿಗೆ ಕಿವಿ ಮಾತು ಹೇಳಿದರು.

ತಾಲೂಕಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅದ್ಯಕ್ಷ ಮಂಜುನಾಥಸ್ವಾಮಿ ತೋರಣದಿನ್ನಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷೆ ನೀತಾ ಎಸ್. ಭಮಸಾಗರ, ಕಾರ್ಯದರ್ಶಿ ಡಾ.ಸಂಜೀವ ಭಮಸಾಗರ ಸೇರಿ ಅನೇಕರಿದ್ದರು.