ಸಾರಾಂಶ
ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು. ವಾಲ್ಮೀಕಿಯವರ ಆದರ್ಶ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡಾಗ ಅವರ ಜೀವನ ಉತ್ತಮವಾಗಿರುತ್ತದೆ. ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಮಹಾಕಾವ್ಯ ವಿಶ್ವವಿಖ್ಯಾತ ಪಡೆದಿದ್ದು ವಿಶ್ವಕ್ಕೆ ಮಾದರಿ ಕಾವ್ಯವಾಗಿದೆ. ವಾಲ್ಮೀಕಿ ಮೊದಲು ಸಾಮಾನ್ಯ ವ್ಯಕ್ತಿಯಾಗಿದ್ದು ತದ ನಂತರ ದೇವರ ಅನುಗ್ರಹ ಹಾಗೂ ತಪಸ್ಸಿನ ಫಲವಾಗಿ ಪವಿತ್ರ ಗ್ರಂಥ ರಾಮಾಯಣ ಮಹಾಕಾವ್ಯ ರಚಿಸಿ ಜೀವನದ ಮೌಲ್ಯಗಳನ್ನು ಜಗತ್ತಿಗೆ ತಿಳಿಸುವ ಮೂಲಕ ಮಹರ್ಷಿ ವಾಲ್ಮೀಕಿಯಾದರು ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಮಹರ್ಷಿ ವಾಲ್ಮಿಕಿ ಜಯಂತಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮಿಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ವಾಲ್ಮೀಕಿಯವರ ಆದರ್ಶ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಂಡಾಗ ಅವರ ಜೀವನ ಉತ್ತಮವಾಗಿರುತ್ತದೆ. ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಮಹಾಕಾವ್ಯ ವಿಶ್ವವಿಖ್ಯಾತ ಪಡೆದಿದ್ದು ವಿಶ್ವಕ್ಕೆ ಮಾದರಿ ಕಾವ್ಯವಾಗಿದೆ. ವಾಲ್ಮೀಕಿ ಮೊದಲು ಸಾಮಾನ್ಯ ವ್ಯಕ್ತಿಯಾಗಿದ್ದು ತದ ನಂತರ ದೇವರ ಅನುಗ್ರಹ ಹಾಗೂ ತಪಸ್ಸಿನ ಫಲವಾಗಿ ಪವಿತ್ರ ಗ್ರಂಥ ರಾಮಾಯಣ ಮಹಾಕಾವ್ಯ ರಚಿಸಿ ಜೀವನದ ಮೌಲ್ಯಗಳನ್ನು ಜಗತ್ತಿಗೆ ತಿಳಿಸುವ ಮೂಲಕ ಮಹರ್ಷಿ ವಾಲ್ಮೀಕಿಯಾದರು. ಪ್ರಸ್ತುತ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆ ವಿಶೇಷತೆಯಿಂದ ಕೂಡಿದ್ದು ಮಹರ್ಷಿಯವರು ಬರೆದ ರಾಮಾಯಣ ಮಹಾಕಾವ್ಯ ಗ್ರಂಥವು ವಿಶ್ವದಲ್ಲೇ ವಿಖ್ಯಾತಿ ಪಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸಿಲ್ದಾರ್ ನವೀನ್‌ಕುಮಾರ್ ವಿ. ಎಸ್, ಪೊಲೀಸ್ ಉಪ ಅಧೀಕ್ಷಕ ರವಿಪ್ರಸಾದ್, ಉಪನ್ಯಾಸಕ ನಿಂಬೇಹಳ್ಳಿ ಚಂದ್ರು, ಪುರಸಭಾ ಅಧ್ಯಕ್ಷೆ ಬನಶಂಕರಿ ರಘು, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ರಾಣಿಕೃಷ್ಣ, ಪುರಸಭಾ ಮುಖ್ಯಾಧಿಕಾರಿ ಹೇಮಂತ್‌ಕುಮಾರ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಮೂರ್ತಿ, ನೌಕರರ ಸಂಘದ ಅಧ್ಯಕ್ಷ ಮಂಜಣ್ಣ ಮತ್ತಿತರಿದ್ದರು.