ನಾಡು-ನುಡಿಗೆ ನಾವೆಲ್ಲರೂ ಮೊದಲು ಆದ್ಯತೆ ನೀಡಬೇಕು. ಕನ್ನಡ ಭಾಷೆಯೇ ನಮ್ಮ ಉಸಿರು. ನಾಡು ಹಾಗೂ ನಮ್ಮ ಅರಣ್ಯಗಳು ಯಾವಾಗಲೂ ಹಚ್ಚ ಹಸಿರಿನಿಂದ ಕೂಡಿದ್ದರೆ ನಮಗೆ ಉತ್ತಮ ಆಮ್ಲಜನಕ ದೊರಕುವ ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ.
ಹಲಗೂರು:
ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಶ್ರೀವಿನಾಯಕ ಗೂಡ್ಸ್ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.ಸಂಘದ ಉಪಾಧ್ಯಕ್ಷ ನಿಟ್ಟೂರು ರಘು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಾಡು-ನುಡಿಗೆ ನಾವೆಲ್ಲರೂ ಮೊದಲು ಆದ್ಯತೆ ನೀಡಬೇಕು. ಕನ್ನಡ ಭಾಷೆಯೇ ನಮ್ಮ ಉಸಿರು ಎಂದರು. ರಾಷ್ಟ್ರಗೀತೆ ಹಾಡುವ ಮುಖಾಂತರ ರಾಜ್ಯೋತ್ಸವಕ್ಕೆ ಮೆರುಗು ತಂದರು.
ಆಟೋ ಚಾಲಕ ಆಸಿಫ್ ಮಾತನಾಡಿ, 71ನೇ ವರ್ಷದ ಕನ್ನಡ ರಾಜ್ಯೋತ್ಸವದಂದು ಆಟೋ ಮಾಲೀಕರು ಹಾಗೂ ಚಾಲಕರು ಎಲ್ಲರೂ ಸೇರಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದೇವೆ. ನಂತರ ಸ್ಥಳದಲ್ಲಿದ್ದ ಎಲ್ಲರಿಗೂ ಸಿಹಿ ಹಂಚಿದ್ದೇವೆ ಎಂದರು. ಈ ವೇಳೆ ಅಧ್ಯಕ್ಷ ಮಹದೇವು, ಖಜಾಂಜಿ ಸುಂದರೇಶ, ಚಿಕ್ಕ ಪುಟ್ಟ, ಕೈಲಾಸ, ವಿಜಿ, ಮಂಜು, ಗೋವಿಂದ, ಗಿರಿ, ರೇವಣ್ಣ, ಸೇರಿದಂತೆ ಇತರರು ಇದ್ದರು.ಕಾಡು, ನಾಡು ಹಚ್ಚ ಹಸಿರಾಗಿದ್ದರೆ ಆರೋಗ್ಯ ವೃದ್ಧಿ: ಕೆ.ನಟರಾಜ್
ಹಲಗೂರು:ನಾಡು ಹಾಗೂ ನಮ್ಮ ಅರಣ್ಯಗಳು ಯಾವಾಗಲೂ ಹಚ್ಚ ಹಸಿರಿನಿಂದ ಕೂಡಿದ್ದರೆ ನಮಗೆ ಉತ್ತಮ ಆಮ್ಲಜನಕ ದೊರಕುವ ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ನಾಡಕಚೇರಿ ಉಪ ತಹಸೀಲ್ದಾರ್ ಕೆ.ನಟರಾಜ್ ತಿಳಿಸಿದರು.
ಭಾನುವಾರ ನಾಡಕಚೇರಿ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಗಿಡ ನೆಟ್ಟು ಮಾತನಾಡಿ, ಸಕಾಲಕ್ಕೆ ಮಳೆಯಾಗಿ ರೈತರಿಗೆ ಉತ್ತಮ ಬೆಳೆ ಬೆಳೆಯಲು ಮರಗಿಡಗಳು ಅತ್ಯವಶ್ಯಕ ಎಂದರು.ತೆಂಗು ಅರಳಿ ಮತ್ತು ಇತರೆ ಜಾತಿ ಸಸಿಗಳನ್ನು ನೆಟ್ಟು, ನೀರು ಹಾಕುವ ಮುಖಾಂತರ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು. ಕಚೇರಿ ಸುತ್ತ ಗಿಡಗಳನ್ನು ನೆಟ್ಟು, ಹಸಿರು ವಾತಾವರಣ ಸೃಷ್ಟಿಸಿ ಪರಿಸರ ಸಂರಕ್ಷಣೆ ಮಾಡುವ ಸಂಕಲ್ಪದೊಂದಿಗೆ ಸಿಬ್ಬಂದಿಯೊಂದಿಗೆ ಗಿಡ ನೆಡಲಾಗುತ್ತಿದೆ ಎಂದರು.
ಈ ವೇಳೆ ರಾಜ ಸ್ವನಿರೀಕ್ಷಕ ಪ್ರವೀಣ್ ಕುಮಾರ್, ಗ್ರಾಮ ಆಡಳಿತಾಧಿಕಾರಿ ಸೋಮಣ್ಣ, ಸೋಮಶೇಖರ್, ನರಸಪ್ಪ ರಾಥೋಡ್ ಸಿದ್ದರಾಯಿ ಮಾಳಿ, ಸಹಜತ್ ನದಾಫ್, ಗ್ರಾಮ ಸಹಾಯಕರಾದ ಮಹದೇವಸ್ವಾಮಿ, ಶಿವಪ್ರಕಾಶ್, ಪುಟ್ಟಸ್ವಾಮಿ, ನಂದನ್, ನವೀನ್, ನಂಜುಂಡ, ಕನಕ ಮಾಲೀಕ ಗೌರಮ್ಮ, ಅಟಲ್ ಜಿ ಆಪರೇಟರ್ ಪದ್ಮ ಭಾಗವಹಿಸಿದ್ದರು.