ಸಾರಾಂಶ
ಮಹಾತ್ಮ ಗಾಂಧಿಜೀಯವರು ಜೀವನದಲ್ಲಿ ರೂಢಿಸಿಕೊಂಡಿದ್ದ ಸರಳತೆ, ಸ್ವಚ್ಛತೆಗೆ ಆದ್ಯತೆ ಹಾಗೂ ಅಹಿಂಸಾ ಮಾರ್ಗವನ್ನು ನಾವುಗಳು ಪಾಲನೆ ಮಾಡಬೇಕು. ಜತೆಗೆ ಯುವ ಜನತೆ ಗಾಂಧಿಜೀಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಹಾಗೂ ಶಾಸ್ತ್ರಿಜೀಯವರು ನೀಡಿದ ಕೊಡುಗೆಯ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅವರ ಆದರ್ಶಗಳನ್ನು ಮೈಗೂಡಿಕೊಳ್ಳಬೇಕು ಎಂದು ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ ಸಲಹೆ ನೀಡಿದರು. ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಬಾಪೂಜಿ ಹೋರಾಟ ಹಾಗೂ ಶಾಸ್ತ್ರಿಜೀಯವರ ದೂರದೃಷ್ಠಿಯ ಆಡಳಿತದ ನೈಪುಣ್ಯತೆಯ ಅರಿವು ತಿಳಿಯಬೇಕಿದೆ ಹಾಗೂ ಪೂಜ್ಯರಿಗೆ ಗೌರವ ಸಲ್ಲಿಸಿದ್ದೇವೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮಹಾತ್ಮ ಗಾಂಧಿಜೀಯವರು ಜೀವನದಲ್ಲಿ ರೂಢಿಸಿಕೊಂಡಿದ್ದ ಸರಳತೆ, ಸ್ವಚ್ಛತೆಗೆ ಆದ್ಯತೆ ಹಾಗೂ ಅಹಿಂಸಾ ಮಾರ್ಗವನ್ನು ನಾವುಗಳು ಪಾಲನೆ ಮಾಡಬೇಕು. ಜತೆಗೆ ಯುವ ಜನತೆ ಗಾಂಧಿಜೀಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಹಾಗೂ ಶಾಸ್ತ್ರಿಜೀಯವರು ನೀಡಿದ ಕೊಡುಗೆಯ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅವರ ಆದರ್ಶಗಳನ್ನು ಮೈಗೂಡಿಕೊಳ್ಳಬೇಕು ಎಂದು ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ ಸಲಹೆ ನೀಡಿದರು.ಪಟ್ಟಣದ ಸೋಷಿಯಲ್ ಕ್ಲಬ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಪೂಜಾ ಮಹೋತ್ಸವದಲ್ಲಿ ಭಾರತಮಾತೆ, ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಬಾಪೂಜಿ ಹೋರಾಟ ಹಾಗೂ ಶಾಸ್ತ್ರಿಜೀಯವರ ದೂರದೃಷ್ಠಿಯ ಆಡಳಿತದ ನೈಪುಣ್ಯತೆಯ ಅರಿವು ತಿಳಿಯಬೇಕಿದೆ ಹಾಗೂ ಪೂಜ್ಯರಿಗೆ ಗೌರವ ಸಲ್ಲಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸೋಷಿಯಲ್ ಕ್ಲಬ್‌ನ ಸುದರ್ಶನ್, ನಟರಾಜ್, ಸೋಮಶೇಖರ್, ಇತರರು ಇದ್ದರು.