ತರೀಕೆರೆನಮ್ಮ ಚಿಂತನೆಗಳನ್ನು ಹೆಚ್ಚಿಸಿಕೊಂಡು ಅದರ ಅನುಸಂಧಾನ ಮಾಡಿಕೊಳ್ಳಬೇಕು ಎಂದು ಮೈಸೂರು ಉನ್ನತ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಟಿ.ಎನ್.ಪ್ರಭಾಕರ ಹೇಳಿದ್ದಾರೆ.

- ತರೀಕೆರೆಯಲ್ಲಿ ಅಂಚೆ ವೆಂಕಟರಾಮಯ್ಯ ಶ್ರೀಮತಿ ಸೀತಮ್ಮ ಜನ್ಮಶತಕ ಸಮಾರಂಭ-ಶ್ರೀ ದತ್ತ ವಿಶೇಷ ಉಪನ್ಯಾಸ

ಕನ್ನಡಪ್ರಭ ವಾರ್ತೆ, ತರೀಕೆರೆ

ನಮ್ಮ ಚಿಂತನೆಗಳನ್ನು ಹೆಚ್ಚಿಸಿಕೊಂಡು ಅದರ ಅನುಸಂಧಾನ ಮಾಡಿಕೊಳ್ಳಬೇಕು ಎಂದು ಮೈಸೂರು ಉನ್ನತ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಟಿ.ಎನ್.ಪ್ರಭಾಕರ ಹೇಳಿದ್ದಾರೆ.ಅಂಚೆ ಪ್ರತಿಷ್ಠಾನದಿಂದ ಖ್ಯಾತ ಹಾರ್ಮೋನಿಯಂ ವಾದಕ ಕಲಾವಿದ ಶ್ರೀ ರಾಮಭಜನಾ ಆರಾಧಕ ಅಂಚೆ ವೆಂಕಟ ರಾಮಯ್ಯ ಹಾಗೂ ಇವರ ಸಹಧರ್ಮಿಣಿ ಶ್ರೀಮತಿ ಸೀತಮ್ಮ ಜನ್ಮಶತಾಬ್ದಿ ಸ್ಮರಣೆ ಹಾಗೂ ಶ್ರೀ ದತ್ತ ಜಯಂತಿ ವಿಶೇಷ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಶ್ರೀ ಕೃಷ್ಣಪರಮಾತ್ಮ ಪ್ರಶ್ನೋತ್ತರದ ಮೂಲಕವೇ ಭಗವದ್ಗೀತೆ ಉಪದೇಶಿಸಿದ್ದಾನೆ, ಪ್ರಶ್ನೋತ್ತರಗಳು ಉಪನಿಷತ್ ಕಾಲ ದಿಂದಲೂ ಬಂದಿದೆ. ಒಳ್ಳೆಯ ವಿಷಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು, ಸುಕೃತ ಮರೆಯದೆ ನೆನಪಿನಲ್ಲಿಟ್ಟುಕೊಳ್ಳಬೇಕು. ಅನುಸ್ಮೃತಿಯಲ್ಲಿ ಶ್ರವಣ ಮತ್ತು ಮನನ ಹಾಗೂ ನಿಧಿಜ್ಞ್ಯಾಸನ ಎಂಬ ಮೂರು ಮೆಟ್ಟಿಲು ಗಳನ್ನು ತಿಳಿಸಲಾಗಿದೆ. ಅತ್ತಿ ಮತ್ತು ಅನಸೂಯ ಇವರ ಪುತ್ರ ದತ್ತಾತ್ರೇಯ, ಭಕ್ತಿ ಜ್ಞಾನ ವೈರಾಗ್ಯದಿಂದ ಶ್ರೀ ದತ್ತಾವತಾರ ಅಗಿದೆ. ಅಕ್ಷರ ಎಂದರೆ ನಾಶ ಇಲ್ಲದ್ದು ಎಂದು ಅರ್ಥ, ತಪಸ್ವಿಗಳ ಪುತ್ರ ತಪಸ್ವಿಯೇ ಆಗುತ್ತಾನೆ ಎಂದ ಅವರು ಉತ್ತಮ ಗ್ರಂಥಗಳನ್ನು ಅಭ್ಯಾಸ ಮಾಡಿ, ಸತ್ಸಂಗಗಳಲ್ಲಿ ಭಾಗವಹಿಸಬೇಕು. ಆಗಾಗ್ಗೆ ಶ್ರೀ ದತ್ತ ಪೀಠಕ್ಕೆ ಹೋಗಿಬರಬೇಕು ಎಂದು ಹೇಳಿದರು. ಅಂಚೆ ಪ್ರತಿಷ್ಛಾನದಿಂದ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಎ.ವಿ.ನಾಗಭೂಷಣ ನಿವೃತ್ತ ಉಪನ್ಯಾಸಕ ಡಾ.ಬಿ.ಎಚ್. ಕುಮಾರಸ್ವಾಮಿ ಸನ್ಮಾನಿಸಲಾಯಿತು.

ನಿವೃತ್ತ ಉಪನ್ಯಾಸಕ ಡಾ.ಬಿ.ಎಚ್.ಕುಮಾರಸ್ವಾಮಿ ಸನ್ಮಾನಕ್ಕೆ ಕೃತಜ್ಞತೆ ಅರ್ಪಿಸಿ ಮಾತನಾಡಿ ಶ್ರೀ ಶಂಕರಾಚಾರ್ಯರು ಭಕ್ತಿ ಮಾರ್ಗದ ಜೊತೆಗೆ ಜ್ಞಾನಮಾರ್ಗ ಬೋಧಿಸಿದರು, ಜ್ಞಾನ ಸಂಪಾದನೆಗೆ ವಯಸ್ಸಿನ ಅಂತರವಿಲ್ಲ ಎಂದು ಹೇಳಿದರು.ಮೈಸೂರು ಶಾರದ ವಿಲಾಸ ಕಾಲೇಜು ವಿಶ್ರಾಂತ ಕನ್ನಡ ಉಪನ್ಯಾಸಕ ಎ.ವಿ.ಸೂರ್ಯನಾರಾಯಣಸ್ವಾಮಿ. ಪ್ರತಿಷ್ಠಾನದ ಖಚಾಂಚಿ ಎಚ್.ವಿ.ಸತ್ಯನಾರಾಯಣ, ಅಜ್ಜಂಪುರ ರೇವಣ್ಣ, ಅಂಚೆ ಮನೆತನದ ಸದಸ್ಯರು ಭಾಗವಹಿಸಿದ್ದರು.

5ಕೆಟಿಆರ್.ಕೆ.5ಃ

ತರೀಕೆರೆಯಲ್ಲಿ ಅಂಚೆ ಪ್ರತಿಷ್ಠಾನದಿಂದ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಡಾ.ಬಿ.ಎಚ್.ಕುಮಾರಸ್ವಾಮಿ ಯನ್ನು ಗೌರವಿಸಲಾಯಿತು. ಪ್ರತಿಷ್ಠಾನ ಕಾರ್ಯಾಧ್ಯಕ್ಷ ಎ.ವಿ.ನಾಗಭೂಷಣ, ಮೈಸೂರು ಉನ್ನತ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಟಿ.ಎನ್.ಪ್ರಭಾಕರ ಮತ್ತಿತರರು ಇದ್ದರು.