ಕಾರ್ಯಾಂಗ ಮತ್ತು ನ್ಯಾಯಾಂಗ ವೃತ್ತಿಗಳಾಗಿದ್ದು, ಶಾಸಕಾಂಗ ಮತ್ತು ಪತ್ರಿಕಾರಂಗ ಸೇವೆಯಾಗಿರುವುದರಿಂದ ಇದನ್ನು ಯಾರು ಉದ್ಯೋಗವಾಗಿ ಮಾಡಿಕೊಳ್ಳುತ್ತಾರೆ ಆಗ ಸಮಾಜಕ್ಕೆ ನ್ಯಾಯ ನೀಡಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಶಾಸಕಾಂಗ ಮತ್ತು ಪತ್ರಿಕಾರಂಗ ಎರಡು ಕ್ಷೇತ್ರಗಳು ಜನರ ಮತ್ತು ಸಮಾಜದ ಸೇವೆ ಮಾಡುವ ಪ್ರಮುಖ ಅಂಗಗಳಾಗಿದ್ದು, ಇವುಗಳಲ್ಲಿ ಕೆಲಸ ನಿರ್ವಹಿಸುವವರು ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.

ಪಟ್ಟಣದ ಶ್ರೀ ಕೃಷ್ಣಮಂದಿರದಲ್ಲಿ ಹಿರಿಯ ಪತ್ರಕರ್ತ ದಿ. ಕೆ.ಟಿ.ರಮೇಶ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಹುಟ್ಟು ಆಕಸ್ಮಿಕ ಮತ್ತು ಸಾವು ನಿಶ್ಚಿತವಾಗಿದ್ದು, ಈ ಮಧ್ಯೆ ಮಾಡುವ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತ ಎಂದರು.

ಕಾರ್ಯಾಂಗ ಮತ್ತು ನ್ಯಾಯಾಂಗ ವೃತ್ತಿಗಳಾಗಿದ್ದು, ಶಾಸಕಾಂಗ ಮತ್ತು ಪತ್ರಿಕಾರಂಗ ಸೇವೆಯಾಗಿರುವುದರಿಂದ ಇದನ್ನು ಯಾರು ಉದ್ಯೋಗವಾಗಿ ಮಾಡಿಕೊಳ್ಳುತ್ತಾರೆ ಆಗ ಸಮಾಜಕ್ಕೆ ನ್ಯಾಯ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟ ಮಾಜಿ ಸಚಿವರು ಜನ ಪರವಾದ ಕಾರ್ಯಗಲು ಮಾತ್ರ ಜನ ಮಾನಸದಲ್ಲಿ ಸ್ಥಾಮ ಪಡೆಯಲು ಸಾಧ್ಯ ಎಂದು ತಿಳಿಸಿದರು.

ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್‌. ಬಸಂತ್, ಕಸಾಪ ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ. ರಾಘವೇಂದ್ರ, ಮೈಸೂರು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಬಿಜೆಪಿ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಮಾತನಾಡಿದರು.

ಮೈಸೂರು ಪತ್ರಕರ್ತರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಮಣ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು, ಮಾಜಿ ಅಧ್ಯಕ್ಷ ವಡ್ಡರಕೊಪ್ಪಲು ಶಿವರಾಮು, ಕೆ.ಟಿ. ರಮೇಶ್ ಅಭಿಮಾನಿ ಬಳಗದ ಅಧ್ಯಕ್ಷ ಎಚ್.ಪಿ. ಶಿವಣ್ಣ, ಪುರಸಭೆ ಮಾಜಿ ಉಪಾಧ್ಯಕ್ಷೆ ನಾಗರತ್ನಮ್ಮ, ಮಾಜಿ ಸದಸ್ಯರಾದ ಮೊಹಮ್ಮದ್ ಸಿರಾಜ್, ಕೆ.ಪಿ. ಪ್ರಭುಶಂಕರ್, ಎನ್. ಶಿವಕುಮಾರ್, ಕೆ.ಟಿ. ರಮೇಶ್ ಪುತ್ರಿ ದಿವಿಶಾ, ರೈತ ಯುವ ವೇದಿಕೆ ಅಧ್ಯಕ್ಷ ರಾಂಪ್ರಸಾದ್, ಪ್ರಗತಿ ಪರಚಿಂತಕ ಸುಜಯ್ ಗೌಡ, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ತಾಲೂಕು ವರ್ತಕರ ಸಂಘದ ಅಧ್ಯಕ್ಷ ನಾಗೇಶ್, ಜೆಡಿಎಸ್ ಮುಖಂಡ ಪ್ರಕಾಶ್, ಸೇರಿದಂತೆ ಕೆ.ಟಿ.ರಮೇಶ್ ಅಭಿಮಾನಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪಧಾದಿಕಾರಿಗಳು ಇದ್ದರು.