ಸಾರಾಂಶ
ಬುದ್ಧ ಪೂರ್ಣಿಮೆಯು ಬುದ್ಧನ ಜೀವನವನ್ನು ಗೌರವಿಸುವ, ಅವನ ಬೋಧನೆಗಳು ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಆಚರಿಸುವ ಮತ್ತು ಅವನ ಸಿದ್ಧಾಂತಗಳು ಸಮಕಾಲೀನ ಸಮಾಜಕ್ಕೆ ಎಷ್ಟು ಅನ್ವಯಿಸುತ್ತವೆ ಎಂಬುದನ್ನು ತಿಳಿಸುವುದಾಗಿದೆ ಎಂದು ಭೈರನಹಟ್ಟಿ ಶಿರೋಳ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ನರಗುಂದ: ಬುದ್ಧ ಪೂರ್ಣಿಮೆಯು ಬುದ್ಧನ ಜೀವನವನ್ನು ಗೌರವಿಸುವ, ಅವನ ಬೋಧನೆಗಳು ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಆಚರಿಸುವ ಮತ್ತು ಅವನ ಸಿದ್ಧಾಂತಗಳು ಸಮಕಾಲೀನ ಸಮಾಜಕ್ಕೆ ಎಷ್ಟು ಅನ್ವಯಿಸುತ್ತವೆ ಎಂಬುದನ್ನು ತಿಳಿಸುವುದಾಗಿದೆ ಎಂದು ಭೈರನಹಟ್ಟಿ ಶಿರೋಳ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ದೊರೆಸ್ವಾಮಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಬುದ್ಧ ಪರಿಣಾಮ ನಿಮಿತ್ತ ಭಗವಾನ್ ಬುದ್ಧರ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡುವುದರ ಮೂಲಕ ನಮನ ಸಲ್ಲಿಸಿ ಆನಂತರ ಮಾತನಾಡಿದರು.ಜಗತ್ತಿಗೆ ಮೊಟ್ಟಮೊದಲ ಸಮಾನತೆಯ ಪರಿಕಲ್ಪನೆಯನ್ನು ನೀಡಿದ ಬುದ್ಧನ ತತ್ವ ಸಂದೇಶಗಳು ಸಾವ೯ಕಾಲಿಕ. ಬುದ್ಧ ಐತಿಹಾಸಿಕ ವ್ಯಕ್ತಿ. ಅವರ ಬೋಧನೆಗಳು ಪ್ರಪಂಚದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಎನ್. ಆರ್. ನಿಡಗುಂದಿ, ಸಂಪನ್ಮೂಲ ಅಧಿಕಾರಿ ಭೂಸರೆಡ್ಡಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್ .ಜಿ. ಮಣ್ಣೂರಮಠ, ಚಂದ್ರು ಮಂಟೂರಮಠ, ವಿರಕ್ತಮಠ, ನಿವೃತ್ತ ಶಿಕ್ಷಕ ಎಸ್.ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.