ಮಾತೃಭಾಷೆ ಮೇಲಿನ ಅಭಿಮಾನ ಹೆಚ್ಚಿಸುವ ಕಾರ್ಯ ಮಾಡತೇವಿ

| Published : May 21 2025, 02:26 AM IST

ಸಾರಾಂಶ

ಸಂಘವು ಸದ್ಯ ಧಾರವಾಡ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದು, ತಾವು ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಈ ಕಾರ್ಯಗಳನ್ನು ವಿಸ್ತರಿಸಲು ಉಸ್ತುಕರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ತಂಡದ ಪ್ರಚಾರ ಕಾರ್ಯ ಜೋರು ಪಡೆದಿದೆ‌ ಮತದಾರರಿಂದಲೂ ಉತ್ತಮ ಸ್ಪಂದನೆ ಇದೆ.

ಧಾರವಾಡ: ಕನ್ನಡ ನಾಡಿನಲ್ಲಿಯೇ ಕನ್ನಡ ಸೊರಗುತ್ತಿದೆ. ಈ ಸಮಯದಲ್ಲಿ ತಮ್ಮ ತಂಡ ಅಧಿಕಾರಕ್ಕೆ ಬಂದರೆ ಮಾತೃಭಾಷೆ ಮೇಲಿನ ಅಭಿಮಾನ ಹೆಚ್ಚಿಸಿ ಕನ್ನಡ ಬೆಳವಣಿಗೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಪ್ರಕಾಶ್ ಉಡಿಕೇರಿ ಭರವಸೆ ನೀಡಿದರು.

ಸಂಘದ ಚುನಾವಣೆಗೆ ಸ್ಪರ್ಧಿಸಿರುವ ಪಾಪು ಅಭಿಮಾನಿ ಬಳಗದ ಸದಸ್ಯರು ಮಂಗಳವಾರ ಮಳೆ ಮಧ್ಯೆಯೂ ಮತದಾರರ ಮನೆ ಭೇಟಿ ನಡೆಸಿದ ವೇಳೆ ಮಾತನಾಡಿದ ಅವರು, ನಾಡೋಜ ಪಾಟೀಲ ಪುಟ್ಟಪ್ಪನವರ ಹೆಸರಿನಲ್ಲಿ ತಂಡ ಕಟ್ಟಿದ್ದು ಅವರ ಮಾದರಿ ಹೋರಾಟ ಮೂಲಕ ಕನ್ನಡಕ್ಕೆ ಆಗುವ ಅನ್ಯಾಯ ಪ್ರತಿಭಟಿಸಲಿದ್ದೇವೆ ಎಂದರು.

ಸಂಘವು ಸದ್ಯ ಧಾರವಾಡ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದು, ತಾವು ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಈ ಕಾರ್ಯಗಳನ್ನು ವಿಸ್ತರಿಸಲು ಉಸ್ತುಕರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ತಂಡದ ಪ್ರಚಾರ ಕಾರ್ಯ ಜೋರು ಪಡೆದಿದೆ‌ ಮತದಾರರಿಂದಲೂ ಉತ್ತಮ ಸ್ಪಂದನೆ ಇದೆ ಎಂದರು.

ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ. ಶರಣಪ್ಪ ಕೊಟಗಿ ಮಾತನಾಡಿ, 136 ವರ್ಷದ ಇತಿಹಾಸದ ಸಂಘಕ್ಕೆ ನಾಡಿನ ಪ್ರಮುಖರು, ಸಾಹಿತಿಗಳು, ಯುವ ಬರಹಗಾರು, ವ್ಯಾಪಾರಸ್ಥರು, ಎಲ್ಲ ಹಿರಿಯರು, ಕಿರಿಯರ ಹಿತದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದೇವೆ. ಮತದಾರರು ನಮ್ಮ ತಂಡಕ್ಕೆ ಬೆಂಬಲ ನೀಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು. ತಮ್ಮ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದರು.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೋಹನ ಲಿಂಬಿಕಾಯಿ, ಡಾ. ರತ್ನಾ ಐರಸಂಗ, ಮಾರ್ತಾಂಡಪ್ಪ ಕತ್ತಿ, ವೀರಣ್ಣ ಯಳಲ್ಲಿ, ಪ್ರಭು ಹಂಚಿನಾಳ, ವಿಶ್ವನಾಥ ಅಮರಶೆಟ್ಟಿ, ಪ್ರಭು ಕುಂದರಗಿ, ವಿಶ್ವನಾಥ ಚಿಂತಾಮಣಿ ಇತರರು ಇದ್ದರು.