ಹಾರೋಹಳ್ಳಿ: ತಾಲೂಕನ್ನು ಸಿಂಗಾಪುರ ಮಾಡುತ್ತಿದ್ದೇವೆ ಎಂದು ಬೀಗುತ್ತಿರುವವರು ಮೊದಲು ಜನರ ಪ್ರಶ್ನೆಗಳಿಗೆ ಉತ್ತರಿಸಲಿ. ಅಭಿವೃದ್ಧಿ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ಮಾಡುವ ಬದಲು ಬಹಿರಂಗ ಚರ್ಚೆಗೆ ಬನ್ನಿ. ದಿನಾಂಕ ನಿಗದಿಪಡಿಸಿ, ವೇದಿಕೆ ಸಿದ್ಧಪಡಿಸಿ. ನಾವು ದಾಖಲೆ ಸಮೇತ ಚರ್ಚೆಗೆ ಸಿದ್ಧ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕೊಳ್ಳಿಗನಹಳ್ಳಿ ರಾಮು ಸವಾಲು ಹಾಕಿದರು

ಹಾರೋಹಳ್ಳಿ: ತಾಲೂಕನ್ನು ಸಿಂಗಾಪುರ ಮಾಡುತ್ತಿದ್ದೇವೆ ಎಂದು ಬೀಗುತ್ತಿರುವವರು ಮೊದಲು ಜನರ ಪ್ರಶ್ನೆಗಳಿಗೆ ಉತ್ತರಿಸಲಿ. ಅಭಿವೃದ್ಧಿ ವಿಚಾರದಲ್ಲಿ ಆರೋಪ ಪ್ರತ್ಯಾರೋಪ ಮಾಡುವ ಬದಲು ಬಹಿರಂಗ ಚರ್ಚೆಗೆ ಬನ್ನಿ. ದಿನಾಂಕ ನಿಗದಿಪಡಿಸಿ, ವೇದಿಕೆ ಸಿದ್ಧಪಡಿಸಿ. ನಾವು ದಾಖಲೆ ಸಮೇತ ಚರ್ಚೆಗೆ ಸಿದ್ಧ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕೊಳ್ಳಿಗನಹಳ್ಳಿ ರಾಮು ಸವಾಲು ಹಾಕಿದರು.

ಸುದ್ದಿಗೋಷ್ಠಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವುದು ಮತ್ತು ವಿರೋಧಿಸುವುದು ಪ್ರತಿಯೊಬ್ಬರ ಹಕ್ಕು. ಆದರೆ ಪ್ರಶ್ನೆ ಕೇಳಿದವರ ಮೇಲೆ ವೈಯಕ್ತಿಕ ದಾಳಿ ನಡೆಸುವುದು, ಗದಾ ಪ್ರಹಾರ ಮಾಡುವುದು, ದ್ವೇಷದ ರಾಜಕಾರಣ ನಡೆಸುವುದು ಸರಿಯಲ್ಲ. ಅಭಿವೃದ್ಧಿಯ ಲೆಕ್ಕವನ್ನು ಜನರ ಮುಂದಿಡಿ, ವೈಯಕ್ತಿಕ ಟೀಕೆಗಳಿಗೆ ಇಳಿಯಬೇಡಿ. ಹಾರೋಹಳ್ಳಿ ತಾಲೂಕು ರಚನೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಾತ್ರ ಮರೆಯಬಾರದು. ೩೫ ವರ್ಷಗಳ ಹಿಂದಿನ ವಿಚಾರಗಳನ್ನು ಮಾತನಾಡುವವರು ಅಂದಿನ ರಾಜಕೀಯ ವಾಸ್ತವಾಂಶಗಳನ್ನು ಮೊದಲು ತಿಳಿದುಕೊಳ್ಳಲಿ ಎಂದು ಹೇಳಿದರು.

ಕೊಳ್ಳಿಗನಹಳ್ಳಿ ಸಹಕಾರ ಸಂಘದಲ್ಲಿ ನಮ್ಮ ಅವಧಿಯಲ್ಲಿ ಅವ್ಯವಹಾರ ನಡೆದಿದ್ದರೆ ನಾನು ರಾಜಕಾರಣ ನಿವೃತ್ತಿ ಹೊಂದುತ್ತೇನೆ. 18 ತಿಂಗಳಿನಿಂದ ಕಾಂಗ್ರೆಸ್ ಮುಖಂಡರು ಆಡಳಿತ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ 2 ಕೋಟಿ ಅವ್ಯವಹಾರ ನಡೆದಿದೆ. ಸತ್ತವರ ಹೆಸರಿನಲ್ಲಿಯೂ ಹಣ ಪಡೆದಿದ್ದಾರೆ. ಈ ಬಗ್ಗೆ ತಾಕತ್ತಿದ್ದರೆ ತನಿಖೆ ನಡೆಸಿ ಎಂದು ಸವಾಲು ಹಾಕಿದರು.

ಈ ವೇಳೆ ಜೆಡಿಎಸ್ ಮುಖಂಡರಾದ ಬಸವರಾಜು, ಕೆಂಪಣ್ಣ, ಮಲ್ಲಪ್ಪ, ಕೊಳ್ಳಿಗನಹಳ್ಳಿ ಲಕ್ಷ್ಮಣ್, ತಮ್ಮಯ್ಯಣ್ಣ, ಮಹದೇವ್, ಶ್ರೀನಿವಾಸ್, ಕುಮಾರ್, ಕೋಟೆ ರಾಜು, ಅಭಿಲಾಷ್, ಮಹೇಶ್, ನಾಗು, ಕಾರ್ತಿಕ್, ಅಣೆದೊಡ್ಡಿ ಶಿವನಂಜಪ್ಪ, ಸಿದ್ದಪ್ಪ ಇತರರಿದ್ದರು.

25ಕೆಆರ್ ಎಂಎನ್ 17.ಜೆಪಿಜಿ

ಹಾರೋಹಳ್ಳಿಯಲ್ಲಿ ಜೆಡಿಎಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.