ಸಾರಾಂಶ
ಅನಾಮಿಕನನ್ನು ಎಸ್‌ಐಟಿ ತನಿಖೆ ಮಾಡಿದ್ರೆ ಒಳ್ಳೆಯದು, ಸುಜಾತ ಭಟ್ ನಮ್ಮ ಹೋರಾಟದಲ್ಲಿಲ್ಲ!
ಕನ್ನಡಪ್ರಭ ವಾರ್ತೆ ಉಡುಪಿಮಂಜುನಾಥ, ಅಣ್ಣಪ್ಪನ್ನು ಬಿಟ್ಟು ಬೇರೆ ಯಾರೂ ನಮ್ಮ ಹೋರಾಟದ ದಾರಿಯನ್ನು ತಪ್ಪಿಸಲು ಸಾಧ್ಯವಿಲ್ಲ, ಸೌಜನ್ಯ ಪರ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಸಿಕ್ಕಿದ ನಂತರ, ಪೊಲೀಸ್ ಭದ್ರತೆಯಲ್ಲಿ ಹಿರಿಯಡ್ಕದ ಸಬ್ ಜೈಲಿಗೆ ಬಂದ ತಿಮರೋಡಿ, ಅಲ್ಲಿಂದ ಮನೆಗೆ ಹಿಂತಿರುವ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.ಧರ್ಮಸ್ಥಳದಲ್ಲಿ ಅನಾಮಿಕ ದೂರುದಾರನ ಬಂಧನ ಆಗಿರುವುದು ನನಗೆ ಗೊತ್ತಿಲ್ಲ, ಆತನನ್ನು ಎಸ್‌ಐಟಿಯವರು ತನಿಖೆ ಮಾಡುವುದೂ ಒಳ್ಳಯದೇ ಎಂದರು.ಇನ್ನು ಅನನ್ಯ ಭಟ್ ಸಾವಿನ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡುತ್ತಿರುವ ಸುಜಾತ ಭಟ್ ಬಗ್ಗೆ ಏನೂ ಹೇಳುವುದಿಲ್ಲ. ಆಕೆ ನಮ್ಮ ಹೋರಾಟದಲ್ಲಿ ಇಲ್ಲ, ತನಗೆ ಅನ್ಯಾಯ ಆಗಿದೆ ಎಂದು ಬಂದಿದ್ದರು. ನಾವು ಅವರನ್ನು ನಂಬಿಲ್ಲ, ನಾವು ಸೌಜನ್ಯಪರ ಹೋರಾಟವನ್ನು ನಂಬಿದವರು, ಈ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.ತಿಮರೋಡಿ ಜೊತೆಗಿದ್ದ ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್ ಮಾತನಾಡಿ, ಜಾಮೀನು ಮಂಜೂರಾಗಿರುವುದು ಸಂತೋಷ ನೀಡಿದೆ. ಅತ್ಯಾಚಾರ, ಕೊಲೆ ವಿರುದ್ಧ ನಿರಂತರ 13 ವರ್ಷದಿಂದ ಹೋರಾಟ ಮಾಡಿದ್ದಾರೆ. ಈಗ ನ್ಯಾಯದ ಭಗೀರಥನಿಗೆ ನ್ಯಾಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.ನಂತರ ತಿಮರೋಡಿ ಅವರು ಪತ್ನಿ, ಗಿರೀಶ್ ಮಟ್ಟಣ್ಣನವರ್ ತಮ್ಮ ಸಂಗಡಿಗರ ಜೊತೆ ಖಾಸಗಿ ವಾಹನದಲ್ಲಿ ಉಜಿರೆಗೆ ತೆರಳಿದರು. ಅವರಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.