ನಮ್ಮ ಪಾಕಿಸ್ತಾನ ಅನ್ನೋದನ್ನ ಸಹಿಸಿಕೊಳ್ಳಲ್ಲ

| Published : May 23 2025, 12:34 AM IST

ನಮ್ಮ ಪಾಕಿಸ್ತಾನ ಅನ್ನೋದನ್ನ ಸಹಿಸಿಕೊಳ್ಳಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನ ಎಲ್ಲಾ ನಾಯಕರು, ನೆಂಟರು ಪಾಕಿಸ್ತಾನದಲ್ಲಿ ಇದ್ಹಂಗೆ ಕಾಣಿಸ್ತಾರೆ, ಅದಕ್ಕಾಗಿ ನಮ್ಮ ಪಾಕಿಸ್ತಾನ ಎಂದು ಸಂಶೋಧನೆ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಮ್ಮ ಪಾಕಿಸ್ತಾನ ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನಾಚಿಕೆಯಾಗಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಾಕಿಸ್ಥಾನ ಎಂಬ ಭಾಷಣಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ಎಲ್ಲಾ ನಾಯಕರು, ನೆಂಟರು ಪಾಕಿಸ್ತಾನದಲ್ಲಿ ಇದ್ಹಂಗೆ ಕಾಣಿಸ್ತಾರೆ, ಅದಕ್ಕಾಗಿ ನಮ್ಮ ಪಾಕಿಸ್ತಾನ ಎಂದು ಸಂಶೋಧನೆ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಮ್ಮ ವೈರಿ ರಾಷ್ಟ್ರ, ನಮ್ಮ ಶತ್ರುಗಳ ಬಗ್ಗೆ ಯಾವ ಭಾಷೆ ಬಳಸಬೇಕು. ಅದೇ ಶಬ್ಧದಲ್ಲಿ ಮಾತಾಡಾಬೇಕು. ಅದನ್ನೇ ಹೇಳೋದಕ್ಕೆ ಅವರಿಗೆ ನಾಚಿಕೆ ಆಗಬೇಕು. ನಮ್ಮ ಪಾಕಿಸ್ತಾನ ಅಂತ ಯಾರೂ ಕೂಡಾ ಹೇಳಬಾರದು ಎಂದ ಅವರು, ಸ್ವಾತಂತ್ರ್ಯ ಬಂದ 1947ರ ವರ್ಷದಿಂದಲೂ ಅವರ ಜೊತೆ ಯುದ್ಧ ಮಾಡ್ತಾ ಬಂದಿದ್ದೇವೆ. ನಮಗೆ ಪಾಕಿಸ್ತಾನದಿಂದ ಸಾಕಷ್ಟು ನಷ್ಟವಾಗಿದೆ. ಇವತ್ತಿಗೂ ಕೂಡ ಪಾಕಿಸ್ತಾನ ಉಗ್ರರನ್ನು ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಾಕಿಸ್ತಾನ ಅನ್ನೋದನ್ನ ನಾನು ಖಂಡಿಸುತ್ತೇನೆ. ಅದನ್ನು ನಾನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನದ ಎಲ್ಲಾ ನೆಂಟರು ಕಾಂಗ್ರೆಸ್‌ನಲ್ಲಿ ಇದ್ದಾರೆ ಅಂತಾ ಭಾವಿಸುತ್ತೇನೆ ಎಂದು ಕಾರಜೋಳ ಹೇಳಿದರು.

ಕಲಬುರ್ಗಿಯಲ್ಲಿ ಛಲವಾದಿ ನಾರಾಯಣಸ್ವಾಮಿಗೆ ಘೇರಾವ್ ಮಾಡಿರುವುದದನ್ನು ಖಂಡಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳಲ್ಲಿ ಟೀಕೆ ಟಿಪ್ಪಣೆ ಸಹಜ, ಅದನ್ನ ನಾವ್ಯಾರು ವೈಯಕ್ತಿಕವಾಗಿ ತಗೋಬಾರದು. ತಗೋಂಡು ಛಲವಾದಿ ನಾರಾಯಣ ಸ್ವಾಮೀಯವರ ಮೇಲೆ ಮಾಡಿದ ಹಲ್ಲೆ ಖಂಡಿಸುತ್ತೇನೆ ಎಂದರು. ಗೃಹ ಸಚಿವ ಪರಮೇಶ್ವರ ಅವರ ಸಂಸ್ಥೆಯ ಮೇಲೆ ನಡೆದ ಇಡಿ ದಾಳಿ ಪ್ರಸ್ತಾಪಿಸಿದ ಸಂಸದರು, ದಲಿತರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ಎಂಬ ಕೈ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಸ್ವಾತಂತ್ರ್ಯ ಭಾರತದಲ್ಲಿ ಅನೇಕ ಇಡೀ ಇಡಿ, ಐಟಿ ದಾಳಿಗಳಾಗಿವೆ. ಕಾಂಗ್ರೆಸ್ಸಿನ 60 ವರ್ಷದ ಆಳ್ವಿಕೆಯಲ್ಲಿ ನಡೆದ ಇಡಿ-ಐಟಿ ದಾಳಿಗಳನ್ನು ರಾಜಕೀಯ ಪ್ರೇರಿತ ಅನ್ನೋಕಾಗತ್ತಾ ಹೇಳಿ ನೋಡೋಣ. ಹಾಗಾದ್ರೆ ಅವರ ಕಾಲದಲ್ಲಿ ಆದದ್ದು ರಾಜಕೀಯ ಪ್ರೇರಿತನಾ? ಅದಕ್ಕೆ ಕಾಂಗ್ರೆಸ್ ನಾಯಕರು ಉತ್ತರ ಹೇಳಬೇಕಾಗುತ್ತೆ. ಐಟಿ ಒಂದು ಸ್ವತಂತ್ರ್ಯ ಇಲಾಖೆ ಅವರು ಸಂಶಯ ಬಂದಾಗ ದಾಳಿ ಮಾಡಿ ತಪಾಸನೆ ಮಾಡುವಂತ ಅಧಿಕಾರವಿದೆ ಎಂದ ಅವರು, ಸರಕಾರದ ಕಾನೂನು ರೀತಿಯಲ್ಲಿ ಯಾರು ಆಡಳಿತ ಮಾಡುತ್ತಾರೆ, ಟ್ಯಾಕ್ಸ್, ವ್ಯವಹಾರಗಳನ್ನು ಯಾರು ಚೊಕ್ಕಾಗಿ ತುಂಬುತ್ತಾರೆ ಅವರಿಗೆ ಯಾವುದೇ ಐಟಿ, ಇಡಿ ದಾಳಿಗಳಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.