ಸಾರಾಂಶ
ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚಿಂತಿಸಬೇಕಾಗಿಲ್ಲ, ಕಮಲವೇ ಅಭ್ಯರ್ಥಿ ಎಂದು ತಿಳಿಯಿರಿ. ನಮ್ಮ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವಂತ ಪ್ರಯತ್ನ ನಡೆದಿದೆ, ಇಂಥ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಬೇಕು.
ಕನ್ನಡಪ್ರಭ ವಾರ್ತೆ ದೇವನಹಳ್ಳಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಶೇ. ನೂರಕ್ಕೆ ನೂರರಷ್ಟು ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲುತ್ತದೆ. ಒಂದು ಸೀಟು ಸಹ ಕೈ ತಪ್ಪಬಾರದು ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಇಲ್ಲಿನ ಬಿಜೆಪಿ ಪಕ್ಷದ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿಯವರ ಮನಸಿನ ಭಾವನೆಗೆ ಸಹಮತ ವ್ಯಕ್ತಪಡಿಸುವ ಕಾರ್ಯವನ್ನು ದೇವೇಗೌಡರು ಮಾಡಿದರು, ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಿಗೆ ಸೇರಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಒಗೆಯಬೇಕು ಎಂದರು.
ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚಿಂತಿಸಬೇಕಾಗಿಲ್ಲ, ಕಮಲವೇ ಅಭ್ಯರ್ಥಿ ಎಂದು ತಿಳಿಯಿರಿ. ನಮ್ಮ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವಂತ ಪ್ರಯತ್ನ ನಡೆದಿದೆ, ಇಂಥ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯಬೇಕು. ಇಲ್ಲವಾದರೆ ದೇಶದ ಅಧಃ ಪತನವಾಗುತ್ತದೆ. ಈಗಾಗಲೇ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಕಾರ್ಯಾಲಯಗಳು ಆರಂಭಗೊಂಡಿವೆ, ಚುನಾವಣೆಗಳನ್ನು ಎದುರಿಸುವ ನಿಪುಣರು ನಮ್ಮಲ್ಲಿದ್ದಾರೆ ಎಂದು ತಿಳಿಸಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾ. 3 ನೇ ತಾರೀಖು ಬೈಕ್ ರ್‍ಯಾಲಿ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರಾದ ಡಾ. ಕೆ. ಸುಧಾಕರ್, ಎಂಟಿಬಿ ನಾಗರಾಜು, ಕಟ್ಟಾ ಸುಬ್ರಮಣ್ಯ ನಾಯ್ಡು, ದೊಡ್ಡಬಳ್ಳಾಪುರದ ಕೆ. ಎಂ. ಹನುಮಂತರಾಯಪ್ಪ, ಮಾಜಿ ಶಾಸಕರಾದ ಜಿ. ಚಂದ್ರಣ್ಣ, ಪಿಳ್ಳಮುನಿಶಾಮಪ್ಪ ಅಲ್ಲದೆ ಸ್ಥಳೀಯ ಮುಖಂಡರಾದ ವೇಣುಗೋಪಾಲ್, ಡಿ. ಎಸ್. ನಾಗರಾಜು, ಎಚ್.ಎಂ.ರವಿಕುಮಾರ್, ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಬಿಜೆಪಿ ನೂತನ ಕಚೇರಿ ಆರಂಭ ಸಮಾರಂಭಕ್ಕೆ ಶಾಸಕ ವಿಶ್ವನಾಥ್, ಅಲೋಕ್ ಕುಮಾರ್, ಎ.ವಿ. ನಾರಾಯಣಸ್ವಾಮಿ, ಶಾಸಕ ಧೀರಜ್ ಮುನಿರಾಜು , ಎ.ಪಿ. ರಂಗನಾಥ್ ಉಪಸ್ಥಿತರಿದ್ದರು.