ಸಾರಾಂಶ
ಗ್ರಾಮದಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ದೊರೆಯಬೇಕೆಂದರೆ ಗ್ರಾಮದ ಜನರ ಭಾವನೆಗಳು ಧಾರ್ಮಿಕತೆ ಕಡೆ ತಿರುಗಬೇಕು. ಮಠ, ಮಂದಿರ, ಗುಡಿ-ಗೋಪುರಗಳಿಂದ ಗ್ರಾಮಕ್ಕೆ ಒಳ್ಳೆಯ ಕಳೆ ಬರುತ್ತದೆ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಚನ್ನಗಿರಿಯಲ್ಲಿ ನುಡಿದಿದ್ದಾರೆ.
- ಎನ್.ಗಾಣದಕಟ್ಟೆಯಲ್ಲಿ ಕುಕ್ಕುವಾಡೇಶ್ವರಿ ದೇಗುಲ ಕಳಸಾರೋಹಣ - - - ಚನ್ನಗಿರಿ: ಗ್ರಾಮದಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ದೊರೆಯಬೇಕೆಂದರೆ ಗ್ರಾಮದ ಜನರ ಭಾವನೆಗಳು ಧಾರ್ಮಿಕತೆ ಕಡೆ ತಿರುಗಬೇಕು. ಮಠ, ಮಂದಿರ, ಗುಡಿ-ಗೋಪುರಗಳಿಂದ ಗ್ರಾಮಕ್ಕೆ ಒಳ್ಳೆಯ ಕಳೆ ಬರುತ್ತದೆ ಎಂದು ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಎನ್.ಗಾಣದಕಟ್ಟೆ ಗ್ರಾಮದ ಶ್ರೀ ಕುಕ್ಕುವಾಡೇಶ್ವರಿ ದೇವಾಲಯ ಕಳಸಾರೋಹಣ ನಡೆಸಿ, ಧಾರ್ಮಿಕ ಸಮಾರಂಭ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಹಣ ಇದ್ದರೆ ಜಗತ್ತಿನಲ್ಲಿರುವ ಎಲ್ಲ ವಸ್ತುಗಳನ್ನು ಖರೀದಿಸಬಹುದು. ಮಾನಸಿಕ ಆರೋಗ್ಯ, ನೆಮ್ಮದಿಗಳು ಇಲ್ಲದಿದ್ದರೆ, ಯಾವುದೇ ಸಕಲ ಸಂಪತ್ತುಗಳು ಇದ್ದರೂ ಅದೆಲ್ಲವು ಶೂನ್ಯಕ್ಕೆ ಸಮವಾಗುತ್ತದೆ. ಗ್ರಾಮದ ಜನರು ಪ್ರತಿದಿನ ದೇವಾಲಯಗಳಿಗೆ ಭೇಟಿ ನೀಡಿ, ದೇವರಲ್ಲಿ ಭಕ್ತಿ ಹೊಂದಬೇಕು. ಇದರಿಂದ ಜೀವನದಲ್ಲಿ ಸಕಲ ಸಂಪತ್ತುಗಳು ದೊರೆಯುತ್ತವೆ ಎಂದರು.ಗ್ರಾಮದ ಜನರೆಲ್ಲ ಸೇರಿ ದೇವಾಲಯ ನಿರ್ಮಿಸುತ್ತೀರಿ. ದೇವಾಲಯದಲ್ಲಿರುವ ದೇವರಿಗೆ ಬೆಳಗ್ಗೆ ಮತ್ತು ಸಂಜೆ ಪೂಜಾ ವಿಧಾನಗಳು ಕ್ರಮಬದ್ಧವಾಗಿ ನಡೆಯಬೇಕು. ದೇವಾಲಯದ ಸುತ್ತಮುತ್ತಲ ಪ್ರದೇಶಗಳು ಸ್ವಚ್ಛವಾಗಿರಬೇಕು ಎಂದು ತಿಳಿಸಿದರು.
ಕಳಸಾರೋಹಣ ನಿಮಿತ್ತವಾಗಿ ಶ್ರೀ ಕುಕ್ಕುವಾಡೇಶ್ವರಿ ದೇವಿಗೆ ಬೆಳಗ್ಗೆಯಿಂದಲೇ ಅಭಿಷೇಕ, ಹವನ, ಹೋಮ, ಹೂವಿನ ಅಲಂಕಾರಗಳನ್ನು ನೆರವೇರಿಸಲಾಯಿತು. ಗ್ರಾಮ ತಳಿರು, ತೋರಣಗಳಿಂದ ಸಿಂಗಾರಗೊಂಡಿತ್ತು.ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಹಾಲೇಶ್ ನಾಯ್ಕ್, ಉಪಾಧ್ಯಕ್ಷ ತ್ಯಾವರೆನಾಯ್ಕ್, ಮಂಜನಾಯ್ಕ್, ಚಂದ್ರನಾಯ್ಕ್, ಜಯನಾಯ್ಕ್, ಈರನಾಯ್ಕ್, ಭಾನು ಪ್ರಕಾಶ್, ಗ್ರಾಮಸ್ಥರು ಭಾಗವಹಿಸಿದ್ದರು.
- - - -6ಕೆಸಿಎನ್ಜಿ1.ಜೆಪಿಜಿ:ಧಾರ್ಮಿಕ ಸಮಾರಂಭದಲ್ಲಿ ಚನ್ನಗಿರಿ ಹಿರೇಮಠದ ಶ್ರೀ ಆಶೀರ್ವಚನ ನೀಡಿದರು.