ಕನ್ನಡಪ್ರಭ ವಾರ್ತೆ ಕಮತಗಿಮಾಜಿ ಸಚಿವೆ ಮತ್ತು ಹಿರಿಯ ನಟಿ ಹಾಗೂ ನೇಕಾರ ಸಮುದಾಯದ ನಾಯಕಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನೇಕಾರ ಸಮುದಾಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ ಕಮತಗಿ

ಮಾಜಿ ಸಚಿವೆ ಮತ್ತು ಹಿರಿಯ ನಟಿ ಹಾಗೂ ನೇಕಾರ ಸಮುದಾಯದ ನಾಯಕಿ ಹಾಗೂ ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನೇಕಾರ ಸಮುದಾಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನೇಕಾರ ಸಮುದಾಯದ ಯುವ ಮುಖಂಡ ವಿಜಯಕುಮಾರ ಭಾಪ್ರಿ, ನೇಕಾರ ಸಮುದಾಯವು ರಾಜ್ಯದಲ್ಲಿ ಗಣನೀಯ ಜನಸಂಖ್ಯೆ ಹೊಂದಿದ್ದು, ತಮಗೆ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂಬುದು ಅವರ ಪ್ರಮುಖ ಬೇಡಿಕೆಯಾಗಿದೆ. ಹೀಗಾಗಿ ಹಿಂದುಳಿದ ನೇಕಾರ ಸಮುದಾಯದ ಉಮಾಶ್ರೀ ಅವರು ಈ ಹಿಂದೆ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ನೇಕಾರ ಸಮುದಾಯ ಸೇರಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಅವರ ಹಕ್ಕುಗಳಿಗಾಗಿ ಉಮಾಶ್ರೀ ಅವರು ಧ್ವನಿಯಾಗಬಲ್ಲರು ಎಂಬುದು ಸಮುದಾಯದ ಮುಖಂಡರ ಅಭಿಪ್ರಾಯವಾಗಿದೆ. ಈ ಹಿಂದೆ ಸಚಿವರಾಗಿ ನಿಭಾಯಿಸಿದ ಕಾರ್ಯಕ್ಕೆ ಅಂದಿನ ಕೇಂದ್ರ ಸರ್ಕಾರದ ಪ್ರಶಂಸೆಗೆ ಉಮಾಶ್ರೀ ಅವರ ಹೆಸರನ್ನು 2ನೇ ಪಟ್ಟಿಯಲ್ಲಿ ಪ್ರಮುಖ ಇಲಾಖೆಯ ಸಚಿವ ಸ್ಥಾನಕ್ಕೆ ಎಐಸಿಸಿ ಸೇರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಪರಿಗಣಿಸಬೇಕೆಂದು ರಾಜ್ಯ ನೇಕಾರ ಸಮುದಾಯಗಳ ಯುವ ಮುಖಂಡ ವಿಜಯಕುಮಾರ ಭಾಪ್ರಿ ಒತ್ತಾಯಿಸಿದ್ದಾರೆ.