ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿವಿದ್ಯುತ್ ಚಾಲಿತ ಮಗ್ಗಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿರುವ ಹೆಸ್ಕಾಂ ಅಧಿಕಾರಿಗಳ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ನೇಕಾರರ ಹೆಚ್ಚುವರಿ ಬಾಕಿ ವಿದ್ಯುತ್ ಬಿಲ್ ಸರ್ಕಾರ ಭರಿಸುವುದು. ಕಟ್ಟಡ ಕಾರ್ಮಿಕ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ನೇಕಾರರು ಮಿನಿವಿಧಾನಸೌಧದ ಎದರು ಪ್ರತಿಭಟನೆ ನಡೆಸಿ, 20 ಎಚ್‌ಪಿ ವರೆಗೆ ವಿದ್ಯುತ್ ಸಂಪರ್ಕ ಹೊಂದಿರುವ ನೇಕಾರರಿಗೆ 500 ಯೂನಿಟ್ ಉಚಿತ, ಹೆಚ್ಚುವರಿ ಬಳಕೆಯ ಯೂನಿಟಗೆ ₹1.25 ರೂ ವಿಧಿಸಬೇಕು ಎಂದು ಒತ್ತಾಯಿಸಿದರು. ತಮಿಳುನಾಡಿನ ಸರ್ಕಾರ ಕೈಮಗ್ಗ ನೇಕಾರರಿಗೆ ಜಾರಿಗೆ ತಂದಿರುವ ಯೋಜನೆಯಂತೆ ಕರ್ನಾಟಕದಲ್ಲೂ ಯೋಜನೆ ರೂಪಿಸುವಂತೆ ಒತ್ತಾಯಿಸಿದರು. ಸಾಲದ ಹೊರೆಯಿಂದ ರಾಜ್ಯದಲ್ಲಿ 47 ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದರು. ವೃತಿ ಪರ ನೇಕಾರರ 5-6 ತಿಂಗಳಿನ ಬಾಕಿ ವಿದ್ಯುತ್ ಬಿಲ್‌ನ್ನು ಸರ್ಕಾರವೇ ಭರಿಸಿಬೇಕು. ಸಹಕಾರಿ ಸಂಘ ರಾಷ್ಟ್ರೀಕೃತ ಬ್ಯಾಂಕಗಳಲ್ಲಿನ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಯುವರಾಜ ಮೋರೆ, ಅರ್ಜುನ ಕುಂಬಾರ, ಈರಗೊಂಡ ಜಿಗರೆ, ಸಂದೀಪ ಮಾನೆ, ಬಾಲಾಜಿ ಮಾನೆ, ಪ್ರಲಾದ ಡೋಣೆವಾಡೆ, ಸೋಮನಾಥ ಪರಕಾಳೆ, ಅಣ್ಣಾಸೋ ನಾಗರಾಳೆ, ಭೀಮರಾವ ಖೋತ, ರಾಜೇಂದ್ರ ಬೇನ್ನಾಡೆ, ಅಣ್ಣಾಸಾಹೇಬ ವರೂಟೆ ಇದ್ದರು.