ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಅಥಣಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು. ಅಥಣಿ ಸಿದ್ದೇಶ್ವರ ದೇವಸ್ಥಾನದ ಹತ್ತಿರದ ನಾಗ ಮಂದಿರದಲ್ಲಿ ನಾಗದೇವತೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಹಾಲು ಎರೆಯುವ ಮೂಲಕ ಮಹಿಳೆಯರು ಮಕ್ಕಳು ಪೂಜೆ ಸಲ್ಲಿಸಿದರು. ಹೊಸ ಉಡುಗೆಗಳನ್ನು ತೊಟ್ಟು ನಾಗ ದೇವರಿಗೆ ಸಂಪ್ರದಾಯದಂತೆ ಹಾಲೆರೆದು, ಎಳ್ಳು, ಉಂಡಿ, ಕಡುಬು, ಹೋಳಿಗೆ ತಯಾರಿಸಿ ನೈವೇದ್ಯ ಸಮರ್ಪಿಸಿದರು.
ಕನ್ನಡಪ್ರಭ ವಾರ್ತೆ ಅಥಣಿ
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಅಥಣಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು. ಅಥಣಿ ಸಿದ್ದೇಶ್ವರ ದೇವಸ್ಥಾನದ ಹತ್ತಿರದ ನಾಗ ಮಂದಿರದಲ್ಲಿ ನಾಗದೇವತೆಗೆ ವಿಶೇಷ ಪೂಜೆ, ರುದ್ರಾಭಿಷೇಕ, ಹಾಲು ಎರೆಯುವ ಮೂಲಕ ಮಹಿಳೆಯರು ಮಕ್ಕಳು ಪೂಜೆ ಸಲ್ಲಿಸಿದರು. ಹೊಸ ಉಡುಗೆಗಳನ್ನು ತೊಟ್ಟು ನಾಗ ದೇವರಿಗೆ ಸಂಪ್ರದಾಯದಂತೆ ಹಾಲೆರೆದು, ಎಳ್ಳು, ಉಂಡಿ, ಕಡುಬು, ಹೋಳಿಗೆ ತಯಾರಿಸಿ ನೈವೇದ್ಯ ಸಮರ್ಪಿಸಿದರು. ಪಟ್ಟಣದ ಶಿವಯೋಗಿ ವೃತ್ತದಲ್ಲಿರುವ ನಾಗದೇವತಾ ಮಂದಿರದಲ್ಲಿ ವಿಶೇಷ ಪೂಜೆ, ಅಭಿಷೇಕ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಮತ್ತು ರಾತ್ರಿ ಮನೋರಂಜನೆ ನಡೆದವು.ಜೋಕಾಲಿ ಸಂಭ್ರಮ: ಪಂಚಮಿ ಹಬ್ಬದ ಸಂಕೇತವಾದ ಜೋಕಾಲಿಯನ್ನು ಎತ್ತರದ ಗಿಡಗಳಿಗೆ ಮತ್ತು ಕಂಬಗಳಿಗೆ ಕಟ್ಟಲಾಗಿದ್ದು, ಜೋಕಾಲಿಯನ್ನು ಜೀಕುವ ಮೂಲಕ ಮಹಿಳೆಯರು ಮಕ್ಕಳು, ಯುವಕರು ಸಂಭ್ರಮಿಸಿದರು. ಯುವಕರು ಜೋಕಾಲಿ ಜೀಕುವುದು, ಗಾಳಿಪಟ ಹಾರಿಸುವುದು, ದೂರಕ್ಕೆ ಲಿಂಬೆಹಣ್ಣು ಎಸೆಯುವುದು, ಕಣ್ಣು ಕಟ್ಟಿಕೊಂಡು ಗುರುತು ಪಡಿಸಿದ ಸ್ಥಳದವರೆಗೆ ನಡೆಯುವುದು ಮುಂತಾದ ಮನರಂಜನ ಆಟಗಳನ್ನು ಆಡುವ ಮೂಲಕ ಪಂಚಮಿ ಹಬ್ಬವನ್ನು ಆಚರಿಸಿದರು.