ಸಾರಾಂಶ
ಬಬಲೇಶ್ವರ ತಾಲೂಕಿನ ಗುಣದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪುಷ್ಪಗುಚ್ಚ ನೀಡುವ ಮೂಲಕ ಸ್ವಾಗತ ಮಾಡಿಕೊಂಡು ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.
ವಿಜಯಪುರ: ಬಬಲೇಶ್ವರ ತಾಲೂಕಿನ ಗುಣದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪುಷ್ಪಗುಚ್ಚ ನೀಡುವ ಮೂಲಕ ಸ್ವಾಗತ ಮಾಡಿಕೊಂಡು ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.
ಶಾಲೆಯ ಕೊಠಡಿಗಳ ಪ್ರವೇಶ ಮುಖ್ಯ ದ್ವಾರಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ವಿಶೇಷವಾಗಿ ರಂಗೋಲಿ ಹಾಕಿ, ವಿದ್ಯಾರ್ಥಿಗಳ ಸ್ವಾಗತ ಮಾಡಿಕೊಂಡು ಶಾಲೆಯಲ್ಲಿ ಭೌತಿಕ ತರಗತಿ ಆರಂಭಿಸಲಾಯಿತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಪ್ಪ ಮಾಗಾರಿ, ಶರಣು ಸೊನ್ನದ, ಶಂಕ್ರಯ್ಯಾ ಮಠಪತಿ, ಭೀಮನಗೌಡ ಬಿರಾದಾರ, ಮುಖ್ಯ ಗುರುಗಳಾದ ಎಸ್.ಎ.ಬಗಲಿ, ಎಸ್.ಎಸ್.ಜತ್ತಿ, ಉರ್ದು ಶಾಲೆಯ ಗುರು ಮಾತೆಯರು ಗುಲಾಬಿ ಪುಷ್ಪ ನೀಡಿ ಸ್ವಾಗತಿಸಿದರು.ಶಿಕ್ಷಕಿಯರಾದ ಎಸ್.ಎಲ್.ಕುಳ್ಳೊಳ್ಳಿ, ಆರ್.ಎ.ಮುಲ್ಲಾ ಅವರು ಆರತಿ ಬೆಳಗಿ ಮಕ್ಕಳನ್ನು ಬರಮಾಡಿಕೊಂಡರು.
;Resize=(128,128))
;Resize=(128,128))
;Resize=(128,128))
;Resize=(128,128))