ಕನ್ನಡ ಜ್ಯೋತಿ ರಥಯಾತ್ರೆಗೆ ಸ್ವಾಗತ

| Published : Aug 17 2024, 12:46 AM IST

ಸಾರಾಂಶ

ಕರ್ನಾಟಕ ಸಂಭ್ರಮ-೫೦ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ಗಡಿ ಗ್ರಾಮ ರಾಮೇಗೌಡನದೊಡ್ಡಿ ಬಳಿ ತಹಸೀಲ್ದಾರ್ ನರಸಿಂಹಮೂರ್ತಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಕರ್ನಾಟಕ ಸಂಭ್ರಮ-೫೦ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ಗಡಿ ಗ್ರಾಮ ರಾಮೇಗೌಡನದೊಡ್ಡಿ ಬಳಿ ತಹಸೀಲ್ದಾರ್ ನರಸಿಂಹಮೂರ್ತಿ ಸ್ವಾಗತಿಸಿದರು. ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿ ಪೂಜೆ ಸಲ್ಲಿಸಿ ಮಾತನಾಡಿದ ತಹಸೀಲ್ದಾರ್ ನರಸಿಂಹಮೂರ್ತಿ ಅವರು, ತಾಲೂಕಿನ ಕೆಂಗಲ್‌ನ ಶ್ರೀ ಅಂಜನೇಯಸ್ವಾಮಿ ದೇವಾಲಯದಿಂದ ಕನ್ನಡ ಜ್ಯೋತಿ ರಥಯಾತ್ರೆಗೆ ಶನಿವಾರ ಬೆಳಗ್ಗೆ ೯.೩೦ಕ್ಕೆ ಚಾಲನೆ ನೀಡಲಾಗುವುದು. ನಂತರ ಬೆಂಗಳೂರು ಮೈಸೂರು ಹೆದ್ದಾರಿಯ ವಂದಾರಗುಪ್ಪೆ ಮೂಲಕ ಮೆರವಣಿಗೆ ಹೊರಟು ಪಟ್ಟಣದ ಶೇರುವ ಹೋಟಲ್ ಸಾತನೂರು ವೃತ್ತ, ಬಸ್ ನಿಲ್ದಾಣ ವೃತ್ತ, ಬಸ್ ನಿಲ್ದಾಣ ವೃತ್ತದಲ್ಲಿ ಬೀದಿಗಳಲ್ಲಿ ಸಂಚರಿಸಿ, ಬಿ.ಎಂ.ರಸ್ತೆ ಮೂಲಕ ತಾಲೂಕಿನ ಗಡಿ ಕೋಲೂರು ಗ್ರಾಮದವರಗೆ ಕನ್ನಡ ಜ್ಯೋತಿ ರಥಯಾತ್ರೆಯನ್ನು ಬೀಳ್ಕೋಡಲಾಗುತ್ತದೆ ಎಂದು ತಿಳಿಸಿದರು. ತಾಪಂ ಇಒ ಸಂದೀಪ್, ಬಿಇಒ ರಾಮಲಿಂಗಯ್ಯ, ಬಿಆರ್‌ಸಿಸಿ ಅಧಿಕಾರಿ ಸಿ.ರಾಜಶೇಖರ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಅಕ್ಷರದಾಸೋಹದ ಸಿದ್ದರಾಜು, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ತಾಲೂಕು ಕಸಾಪ ಕಾರ್ಯದರ್ಶಿ ರಾಮಕೃಷ್ಣಯ್ಯ, ಸಿಂಗರಾಜಿಪುರ ಗ್ರಾಪಂ ಅಧ್ಯಕ್ಷ ಎಚ್.ಬಿ. ಬೀರೇಶ್, ಆರ್‌ಐ ವೀರೇಶ್, ಪೊಲೀಸ್ ಇಲಾಖೆಯ ಪುಟ್ಟಸ್ವಾಮಿ, ಕಾರ್ಯದರ್ಶಿ ಯೋಶೋಧರ, ನಿವೃತ್ತ ಪಿಎಸ್‌ಇ ಶಿವರುದ್ರೇಗೌಡ ಉಪಸ್ಥಿತರಿದ್ದರು.

ಪೊಟೋ೧೬ಸಿಪಿಟಿ1: ಚನ್ನಪಟ್ಟಣ ತಾಲೂಕಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಗಡಿ ಗ್ರಾಮ ರಾಮೇಗೌಡನದೊಡ್ಡಿ ಬಳಿ ತಹಸೀಲ್ದಾರ್ ನರಸಿಂಹಮೂರ್ತಿ ಸ್ವಾಗತಿಸಿದರು.